ನೆಲವಾಗಿಲು ಎಸ್‌ಎಫ್‌ಸಿಎಸ್‌ಗೆ ಉತ್ತಮ ಸೇವಾ ಸಹಕಾರ ಸಂ ಪ್ರಶಸ್ತಿ

ನಂದಗುಡಿ: ನೆಲವಾಗಿಲು ಗ್ರಾಮದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂ ಉತ್ತಮ ಸೇವಾ ಸಹಕಾರ ಸಂ ಪ್ರಶಸ್ತಿಗೆ ಭಾಜನವಾಗಿದೆ.

ಬೆಂಗಳೂರಿನ ಮರಾಠ ಬಾಲಕರ ವಸತಿ ನಿಲಯದಲ್ಲಿ ಗ್ರಾವಾಂತರ ಜಿಲ್ಲಾ ಸಹಕಾರ ಬ್ಯಾಂಕ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಯಿತು. 1976 ರಲ್ಲಿ 32 ಗ್ರಾಮಗಳನ್ನು ಒಳಗೊಂಡು 400 ಷೇರುದಾರರನ್ನು ಒಗ್ಗೂಡಿಸಿ ಸಹಕಾರ ಸಂಘ ಸ್ಥಾಪಿಸಲಾಗಿತ್ತು. 10 ರೂ. ಷೇರು ಹಣ ಸಂಗ್ರಹಿಸಿ ಎನ್.ಡಿ.ಬಜ್ಜಣ್ಣ ಮೊದಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಸಣ್ಣ ಹಿಡುವಳಿದಾರರಿಗೆ, ಹೈನುಗಾರಿಕೆ ಹಾಗೂ ರೇಷ್ಮೆ ಬೆಳೆಗಾರರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆರಂಭಗೊಂಡ ಸಂ ರೈತಾಪಿ ವರ್ಗಕ್ಕೆ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಇಂದು 4013 ಷೇರುದಾರರನ್ನು ಹೊಂದಿದ್ದು, 52 ಲಕ್ಷ ರೂ. ಷೇರು ಬಂಡವಾಳ ಹೂಡಿಕೆಯಾಗಿದೆ. 506 ರೈತ ಫಲಾನುಭವಿಗಳಿಗೆ 2.42 ಕೋಟಿ ರೂ. ಸಾಲ ವಿತರಿಸಲಾಗಿದೆ.

ನಮ್ಮ ಸಂಕ್ಕೆ ಉತ್ತಮ ಸಹಕಾರ ಸಂ ಪ್ರಶಸ್ತಿ ಬಂದಿದ್ದು ಸಂತಸದ ವಿಚಾರ. ಈ ಹಿಂದೆ ಇದ್ದ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ಹಾಗೂ ಸಿಬ್ಬಂದಿ ಉತ್ತಮವಾಗಿ ಸಂವನ್ನು ಮುನ್ನಡೆಸಿದ್ದರ ಫಲವಾಗಿ ಸಂಘಕ್ಕೆ ಪ್ರಶಸ್ತಿ ಒಲಿದಿದೆ.
ಎಸ್.ನಾಗೇಶ್
ಎಸ್‌ಎಫ್‌ಸಿಎಸ್ ಅಧ್ಯಕ್ಷ

ಸಹಕಾರ ಸಂಗಳು ಉತ್ತಮವಾಗಿ ನಡೆಯಬೇಕಾದರೆ ರೈತರ ಸಹಕಾರ ಮುಖ್ಯ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಮೂಲಕ ತಾಲೂಕಿನಲ್ಲೇ ಉತ್ತಮ ಸಹಕಾರಿ ಸಂ ಎಂಬ ಹೆಗ್ಗಳಿಕೆ ಹೊಂದಲು ರೈತರ ಸಹಭಾಗಿತ್ವ ಕಾರಣ.
ಎಚ್.ಎಂ.ಗುರುದೇವ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಎಸ್‌ಎಫ್‌ಸಿಎಸ್

Leave a Reply

Your email address will not be published. Required fields are marked *