Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ನೆಲಮಂಗಲವೀಗ ರಿಯಾಲ್ಟಿಯ ಸೂಜಿಗಲ್ಲು

Saturday, 02.06.2018, 3:05 AM       No Comments

ಬೆಂಗಳೂರಿನ ಒತ್ತಡ ತಪ್ಪಿಸಿಕೊಳ್ಳಲು ಹಲವರು ನೆಲಮಂಗಲದತ್ತ ಮುಖಮಾಡಿದ್ದಾರೆ. ಸಿನಿಮಾ ಸೆಲಿಬ್ರಿಟಿಗಳು ಫಾರಂಹೌಸ್ ನಿರ್ವಿುಸಿಕೊಂಡಿದ್ದಾರೆ. ಕೈಗಾರಿಕೆಗಳು, ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿರುವುದರಿಂದ ರಿಯಾಲ್ಟಿ ಕ್ಷೇತ್ರ ಸಹಜವಾಗಿಯೇ ಗರಿಗೆದರಿದೆ.

| ಹೊಸಹಟ್ಟಿ ಕುಮಾರ್

ಬೆಂಗಳೂರು: ಮಾಹಿತಿ ತಂತ್ರಜ್ಞಾನ ನಗರ ಬೆಂಗಳೂರಿನ ಸೆರಗಿನಲ್ಲಿರುವ ನೆಲಮಂಗಲ ಜನ ವಸತಿ ಹಾಗೂ ಕೈಗಾರಿಕಾ ನಿವೇಶನಗಳ ನಿರ್ವಣಕ್ಕೆ ಹೇಳಿ ಮಾಡಿಸಿದ ತಾಣ.

ರಾಜಧಾನಿ ಬೆಂಗಳೂರು ಪ್ರವೇಶಕ್ಕೆ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕು ಕೇಂದ್ರ. ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ಮಾರ್ಗ ಈ ಪ್ರದೇಶದ ಮೂಲಕ ಹಾದು ಹೋಗಿರುವುದರಿಂದ ವಿವಿಧೆಡೆಯ ಸಂಪರ್ಕ ಕೂಡ ಇಲ್ಲಿಂದ ಸಲೀಸು. ಹೌದು, ಈ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ-4, 48 ಹಾಗೂ 207 ಹಾದು ಹೋಗಿವೆ. ಅಲ್ಲದೆ, ಬೆಂಗಳೂರಿನಿಂದ ರೈಲು ಸಂಪರ್ಕ ಇದೆ. ಹೀಗಾಗಿ ನೆಲಮಂಗಲ-ಬೆಂಗಳೂರು ಪ್ರಯಾಣಕ್ಕೆ ಕೆಲವೇ ನಿಮಿಷಗಳು ಸಾಕು. ಇಷ್ಟೆಲ್ಲ ಸಕಾರಣವಿದ್ದ ಮೇಲೆ ರಿಯಾಲ್ಟಿ ಕ್ಷೇತ್ರವನ್ನು ಸಹಜವಾಗಿಯೇ ಅದೀಗ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಹೀಗಾಗಿ ನೆಲಮಂಗಲ ತಾಲೂಕಿನಲ್ಲಿ ಈಗಾಗಲೇ ಹಲವು ಬೃಹತ್ ಕೈಗಾರಿಕೆಗಳು ತಲೆ ಎತ್ತಿವೆ. ಬಹುರಾಷ್ಟ್ರೀಯ ಕಂಪನಿಗಳು ಬಂದು ನೆಲೆಯೂರಿವೆ. ದೊಡ ದೊಡ್ಡ ಗೋದಾಮುಗಳು ನಿರ್ವಣಗೊಂಡಿವೆ.

ಸುಸಜ್ಜಿತ ಬಡಾವಣೆಗಳು: ನೆಲಮಂಗಲ ಹಾಗೂ ಸುತ್ತಲಿನ ಪ್ರದೇಶದಲ್ಲಿ ದೈತ್ಯ ರಿಯಾಲ್ಟಿ ಕಂಪನಿಗಳು ಅಪಾರ್ಟ್​ವೆುಂಟ್ ಹಾಗೂ ನಿವೇಶನ ನಿರ್ವಿುಸಿವೆ. ನಾಗರಿಕರು ಸಹ ಬೆಂಗಳೂರಿನ ಒತ್ತಡ ತಪ್ಪಿಸಿಕೊಳ್ಳಲು ನೆಲಮಂಗಲದತ್ತ ನೋಟ ಹರಿಸಿದ್ದಾರೆ. ಹೀಗಾಗಿ ಇಲ್ಲಿ ರಿಯಾಲ್ಟಿ ಕ್ಷೇತ್ರಕ್ಕೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಸಿನಿಮಾ ನಟ ಹಾಗೂ ನಟಿಯರು ಫಾರಂಹೌಸ್​ಗಳನ್ನು ನಿರ್ಮಾಣ ಮಾಡಿಕೊಂಡು ನೆಲಮಂಗಲಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ.

ದಾಬಸ್​ಪೇಟೆ ಕೈಗಾರಿಕಾ ಪ್ರದೇಶ: ರಾಜ್ಯ ಸರ್ಕಾರ ನಿರ್ವಿುಸಿರುವ ದಾಬಸ್​ಪೇಟೆ ಕೈಗಾರಿಕಾ ಪ್ರದೇಶದಿಂದ ನೆಲಮಂಗಲ ಈಗ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ಹೆಸರಾಂತ ಕೈಗಾರಿಕೆಗಳು ನಿರ್ವಣವಾಗಿವೆ. ದಾಬಸ್​ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿ 4 ಹಾದು ಹೋಗಿರುವುದರಿಂದ ಇಡೀ ರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶ ಇದಾಗಿದೆ.

ಸ್ಥಳೀಯ ಆಡಳಿತ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲಸೌಲಭ್ಯ ಒದಗಿಸಿರುವುದರಿಂದ ಕೈಗಾರಿಕೆಗಳು ನೆಲೆಯೂರತೊಡಗಿವೆ.

ಬೆಲೆ ಗಗನಮುಖಿ: ರೈತರು ಕೃಷಿ ತ್ಯಜಿಸಿ ಭೂಮಿಯನ್ನು ವಸತಿ ಬಡಾವಣೆ ಅಥವಾ ಕೈಗಾರಿಕೆ ನಿರ್ವಣಕ್ಕೆ ನೀಡಲು ಮುಂದಾಗಿದ್ದಾರೆ. ನೆಲಮಂಗಲವನ್ನು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದು, ಬೆಂಗಳೂರಿಗೆ ಸನಿಹದಲ್ಲಿ ಇರುವುದರಿಂದ ಭೂಮಿಗೆ ಅಧಿಕ ಬೆಲೆ ಇದೆ. ರೈತರು ಕೂಡ ಹೆಚ್ಚು ಬೆಲೆಗೆ ಭೂಮಿ ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿ ಇದ್ದಾರೆ.

ಏರ್​ಪೋರ್ಟ್​ಗೆ ಸನಿಹ: ನೆಲಮಂಗಲ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 207ರಲ್ಲಿ ಹಾದು ಹೋದರೆ ಸ್ವಲ್ಪ ಸಮಯದಲ್ಲೇ ಏರ್​ಪೋರ್ಟ್ ತಲುಪಬಹುದಾಗಿದೆ. ಅಲ್ಲದೆ ಯಲಹಂಕ ತಲುಪಿ ಅಲ್ಲಿಂದ ಕೂಡ ವಿಮಾನ ನಿಲ್ದಾಣ ಪ್ರವೇಶಿಸಬಹುದು.

ಆಹ್ಲಾದಕರ ವಾತಾವರಣ: ನೆಲಮಂಗಲ ತಾಲೂಕಿನಲ್ಲಿರುವ ಶಿವಗಂಗೆ ಬೆಟ್ಟ ಧಾರ್ವಿುಕ ತಾಣ. ಬೆಟ್ಟದ ಸುತ್ತ ಅರಣ್ಯ ಇದ್ದು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಭಕ್ತರು, ಪ್ರವಾಸಿಗರನ್ನು ಬೆಟ್ಟ ಕೈಬೀಸಿ ಕರೆಯುತ್ತದೆ. ಶಿವಗಂಗೆ ಬೆಟ್ಟಕ್ಕೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಪ್ರವಾಸಿಗರು, ಚಾರಣಿಗರ ನೆಚ್ಚಿನ ತಾಣ ಶಿವಗಂಗೆ ಬೆಟ್ಟ.

ಅಧಿಕ ಭೂಮಿ ಲಭ್ಯತೆ

ನೆಲಮಂಗಲ ಸುತ್ತ-ಮುತ್ತ ವಿಶಾಲದ ಪ್ರದೇಶ ಇದೆ. ನೀರಾವರಿ ಸೌಲಭ್ಯದ ಕೊರತೆ ಇರುವುದರಿಂದ ಕೃಷಿಗೆ ಮಹತ್ವ ಇಲ್ಲ. ಹೀಗಾಗಿ ಇಲ್ಲಿನ ಜಮೀನು ಬಡಾವಣೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿದಂತಿದೆ. ಕೃಷಿ ವಿರಳವಾಗಿರುವುದರಿಂದ ಅಗತ್ಯವಾದಷ್ಟು ಭೂಮಿ ದೊರೆಯುತ್ತಿದೆ. ರೈತರು ಕೂಡ ಭೂಮಿ ಮಾರಾಟ ಮಾಡಲು ಮುಂದಾಗಿದ್ದಾರೆ. ಹೀಗಾಗಿ ನೆಲಮಂಗಲ ರಿಯಾಲ್ಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.

Leave a Reply

Your email address will not be published. Required fields are marked *

Back To Top