More

  ನೆತ್ತರು ಸೃಷ್ಟಿ ಅಸಾಧ್ಯ, ದಾನವೇ ಪರಿಹಾರ  ನರೇಗಲ್ಲ: ಆಧುನಿಕ ತಂತ್ರಜ್ಞಾನದಿಂದ ಮನುಷ್ಯ ಎಲ್ಲವನ್ನೂ ಪರ್ಯಾಯವಾಗಿ ಸೃಷ್ಟಸಬಲ್ಲ. ಆದರೆ, ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ದಾನದಿಂದ ಮಾತ್ರ ರಕ್ತ ಪಡೆದು, ಇನ್ನೊಬ್ಬರ ಜೀವ ಉಳಿಸಲು ಸಾಧ್ಯ ಎಂದು ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಾಧಿಕಾರಿ ಡಾ. ಮಹೇಶ ಪಾಟೀಲ ಹೇಳಿದರು.

  ಪಟ್ಟಣದ ಶ್ರೀ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಯುವ ಸಪ್ತಾಹ ಅಂಗವಾಗಿ ಯುವ ರೆಡ್ ಕ್ರಾಸ್, ಎನ್​ಎಸ್​ಎಸ್, ಐಕ್ಯೂಎಸಿ, ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಜಿಲ್ಲಾ ಆಸ್ಪತ್ರೆ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

  ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪಾದನೆಯಾಗುತ್ತದೆ. ಇದರಿಂದ ಜ್ಞಾಪಕ ಶಕ್ತಿ ಮತ್ತು ಬುದ್ಧಿ ಸಾಮರ್ಥ್ಯ ಹೆಚ್ಚಾಗುತ್ತದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ರಕ್ತದ ಒತ್ತಡ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ ಎಂದರು.

  ರಕ್ತದ ಬೇಡಿಕೆ ಹೆಚ್ಚಾಗಿದ್ದು, ಅದನ್ನು ಪೂರೈಸಲು ಯುವ ಸಮೂಹ ರಕ್ತದಾನಕ್ಕೆ ಮುಂದಾಗಬೇಕು ಎಂದರು.

  ಪ್ರಾಚಾರ್ಯ ಡಾ. ಜಗದೀಶ ಹುಲ್ಲೂರ ಮಾತನಾಡಿದರು. 35ಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಉಪನ್ಯಾಸಕ ಈ.ಆರ್. ಲಗಳೂರ, ಡಾ. ಬಸವರಾಜ ಬಳಗಾನೂರಮಠ, ವಿರೂಪಾಕ್ಷಪ್ಪ ಸಂಗನಾಳ, ಶೋಭಾ ಎನ್, ಶಿವಮೂರ್ತಿ ಕುರೇರ, ಜ್ಯೋತಿ ಬುಳ್ಳಣ್ಣವರ, ಕೆ.ಆರ್. ಪಾಟೀಲ, ಮುತ್ತು ಕಟ್ಟಿಮನಿ, ವೀರೇಶ ಈಲ್ಲೂರ, ಎಂ.ಎಸ್. ತಹಶೀಲ್ದಾರ, ಪಿ.ವೈ. ಶಾಸ್ತ್ರಿ, ಡಿ. ಕರಿದುರಗಣ್ಣವರ, ಶಿವರಾಜ ಗಾಣಿಗೇರ ಇತರರು ಇದ್ದರು.  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts