Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ನೈಸರ್ಗಿಕ ವಿಧಾನದಲ್ಲಿ ಕಬ್ಬು ಕೃಷಿ

Monday, 09.07.2018, 3:01 AM       No Comments

| ಗಣೇಶ ಬಾನಪ್ಪನವರ್

ಕಬ್ಬಿನ ಬೇಸಾಯದಲ್ಲಿ ಸುಸ್ಥಿರ ಪದ್ಧತಿ ಅಳವಡಿಸಿಕೊಂಡು ಅಧಿಕ ಲಾಭ ಗಳಿಸುತ್ತಿರುವ ಅನೇಕ ರೈತರು ನಮ್ಮಲ್ಲಿದ್ದಾರೆ. ಅಂಥವರಲ್ಲಿ ಪಾಂಡವಪುರ ತಾಲೂಕು ಸುಂಕಾತೊಣ್ಣೂರು ಗ್ರಾಮದ ದೇವೇಗೌಡ ಒಬ್ಬರು. ದುಡಿಯುವ ಛಲ ಹೊಂದಿದ್ದರೆ ಯಾವುದೇ ಕೆಲಸವೂ ಕಷ್ಟ ಎನಿಸದು. ಧೃಡ ನಿರ್ಧಾರದಿಂದ ಮುನ್ನಡೆದಲ್ಲಿ ನಂಬಿದ ವೃತ್ತಿ ಎಂದಿಗೂ ಕೈಬಿಡುವುದಿಲ್ಲವೆಂದು ಕಳೆದ 5 ವರ್ಷಗಳಿಂದಲೂ ಸತತವಾಗಿ ನೈಸರ್ಗಿಕ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜೀವಾಮೃತ ಬಳಕೆ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ. ಕಬ್ಬಿನ ಬೆಳೆಯಲ್ಲಿ ಯಶಸ್ವಿಯಾಗಿದ್ದಾರೆ.

ನೈಸರ್ಗಿಕ ಕೃಷಿ ಮೂಲಕ ಕಬ್ಬು ಬೆಳೆದಿರುವ ದೇವೇಗೌಡ, ತಮ್ಮ 4 ಎಕರೆಯ ಜಮೀನು ಪೈಕಿ 2 ಎಕರೆ ಪ್ರದೇಶದಲ್ಲಿ ನಾಟಿಕಬ್ಬು ಬೆಳೆದಿದ್ದಾರೆ. ಕಬ್ಬಿನ ಜತೆಗೆ ಮಧ್ಯದ ಸಾಲಿನಲ್ಲಿ ದ್ವಿದಳ ಧಾನ್ಯ ಬೆಳೆದಿದ್ದಾರೆ. ವಿಶೇಷವೆಂದರೆ, ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ಕಬ್ಬಿಗಿಂತಲೂ ನೈಸರ್ಗಿಕ ಕೃಷಿಯಲ್ಲಿ ಬೆಳೆದ ಕಬ್ಬು ಹೆಚ್ಚು ದಪ್ಪವಾಗಿರುತ್ತದೆ. ಈ ಮೂಲಕ, ಈ ಬಾರಿ ಇವರು ಅಧಿಕ ಲಾಭಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ನೈಸರ್ಗಿಕ ಪ್ರಗತಿ ಬಂಧು ತಂಡ ರಚನೆ ಮಾಡಿಕೊಂಡಿರುವ ದೇವೇಗೌಡ ಅನ್ಯರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಬೆಳೆದ ಕಬ್ಬಿಗೆ ಸರಿಯಾಗಿ ಬೆಲೆ ಸಿಗದಿದ್ದರಿಂದ ಸಂಗಡಿಗರ ಜತೆ ಮನೆಯಲ್ಲೇ ಆಲೆಮನೆ ಸ್ಥಾಪನೆ ಮಾಡಿಕೊಂಡು ತಾವೇ ಬೆಲ್ಲ ತಯಾರಿಸಿ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ನೈಸರ್ಗಿಕ ಕೃಷಿ ಮಾಡುವಂತೆ ರೈತರ ಮನ ಒಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸುಂಕಾತೊಣ್ಣೂರು ಗ್ರಾಮವನ್ನು ಸಹಜ ಕೃಷಿ ಗ್ರಾಮ ವನ್ನಾಗಿ ಮಾಡುವ ಮಹದಾಸೆ ಹೊಂದಿದ್ದಾರೆ.

Leave a Reply

Your email address will not be published. Required fields are marked *

Back To Top