ಕಾಸರಗೋಡು: ನಗರದ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.5ರಿಂದ 7ರವರೆಗೆ ಜರುಗಲಿರುವ ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು.
ಉತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗಂಗಾಧರ ಕಡಪ್ಪುರ, ಗಣೇಶ್ ಪಾರಕಟ್ಟೆ, ಸಮಿತಿ ಉಪಾಧ್ಯಕ್ಷ ಬಾಲಕೃಷ್ಣ, ಕಾರ್ಯದರ್ಶಿ ಮಹೇಶ್, ಕ್ಷೇತ್ರದ ಶಾಂತಿ ಬಾಲಕೃಷ್ಣ, ಸಮಿತಿ ಕೋಶಾಧಿಕಾರಿ ಕೆ.ಉಮೇಶ್, ಸದಸ್ಯರಾದ ಸಜೇಶ್, ರತೀಶ್, ಅರವಿಂದ, ರಮೇಶ, ಸುಬ್ರಹ್ಮಣ್ಯ, ಸುನೀಲ್ ಸಾಯಿ ಉಪಸ್ಥಿತರಿದ್ದರು.