25.3 C
Bangalore
Friday, December 13, 2019

ನೈಸ್ ರಸ್ತೆಗೆ ಶುಕ್ರದೆಸೆ

Latest News

ಪೌರತ್ವ ತಿದ್ದುಪಡಿ ಮಸೂದೆ ಸಿಂಧುತ್ವ ಪ್ರಶ್ನಿಸಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದ ಟಿಎಂಸಿ ಸಂಸದೆಗೆ ಸುಪ್ರೀಂಕೋರ್ಟ್​ನಲ್ಲಿ ಹಿನ್ನೆಡೆ!

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯ ಸಿಂಧುತ್ವವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್​ ಪಕ್ಷದ ಸಂಸದೆ ಮೋಹುವಾ ಮೊಯಿತ್ರಾ...

ಜೀತ ವಿಮುಕ್ತರಿಗೆ ಬಂಧಮುಕಗತ ಪ್ರಮಾಣಪತ್ರ ವಿತರಿಸಿದ ಎಸಿ ನವೀನ್ ಭಟ್

ಹೊಳೆನರಸೀಪುರ: ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಸಂಜೆ ಜೀತ ಮುಕ್ತ ಗೊಳಿಸಿದ 6 ಜನರಿಗೆ ಬಂಧಮುಕ್ತ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ನವೀನ್ ಭಟ್ ವಿತರಿಸಿದರು. ನಂತರ...

ಹಾಸನದವರಷ್ಟು ಬುದ್ಧಿ ನನಗೆ ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ ಅಂದ್ರು ಸಚಿವ ಜೆ.ಸಿ.ಮಾಧುಸ್ವಾಮಿ

ಚನ್ನರಾಯಪಟ್ಟಣ: ತಾಲೂಕಿನ ಏತನೀರಾವರಿ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವವರ ಪರಿಹಾರಕ್ಕೆ ಸುಮಾರು 200 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು. ತಾಲೂಕಿನ...

ಪತ್ನಿಗೆ ಈರುಳ್ಳಿ ಕಿವಿಯೋಲೆ ತಂದುಕೊಟ್ಟ ಪ್ರಖ್ಯಾತ ನಟನ್ಯಾರು: ಕಾಮಿಡಿಯಾದ್ರೂ ಇದರಲ್ಲಿದೆ ಮನಮುಟ್ಟುವ ಸಂದೇಶ!

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ದೇಶದಲ್ಲಿ ಏನೇ ಬೆಳವಣಿಗೆಯಾದರೂ ಜಾಲತಾಣದಲ್ಲಿ ಪ್ರತಿಕ್ರಿಯೆ...

ಮತ್ತೊಮ್ಮೆ, ‘ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಗುರುಗಳು’ ಎಂದ ರಮೇಶ್​ ಜಾರಕಿಹೊಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ನಮ್ಮ ಗುರುಗಳು ಎಂದು ಶಾಸಕ ರಮೇಶ್​ ಜಾರಕಿಹೊಳಿ ಪುನರುಚ್ಚಾರ ಮಾಡಿದ್ದಾರೆ. ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ...

‘ನೈಸ್’ ನಿರ್ವಿುಸಿರುವ ವರ್ತಲ ರಸ್ತೆಗಳು ವಾಣಿಜ್ಯ ಚಟುವಟಿಕೆಗಳಿಗೆ ರಹದಾರಿಯಾಗಿವೆ. ಬೃಹತ್ ವಾಣಿಜ್ಯ ಉದ್ದಿಮೆಗಳ ಬೆಳವಣಿಗೆಗೆ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಈ ಬಗ್ಗೆ ಸರ್ವೆ ಮಾಡಿರುವ ‘99 ಎಕರ್ಸ್ ಡಾಟ್ ಕಾಮ್ ವೆಬ್​ಸೈಟ್, ನೈಸ್ ರಸ್ತೆ ಸುತ್ತಮುತ್ತಲಿನ ಭೂಪ್ರದೇಶ ಬೆಲೆ ಮುಂದಿನ ದಿನಗಳಲ್ಲಿ ಗಗನಮುಖಿಯಾಗಲಿದೆ ಎಂದು ಭವಿಷ್ಯ ನುಡಿದಿದೆ.

|ಶಿವರಾಜ ಎಂ. ಬೆಂಗಳೂರು

ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನ ಹಲವು ಕಡೆಗಳಲ್ಲಿ ಕಾಡು ಮೇಡಿನಂತಿದ್ದ ಪ್ರದೇಶಗಳಲ್ಲಿ ಈಗ ನಂದಿ ಇನ್​ಫ್ರಾಸ್ಟ್ರಕ್ಚರ್ ಎಕ್ಸ್​ಪ್ರೆಸ್ ಕಾರಿಡಾರ್ (‘ನೈಸ್’) ರಸ್ತೆ ರೂಪುಗೊಂಡಿದೆ. ಇದರಿಂದಾಗಿ, ಬೃಹತ್ ಬಡಾವಣೆ, ಐಟಿ ಬಿಟಿ ಕಂಪನಿ, ದೊಡ್ಡ ಮಟ್ಟದ ಕಾರ್ಖಾನೆ ಹಾಗೂ ಗಾರ್ವೆಂಟ್ಸ್ ನಿರ್ವಣಕ್ಕೆ ಈ ರಸ್ತೆಗಳು ನಾಂದಿಹಾಡಿವೆ. ‘ಐಟಿ ಹಬ್’ ಎಂದೇ ಗುರುತಿಸಿಕೊಂಡಿರುವ ಸಿಲಿಕಾನ್ ಸಿಟಿಗೆ ನೈಸ್​ರಸ್ತೆ ಸಂಪರ್ಕ ವರದಾನವಾಗಿದೆ. ಉದ್ಯೋಗ ಸೃಷ್ಟಿ ಅಧಿಕಗೊಂಡ ಹಿನ್ನೆಲೆಯಲ್ಲಿ ಈ ರಸ್ತೆ ಬಳಕೆಯೂ ಹೆಚ್ಚಾಗಿದೆ.

ಮೈಸೂರು-ಬೆಂಗಳೂರು ಇನ್​ಫ್ರಾಸ್ಟ್ರಕ್ಚರ್ ಕಾರಿಡಾರ್​ನಿಂದ (ಬಿಎಂಐಸಿ) ಸುತ್ತುವರಿದಿರುವ ಪ್ರದೇಶ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚು ಪ್ರಶಸ್ತವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ‘ನೈಸ್’ ರಸ್ತೆ ನಾಲ್ಕರಿಂದ ಆರು ಪಥವಿದ್ದು 41 ಕಿ.ಮೀ. ಸಮಾನಾಂತರ ರಸ್ತೆ, 12 ಕಿ.ಮೀ

ಎಕ್ಸ್​ಪ್ರೆಸ್ ಹೈವೆ ಹಾಗೂ 9.1 ಕಿ.ಮೀ ಲಿಂಕ್ ರಸ್ತೆಯನ್ನು ಒಳಗೊಂಡಿದೆ. ನಗರ ಭಾಗದಲ್ಲಿ ಸಂಚಾರ ದಟ್ಟಣೆ ಅವಧಿಗಳಲ್ಲಿ ಕೇವಲ 10 ಕಿ.ಮೀ ಸಾಗಲು ಗಂಟೆಗಟ್ಟಲೆ ಟ್ರಾಫಿಕ್​ನಲ್ಲಿ ಬಸವಳಿಯುವ ಸ್ಥಿತಿ ಇದೆ. ಆದರೆ ಹೊಸೂರು ರಸ್ತೆಯಿಂದ ತುಮಕೂರು ರಸ್ತೆ ತಲುಪಲು ನೈಸ್ ರಸ್ತೆಯಲ್ಲಿ ಕೆಲವೇ ನಿಮಿಷಗಳು ಸಾಕು ಎಂಬುದು ಇಲ್ಲಿ ಓಡಾಡುವ ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ ಮತ್ತಿತರ ವಾಣಿಜ್ಯ ಕೇಂದ್ರಗಳಿರುವ ಭಾಗಗಳಿಗೆ ತಲುಪಲು ಈ ರಸ್ತೆಯ ಬಳಕೆ ಹೆಚ್ಚಾಗಿದೆ.

7 ಕಡೆ ಸಂಪರ್ಕ ರಸ್ತೆಗಳು

ನೈಸ್ ರಸ್ತೆಗಳು ಪ್ರಮುಖವಾಗಿ ಏಳು ಪ್ರಮುಖ ಪ್ರದೇಶಗಳನ್ನು ಸಂರ್ಪಸುತ್ತವೆ. ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ, ಬನಶಂಕರಿ 6ನೇ ಹಂತ (ಲಿಂಕ್ ರಸ್ತೆ), ಮೈಸೂರು ರಸ್ತೆಯ ಕೆಂಗೇರಿ, ಮಾಗಡಿ ರಸ್ತೆಯ ಎಂಬೆಸ್ಸಿ ಪಬ್ಲಿಕ್ ಶಾಲೆ, ಕನಕಪುರ ರಸ್ತೆ ಬಿಐಎಸ್​ಎಲ್ ಬಡಾವಣೆ, ಹೊಸೂರು ರಸ್ತೆ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಈ ರಸ್ತೆ ವರದಾನವಾಗಿದೆ. ಈ ಭಾಗಗಳಿಂದ ಐಟಿ ಕಂಪನಿಗಳಿಗೆ ಸಾಗಲು ಸುಲಭವಾಗಿರುವುದು ರಸ್ತೆಯ ಮಹತ್ವ ಹೆಚ್ಚಿಸಿದೆ.

ಬಾಡಿಗೆಯೂ ಕಮ್ಮಿ

ಮಾಗಡಿ ರಸ್ತೆಯ ಎಂಬೆಸ್ಸಿ ಶಾಲೆ ಬಳಿ ನೈಸ್ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದ ಸುತ್ತಮುತ್ತಲ ಪ್ರದೇಶ ಸಾಕಷ್ಟು ಹಿಂದುಳಿದಿದ್ದು, ಬಾಡಿಗೆ ಮನೆಗಳಿಗೆ ಬೇಡಿಕೆ ಕಮ್ಮಿ ಇದೆ. ಇದು ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಮತ್ತಿತರ ಕಡೆಗಳಲ್ಲಿ ಐಟಿಬಿಟಿ ಕಂಪನಿಗಳಿಗೆ ತೆರಳುವ ಉದ್ಯೋಗಿಗಳನ್ನು ಆಕರ್ಷಿಸುತ್ತಿದೆ. ಕಡಿಮೆ ದರ ಹಾಗೂ ಉತ್ತಮ ವಾತಾವರಣವಿರುವ ಈ ಪ್ರದೇಶದಲ್ಲಿ ಇತ್ತೀಚೆಗೆ ಉದ್ಯೋಗಿಗಳು ಬಾಡಿಗೆ ಮನೆ ಹುಡುಕಲು ಆಸಕ್ತಿ ತೋರಿಸುತ್ತಿದ್ದಾರೆ.

ಭೂಮಿಗೆ ಚಿನ್ನದ ಬೆಲೆ ನಿರೀಕ್ಷೆ

ಭೂ ಖರೀದಿಗೆ ಸರ್ಕಾರದ ಚಿಂತನೆ

ನಗರ ಭಾಗದಲ್ಲಿ ತುಂಡು ಭೂಮಿಯೂ ಖಾಲಿ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ವಾಣಿಜ್ಯ ಕೇಂದ್ರಗಳು, ಬೃಹತ್ ಕಾರ್ಖಾನೆಗಳ ನಿರ್ವಣಕ್ಕೆ ಸರ್ಕಾರ ಮುಂದಾಗಿದ್ದು, ನೈಸ್ ರಸ್ತೆ ಸಂಪರ್ಕ ಕಲ್ಪಿಸುವ ಸುತ್ತಮುತ್ತಲ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಖರೀದಿಗೆ ಚಿಂತನೆ ನಡೆಸಿದೆ. ಇತರ ಭಾಗಗಳಿಗೆ ಹೋಲಿಸಿದರೆ ನೈಸ್ ರಸ್ತೆ ಸಂಪರ್ಕ ಕಲ್ಪಿಸುವ ಆಸುಪಾಸಿನ ಭೂಮಿ ದರ ಕೈಗೆಟಕುವಂತಿದೆ. ಭವಿಷ್ಯದಲ್ಲಿ ಗಗನಮುಖಿಯಾಗಲಿರುವ ಭೂ ಮೌಲ್ಯವನ್ನು ಅಂದಾಜಿಸಿರುವ ಸರ್ಕಾರ, ಈಗಲೇ ಭೂ ಖರೀದಿಗೆ ಕೈಹಾಕುವ ಚಿಂತನೆ ನಡೆಸಿದೆ. ಈಗಾಗಲೇ ರಿಯಲ್ ಎಸ್ಟೇಟ್ ಉದ್ಯಮಿಗಳು, ಕಾಪೋರೇಟ್ ಕಂಪನಿಗಳು ಈ ಭಾಗಗಳಲ್ಲಿ ಭೂ ಖರೀದಿಗೆ ಮುಗಿಬಿದ್ದಿರುವುದರಿಂದ ಭವಿಷ್ಯದಲ್ಲಿ ಚಿನ್ನದ ಬೆಲೆ ಬರಲಿದೆ.

ಈಶಾನ್ಯ-ಆಗ್ನೇಯ ಭಾಗಗಳಿಗೆ ಬಂಪರ್

ಈಶಾನ್ಯ-ಆಗ್ನೇಯ ಭಾಗಗಳಿಗೆ ಹೋಲಿಸಿದರೆ ಉತ್ತರ ಭಾಗಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಇದೀಗ ನೈಸ್ ರಸ್ತೆ ಸಂಪರ್ಕದಿಂದಾಗಿ ಈಶಾನ್ಯ-ಆಗ್ನೇಯ ಭಾಗಗಳಿಗೆ ಶುಕ್ರದೆಸೆ ಆರಂಭವಾಗಿದೆ. ಸರ್ಜಾಪುರ ರಸ್ತೆ, ವೈಟ್​ಫೀಲ್ಡ್​ಗಳಂತೆ ತುಮಕೂರು ರಸ್ತೆ, ಕನಕಪುರ ರಸ್ತೆಗಳಲ್ಲೂ ಐಟಿ ಬಿಟಿ ಕಂಪನಿಗಳು, ಬೃಹತ್ ಕಾರ್ಖಾನೆಗಳು ತಲೆ ಎತ್ತುತ್ತಿವೆ, ಇದರ ಜತೆಗೆ ರಿಯಲ್ ಎಸ್ಟೇಟ್ ಉದ್ಯಮಕ್ಕೂ ವರದಾನವಾಗಿದ್ದು, ಅಪಾರ್ಟ್​ವೆುಂಟ್, ವಾಣಿಜ್ಯ ಸಂಕೀರ್ಣಗಳು ಮೇಲೇಳುತ್ತಿವೆ. ನೈಸ್ ರಸ್ತೆ ಸಂಪರ್ಕ ಕಲ್ಪಿಸುವ 7 ಪ್ರಮುಖ ಭಾಗಗಳಲ್ಲೂ ರಿಯಲ್​ಎಸ್ಟೇಟ್ ಉದ್ಯಮ ಸದ್ದು ಮಾಡುತ್ತಿದೆ. ಒಟ್ಟಾರೆ ನೈಸ್ ರಸ್ತೆಯ ನಿರ್ಮಾಣ ವಾಣಿಜ್ಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಭವಿಷ್ಯದಲ್ಲಿ ಈ ಭಾಗಗಳಿಗೆ ಚಿನ್ನದ ಬೆಲೆ ಬರಲಿದೆ ಎಂಬುದು ರಿಯಲ್ ಎಸ್ಟೇಟ್ ಉದ್ಯಮಗಳ ನಿರೀಕ್ಷೆಯಾಗಿದೆ.

ಸುಗಮ ಸಂಚಾರ

ನೈಸ್ ರಸ್ತೆಗಳಲ್ಲಿ ಯಾವುದೇ ಹಂಪ್, ಹಳ್ಳಕೊಳ್ಳಗಳು ಇರದ ಕಾರಣ, ಗಂಟೆಗೆ ಸರಾಸರಿ 60 ಕಿ.ಮೀ ಸುಲಭವಾಗಿ ಕ್ರಮಿಸಬಹುದು. ಈ ಹಿನ್ನೆಲೆಯಲ್ಲಿ ವಾಹನ ಸವಾರರು ನೈಸ್ ರಸ್ತೆಯಲ್ಲಿ ಸಂಚಾರಕ್ಕೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ನಗರದ ಟ್ರಾಫಿಕ್ ಜಂಜಾಟದಿಂದ ಬೇಸತ್ತ ಪ್ರಯಾಣಿಕರು ಈ ರಸ್ತೆಯನ್ನೇ ಹೆಚ್ಚು ಅವಲಂಬಿಸುತ್ತಿದ್ದಾರೆ.

ಎಂಎನ್​ಸಿ ಕಂಪನಿಗಳ ಕಣ್ಣು

ಬಾಷ್, ಎಚ್​ಪಿ, ವೇಲಾಂಕಣಿ ಟೆಕ್​ಪಾರ್ಕ್, ಎಚ್​ಸಿಎಲ್ ಲಿಮಿಟೆಡ್, ಟಯೋಟಾ ಕಿಲೋಸ್ಕರ್, ಟಾಟಾ ಮತ್ತಿತರ ಕಂಪನಿಗಳು ಈಗಾಗಲೇ ಈ ಭಾಗಗಳ ಮೇಲೆ ಕಣ್ಣಿಟ್ಟಿವೆ. ಈ ಹಿನ್ನೆಲೆಯಲ್ಲಿ ಐಟಿ ಬಿಟಿ ಕಂಪನಿಗಳ ಉದ್ಯೋಗಿಗಳು ಸಹ ನಿವೇಶನ ಖರೀದಿಗೆ ಮುಂದಾಗಿದ್ದಾರೆ. ಹೊಸ ಹೊಸ ಬಡಾವಣೆಗಳು ತಲೆಎತ್ತುತ್ತಿವೆ.

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...