ನವದೆಹಲಿ: ನೋಟು ರದ್ಧತಿಯ ನಂತರ ಕಪ್ಪು ಹಣ ಬದಲಾವಣೆ ಮಾಡುತ್ತಿದ್ದ ಹವಾಲಾ ಡೀಲರ್ಗಳ ಮೇಲೆ ಜಾರಿ ನಿರ್ದೇಶನಾಲಯ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಬುಧವಾರ ದೇಶಾದ್ಯಂತ 40 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ.
ಜಾರಿ ನಿರ್ದೇಶನಾಲಯ ಸಿಬಿಐ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ನೆರವಿನೊಂದಿಗೆ ದಾಳಿ ನಡೆಸಿದೆ. ಕೋಲ್ಕತದ 6 ಸ್ಥಳಗಳು, ಒಡಿಶಾದ ಭುವನೇಶ್ವರ ಮತ್ತು ಪಾರಾದೀಪ್ಗಳಲ್ಲಿ ತಲಾ 2 ಸ್ಥಳಗಳು ಮತ್ತು ಗುವಾಹತಿ ಸೇರಿದಂತೆ ಈಶಾನ್ಯ ರಾಜ್ಯಗಳ ಹಲವು ಭಾಗಗಳಲ್ಲಿ ದಾಳಿ ನಡೆಸಲಾಗಿದೆ.
ಹವಾಲಾ ಜಾಲದ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡುವುದು ಮತ್ತು ಹಣ ಬದಲಾವಣೆ ಮಾಡುವುದರ ಮೇಲೆ ನಿರ್ದೇಶನಾಲಯ ನಿಗಾ ವಹಿಸಿದೆ. ಹಳೆಯ ಮತ್ತು ಹೊಸ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡು ಬದಲಾವಣೆ ಮಾಡಲಾಗುತ್ತಿದೆ. ಅಂತಹ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
– ಪಿಟಿಐ
(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)