ನೇಸರಗಿ ಕುವೆಂಪು ಶಾಲೆಗೆ ಮಂಕು

ಬಸವರಾಜ ಕಲಾದಗಿ ಬೈಲಹೊಂಗಲ, ಬೆಳಗಾವಿ: ತಾಲೂಕಿನ ನೇಸರಗಿಯ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ.
1863ರಲ್ಲಿ ಪ್ರಾರಂಭವಾದ ಈ ಶಾಲೆಯು ಸಾಕಷ್ಟು ವಿದ್ಯಾರ್ಥಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದೆ. ಆದರೆ, ಶಾಲೆಯ ಪರಿಸ್ಥಿತಿ ಗಮನಿಸಿದರೆ ಇದೇನು ಶಾಲೆಯೋ ಅಥವಾ ಹಾಳು ಕೊಂಪೆಯೋ ಎನ್ನುವಂತಾಗಿದೆ. ಕಸ, ಕಡ್ಡಿ ಬೆಳೆದು ನರಕಯಾತನೆ ಅನುಭವಿಸುತ್ತಿದೆ.

ಜಿಪಂನ ಆಗಿನ ಸಿಇಒ ಶಿವಲಿಂಗಮೂರ್ತಿ ಅಧ್ಯಕ್ಷ ದಿ.ಎಸ್.ಎ್.ದೊಡಗೌಡರ ಅವರ ಪ್ರಯತ್ನದಿಂದ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕುವೆಂಪು ಮಾದರಿ ಶಾಲೆಯಾಗಿ ಪರಿವರ್ತನೆಗೊಂಡಿತ್ತು.
11-3-2006ರಲ್ಲಿ ಜಿಲ್ಲಾಮಟ್ಟದಲ್ಲೇ ಏಕೈಕ ಕುವೆಂಪು ಮಾದರಿ ಶಾಲೆಯಾಗಿ ಉದ್ಘಾಟನೆಗೊಂಡಿತು. ಪ್ರಾರಂಭದಲ್ಲಿ ಶಾಲೆಗೆ ಮಂಜೂರಾದ ಹೊಲಿಗೆ ಕೌಶಲ ತರಬೇತಿ, ಸಂಗೀತ ಹಾಗೂ ಗಣಕ ಯಂತ್ರದ ಶಿಕ್ಷಕರ ಕೊರತೆಯಿಂದ ಸದ್ಯ ಹಲವಾರು ಕಂಪ್ಯೂಟರ್,

ಸಂಗೀತ ಪಾಠಶಾಲೆಯ ಸಲಕರಣೆಗಳು, ಹೊಲಿಗೆ ಯಂತ್ರಗಳು ಹಾಳಾಗಿವೆ. ಕ್ರೀಡಾ ಸಾಮಗ್ರಿಗಳು ಇಲ್ಲದೆ ಆಟೋಟಗಳಿಗೆ ಹಿನ್ನೆಡೆಯಾಗುತ್ತಿದೆ. ಶಾಲೆಯ ಹಲವು ಕೊಠಡಿಗಳು ಪಾಳು ಬಿದ್ದಿವೆ. ಅವುಗಳನ್ನು ಕೆಡವಿ ಮರು ನಿರ್ಮಾಣಕ್ಕೆ ಸರ್ಕಾರ ಕ್ರಮ ವಹಿಸಿಲ್ಲ. ಇಲ್ಲಿ 1ರಿಂದ 7ನೇ ತರಗವರೆಗೆ 475 ವಿದ್ಯಾರ್ಥಿಗಳಿದ್ದಾಗೆ. ಇಷ್ಟು ಮಕ್ಕಳಿಗೆ ಕೇವಲ 17 ಶಿಕ್ಷಕರು ಮಾತ್ರ ಇಲ್ಲಿದ್ದಾರೆ. ಶಾಲೆಯಲ್ಲಿ ಪ್ರಯೋಗಾಲಯ, ಗ್ರಂಥಾಲಯವಿದ್ದು ಅವುಗಳಿಗೆ ಉತ್ತೇಜನ ನೀಡಬೇಕಾಗಿದೆ.

ಶಾಲೆಯ ಛಾವಣಿ ಮೇಲಿನ ಹಂಚುಗಳು ಒಡೆದು ಮಕ್ಕಳು ಆತಂಕದಲ್ಲೇ ಪಾಠ ಕೇಳುವಂತಾಗಿದೆ. ಶಾಲೆಯಲ್ಲಿನ ಬೋರ್‌ವೆಲ್ ನಿಷ್ಕ್ರಿಯಗೊಂಡಿದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪಾಠದ ಹಲಗೆಗಳು ಹದಗೆಟ್ಟು ಹೋಗಿವೆ. ಶೌಚಗೃಹ ಸ್ಥಿತಿ ಅಧೋಗತಿಯಾಗಿವೆ.

ಆವರಣದಲ್ಲಿ ಅನ್ನಪೂರ್ಣೇಶ್ವರಿ ಕಟ್ಟಡ ಬೇಗನೆ ಪೂರ್ಣವಾಗಬೇಕಿದೆ. ರಾತ್ರಿಯಾಯಿತೆಂದರೆ ಪುಂಡಪೋಕರಿಗಳ ಹಾವಳಿ ಆವರಣದಲ್ಲಿ ಹೆಚ್ಚುತ್ತಿದ್ದು ಭದ್ರತೆ ಒದಗಿಸಬೇಕಾಗಿದೆ. ಶಾಲಾ ಛಾವಣಿಗೆ ಕೂಡಲೇ ಪತ್ರಾಸ್ ಹಾಕಬೇಕಿದೆ. 2007-08ನೇ ಸಾಲಿನಲ್ಲಿ ಕಲಬುರಗಿಯಲ್ಲಿ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಈ ಶಾಲೆಯ ಶಿಕ್ಷಣದ ಗುಣಮಟ್ಟ ಮನಗಂಡು ಮಲೆನಾಡ ಗಾಂಧಿ ಎಚ್.ಜಿ. ಗೋವಿಂದೇಗೌಡ ಹೆಸರಿನ ಬೆಳಗಾವಿ ವಿಭಾಗ ಮಟ್ಟದ ಉತ್ತಮ ಶಾಲಾ ಪ್ರಶಸ್ತಿ ನೀಡಿ ಗೌರವಿಸಿತ್ತು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…