ನೇತ್ರದಾನ ವಾಗ್ದಾನ ಅಭಿಯಾನಕ್ಕೆ ಚಾಲನೆ

ಸವಣೂರ: ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೇತ್ರದಾನ ಸೇರಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಬಿಇಒ ಐ.ಬಿ. ಬೆನಕನಕೊಪ್ಪ ಹೇಳಿದರು.

ಪತ್ರಿಕಾ ದಿನಾಚರಣೆಯ ಅಂಗವಾಗಿ ಗುರá-ವಾರ ಸವಣೂರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೇತ್ರದಾನ ವಾಗ್ದಾನ ಪತ್ರ ಸಹಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜುಲೈ 24ರಂದು ಪ್ರತಿ ಪ್ರೌಢಶಾಲಾ ಮಟ್ಟದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕೆಗಳ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಶಾಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜುಲೈ 26ರಂದು ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಪತ್ರಿಕಾ ದಿನಾಚರಣೆ ಅಂಗವಾಗಿ ನೇತ್ರದಾನ ಕುರಿತು ಪ್ರೇರಣೆ ಹಾಗೂ ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಂದಾಜು 1200 ಜನರಿಂದ ಸಹಿ ಸಂಗ್ರಹದ ನಿರೀಕ್ಷೆಯನ್ನು ಹೊಂದಲಾಗಿದೆ. ನೇತ್ರದಾನಕ್ಕೆ ಇಚ್ಛಿಸುವವರು ಮೊ. 9844733839ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಪತ್ರಕರ್ತ ಆನಂದ ಮತ್ತಿಗಟ್ಟಿ ಮಾಹಿತಿ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಇಚ್ಚಂಗಿಮಠ, ಶಿಕ್ಷಕರಾದ ಎನ್.ಕೆ. ಪಾಟೀಲ, ಎಂ.ಎಸ್. ಭಜಂತ್ರಿ, ಎನ್.ವಿ. ಕಲಕೋಟಿ, ಯು.ವಿ. ಮಾದಪ್ಪನವರ, ಐ.ಎಸ್. ಮುದಗಲ್, ಕೆ.ಎಸ್. ಗಾಣಿಗೇರ, ಎಸ್.ಟಿ. ಮಹಾಪುರುಷ, ಎಸ್.ಡಿ. ದೇವಗಪ್ಪನವರ, ಪಿ.ಎನ್. ಮಂಟಗಣಿ, ಎನ್.ಡಿ. ಮೇಗಲಮನಿ, ಎಸ್.ಎಸ್. ಬೆಂಡಿಗೇರಿ ಹಾಗೂ ಇತರರು ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರು. ಬಿಆರ್​ಸಿ ನಾಗರಾಜ ಬಣಕಾರ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಮೃತ್ಯುಂಜಯಗೌಡ, ಪತ್ರಕರ್ತರಾದ ಶಂಕ್ರಯ್ಯ ಹಿರೇಮಠ, ಅಶೋಕ ಕಳಲಕೊಂಡ, ಗಣೇಶಗೌಡ ಪಾಟೀಲ, ಅಶೋಕ ಕಾಳಶೆಟ್ಟಿ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *