ನೋಂದಣಿ ಅಭಿಯಾನ ಯಶಸ್ವಿಗೆ ಕರೆ

ವಿಜಯವಾಣಿ ಸುದ್ದಿಜಾಲ ಯಾದಗಿರಿ
ಲೋಕಸಭೆ ಚುನಾವಣೆ ನಿಮಿತ್ತ ಜಿಲ್ಲಾದ್ಯಂತ ಸ್ಥಾಪಿಸಿರುವ ಒಟ್ಟು 1,135 ಮತಗಟ್ಟೆಗಳಲ್ಲಿ ಫೆಬ್ರುವರಿ 23, 24 ಹಾಗೂ ಮಾಚರ್್ 2, 3ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣೆ ನಿಮಿತ್ತ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನೋಂದಣಿ ಅಭಿಯಾನದಲ್ಲಿ 18-19 ಹಾಗೂ 19ಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲ ಅರ್ಹ ಯುವಕ-ಯುವತಿಯರು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಉಳಿದ ಅರ್ಹ ಮತದಾರರು ಹಾಗೂ ಅಂಗವಿಕಲ ಮತದಾರರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಹೆಸರು ಸೇರ್ಪಡೆಗೆ ನಿಗದಿಪಡಿಸಿದ ನಮೂನೆ-6ರಲ್ಲಿ ಭತರ್ಿ ಮಾಡಿ, ಜನನ ಪ್ರಮಾಣಪತ್ರ, ವಾಸಸ್ಥಳದ ದಾಖಲೆ, ಪಡಿತರ ಚೀಟಿ, ಆಧಾರ್ ಕಾಡರ್್ ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ತಾವು ವಾಸಿಸುವ ವ್ಯಾಪ್ತಿಗೆ ಒಳಪಡುವ ತಾಲ್ಲೂಕು, ಪಟ್ಟಣ, ಗ್ರಾಮದ ವಾಡರ್್ನ ಮತಗಟ್ಟೆಯ ಅಧಿಕಾರಿ ಅಥವಾ ತಾಲ್ಲೂಕಿನ ತಹಶೀಲ್ದಾರ್ ಕಾಯರ್ಾಲಯದ ಚುನಾವಣಾ ಶಾಖೆಯಲ್ಲಿ ಕೂಡ ಅಜರ್ಿ ಸಲ್ಲಿಸಬಹುದು ಎಂದು ತಿಳಿಸಿದರು.

15,291 ಯುವ ಮತದಾರರು: ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಅಳವಡಿಸುವ ಕಾರ್ಯ ಶೇ.99.98ರಷ್ಟು ಪೂರ್ಣಗೊಂಡಿದೆ. ಕಳೆದ ಜನವರಿ 16ರಂತೆ ಜಿಲ್ಲೆಯಲ್ಲಿ 15,291 ಯುವ ಮತದಾರರಿದ್ದಾರೆ. ಮತದಾರರ ಸೇರ್ಪಡೆಗಾಗಿ ಜನವರಿ 16ರ ನಂತರ ಇಲ್ಲಿಯವರೆಗೆ 6,507 ಅಜರ್ಿಗಳು ಬಂದಿವೆ. ಮತದಾರರ ಸೇರ್ಪಡೆ ಮತ್ತು ಪರಿಷ್ಕರಣೆ ನಿರಂತರವಾಗಿರುತ್ತದೆ. ಆದ್ದರಿಂದ ಇನ್ನೂ ಹೆಸರು ನೋಂದಾಯಿಸದ ಮತದಾರರ ವಿವರವನ್ನು ರಾಜಕೀಯ ಪಕ್ಷಗಳ ಮುಖಂಡರು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಗಮನಕ್ಕೆ ತರಬಹುದಾಗಿದೆ ಎಂದರು.

ಜಿಪಂ ಸಿಇಒ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಕೇವಲ ಚುನಾವಣಾ ಗುರುತಿನ ಚೀಟಿ ಹೊಂದಿದ್ದ ಮಾತ್ರಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎಂದು ಸಾರ್ವಜನಿಕರು ಭಾವಿಸಬಾರದು. ಪ್ರಸ್ತುತ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರದೊಂದಿಗೆ ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್) ಬಳಕೆ ಮಾಡುತ್ತಿದೆ. ಬ್ಯಾಲೆಟ್ ಯುನಿಟ್ನಲ್ಲಿ ಮತ ಹಾಕಿದ ತಕ್ಷಣ ಯಾವ ಅಭ್ಯಥರ್ಿಗೆ ಮತ ಹೋದ ಬಗ್ಗೆ ವಿವಿ ಪ್ಯಾಟ್ನಲ್ಲಿ ಚುನಾವಣಾ ಅಭ್ಯರ್ಥಿಯ ವಿವರ ತೋರಿಸುವ ಮೂಲಕ ಖಾತ್ರಿಪಡಿಸುತ್ತದೆ. ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿ ಚುನಾವಣಾ ಸಿಬ್ಬಂದಿ, ರಾಜಕೀಯ ಮುಖಂಡರು ಹಾಗೂ ಮತದಾರರಿಗೆ ಮಾದರಿ ಮತದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜಕೀಯ ಮುಖಂಡರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಚುನಾವಣಾ ತಹಶೀಲ್ದಾರ್ ಅರುಣಕುಮಾರ ಕುಲಕಣರ್ಿ, ಚುನಾವಣೆ ಶಾಖೆಯ ಶಿರಸ್ತೆದಾರ್ ಪರಶುರಾಮ, ಆಲಂಭಾಷಾ, ಶಿಲ್ಪಾ, ಖಲೀಲ್ಸಾಬ್ ಹಾಗೂ ಜೆಡಿಎಸ್ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಶಾಂತಪ್ಪ ಡಿ.ಜಾಧವ್, ಬಿಜೆಪಿ ಜಿಲ್ಲಾ ಘಟಕದ ಕಾರ್ಯದಶರ್ಿ ಶಿವರಾಜ ಜಕಾತಿ, ಕಾಂಗ್ರೆಸ್ ಪಕ್ಷದ ಶರಣಪ್ಪ ಎಂ.ಕೂಲೂರ ಇದ್ದರು

1950 ಸಹಾಯವಾಣಿ ಕೇಂದ್ರ ಉದ್ಘಾಟನೆ: ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ಮತದಾರ, ಸಾರ್ವಜನಿಕರ ಅನುಕೂಲಕ್ಕಾಗಿ ಸ್ಥಾಪಿಸಿರುವ 1950 ಮತದಾರರ ಸಹಾಯವಾಣಿ- ಜಿಲ್ಲಾ ಸಂಪರ್ಕ ಕೇಂದ್ರವನ್ನು ಜಿಲಾಧಿಕಾರಿ ಎಂ.ಕೂಮರ್ಾರಾವ್ ಉದ್ಘಾಟಿಸಿದರು. 1950 ಸಹಾಯವಾಣಿಗೆ ಕರೆ ಮಾಡುವ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ಮತದಾರರು ತಮ್ಮ ಹೆಸರು, ಪಾಟರ್್ ನಂ., ಎಪಿಕ್ ನಂ, ಕ್ರ.ಸಂ ಗಳನ್ನು ಪರಿಶೀಲಿಸಿಕೊಳ್ಳಬಹುದು. ಹಾಗೂ ಹೊಸದಾಗಿ ನಮೂನೆ-6 ಸಲ್ಲಿಸಿರುವ ಅಜರ್ಿದಾರರು, ತಮ್ಮ ಅಜರ್ಿಯ ಸ್ಥಿತಿ ಕುರಿತು ಪರಿಶೀಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.