More

  ನೆಮ್ಮದಿ ಜೀವನಕ್ಕೆ ಆರೋಗ್ಯವೇ ಭಾಗ್ಯ

  ಮೋರಟಗಿ: ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ. ಎಷ್ಟು ಆರೋಗ್ಯವಂತನಾಗಿ ಬದುಕಿದ್ದಾನೆ ಎನ್ನುವುದು ಮುಖ್ಯ. ಆರೋಗ್ಯ ಭಾಗ್ಯಕ್ಕಿಂತ ಇನ್ನೊಂದು ಭಾಗ್ಯವಿಲ್ಲ ಎಂದು ವೈದ್ಯಾಧಿಕಾರಿ ಡಾ. ಮಂಜುನಾಥ ಟಿ.ಡಿ. ಹೇಳಿದರು.

  ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜುವಾರಿ ರ್ಮ್ ಹಬ್ ಲಿಮಿಟೆಡ್, ಜೈಕಿಸಾನ್ ಜಂಕ್ಷನ್ ಮೋರಟಗಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

  ಸಾರ್ವಜನಿಕರು ಆದಷ್ಟು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳನ್ನು ದುಶ್ಚಟಗಳಿಂದ ದೂರವಿಡಬೇಕು. ತಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಉಚಿತವಾಗಿ ನೀಡುತ್ತಿದೆ ಎಂದರು.

  ನುರಿತ ವೈದ್ಯರಿಂದ ದಿನವಿಡಿ ರಕ್ತ, ಬಿಪಿ, ಶುಗರ್ ಹಾಗೂ ಕಣ್ಣಿನ ತಪಾಸಣೆ ಜರುಗಿತು. ವಿವಿಧ ಗ್ರಾಮಗಳಿಂದ ಬಂದವರಿಗೆ ಊಟದ ವ್ಯವಸ್ಥೆ ಕಲ್ಪಿಸಿದರು.

  ಮುಖಂಡ ರವಿಕಾಂತ ನಡುವಿನಕೇರಿ, ಉಪಾಧ್ಯಕ್ಷ ಇಸ್ು ಮುಲ್ಲಾ, ಡಾ.ಗಿರೀಶ ಪಾಟೀಲ, ಕೆಡಿಪಿ ಸದಸ್ಯ ಎನ್.ಎನ್. ಪಾಟೀಲ, ರೇವಣಸಿದ್ಧ ಮಸಳಿ, ಎಂ.ಟಿ. ಸಿಂಗೆ, ಜಿ.ಕೆ. ನೆಲ್ಲಗಿ, ಬಿ.ಟಿ. ಬೋನಾಳ, ಡಾ. ಶ್ವೇತಾ ಕೋರಿ, ನಸೀಮಾ ಬೇಗಂ, ಮೈನುದ್ದೀನ ಮಣಿಯಾರ, ಶರಣು ಮಳಗಿ, ಮಹಾದೇವ ನಾಟೀಕಾರ, ಮಲ್ಲಿಕಾರ್ಜುನ ಕೊಟ್ಟರಗಿ, ಭೀಮರೆಡ್ಡಿ ಮಲ್ಲೇದ, ಶಿವಕುಮಾರ ಪಾಟೀಲ, ಶೇಖರ ಪೂಜಾರಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts