ಹೋಳಿ ಆಚರಣೆಯಲ್ಲಿ ನೈಸರ್ಗಿಕ ಬಣ್ಣ ಬಳಸಿ ಆರೋಗ್ಯ ರಕ್ಷಿಸಿಕೊಳ್ಳಲು ಸಲಹೆ

ಜೇವರ್ಗಿ: ಪ್ರತಿ ಮನುಷ್ಯನ ಆರೋಗ್ಯ ರಕ್ಷಣೆಗೆ ನೈಸರ್ಗಿಕ ಸಂಪತ್ತು ಮುಖ್ಯವಾಗಿದೆ. ನಾವೆಲ್ಲರೂ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಹೋಳಿ ಆಚರಣೆಯಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಬೇಕು ಎಂದು ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಸಲಹೆ ನೀಡಿದರು.

ಪಟ್ಟಣದ ಗುರುಕುಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನಿಂದ ಆಯೋಜಿಸಿದ್ದ ಸಾತ್ವಿಕ ಹೋಳಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೋಳಿ ಆಚರಣೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಪತಂಜಲಿ ಯೋಗ ಸಮಿತಿ ರಾಜ್ಯಾದ್ಯಂತ ನೈಸರ್ಗಿಕ ಬಣ್ಣಗಳನ್ನು ಬಳಸಿ ಸಾತ್ವಿಕ ಹೋಳಿ ಆಚರಿಸುವಂತೆ ಜನತೆಗೆ ಮನವಿ ಮಾಡಿದೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯಲ್ಲಿ ನೈಸರ್ಗಿಕ ಬಣ್ಣ ಬಳಸಿ ಹೋಳಿ ಆಚರಿಸಲಾಯಿತು. ಇದಕ್ಕು ಮುನ್ನ ಯೋಗ ಶಿಬಿರಾರ್ಥಿಗಳಿಗೆ ಯೋಗದ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಯಿತು.

ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಮಚ್ಚೇಂದ್ರನಾಥ ಮೂಲಗೆ, ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ, ಪ್ರಮುಖರಾ ಅನೀಲ ರಾಂಪುರ್, ಮಹಾಂತಯ್ಯ ಹಿರೇಮಠ, ಡಾ.ಪಿ.ಎಂ.ಮಠ, ಜಗನ್ನಾಥ ಇಮ್ಮಣ್ಣಿ, ವಿಜಯಕುಮಾರ ಪಾಟೀಲ್ ಸೇಡಂ, ಐ.ಎಸ್.ಹಿರೇಮಠ, ಬಸವರಾಜ ಹಡಪದ, ಸಿದ್ದು ಯಂಕಂಚಿ, ಮಲ್ಲಣ್ಣಗೌಡ ಕನ್ಯಕೋಳೂರ, ಅನೀಲ ಗುಡೂರ, ಜಗದೀಶ ಉಕ್ಕನಾಳ, ಕಾವೇರಿ ಕಟ್ಟಿಸಂಗಾವಿ, ಸುವಣರ್ಾ ಪಾಟೀಲ್, ರಾಜೇಶ್ವರಿ ಹಿರೇಗೌಡ, ಜಯಶ್ರೀ ದೇಸಾಯಿ, ಶರಣಮ್ಮ ಸ್ಥಾವರಮಠ, ನಿರ್ಮಲಾ ಪಲ್ಲೆದ್, ಸಂಗೀತಾ ಘಂಟಿ ಇತರರಿದ್ದರು.