ನೂಲು ಬಿಚ್ಚಣಿಕೆ ಕೇಂದ್ರ ಆರಂಭ

Latest News

ರೈಲುಗಳಲ್ಲಿ ಟಿಕೆಟ್​ ಕಾಯ್ದಿರಿಸುವುದು, ಸೀಟುಗಳ ಲಭ್ಯತೆ ಪರಿಶೀಲನೆ ಈಗ ಇನ್ನಷ್ಟು ಸುಲಭ: ಹೇಗೆ ಇಲ್ಲಿ ನೋಡಿ

ನವದೆಹಲಿ: ಭಾರತೀಯ ರೈಲುಗಳಲ್ಲಿ ಆನ್​ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದು ತ್ರಾಸದಾಯಕವಾಗಿತ್ತು. ಅದಿನ್ನು ಮುಂದೆ ಎದುರಾಗದು. ಕಿರಿಕಿರಿ ರಹಿತ ಬಳಕೆದಾರ ಸ್ನೇಹಿ ಹೊಸ ಸೇವೆಯನ್ನು...

ಚಲಿಸುತ್ತಿದ್ದ ಟ್ರಾಕ್ಟರ್​ಗೆ ನೆಲಕ್ಕೆ ಬಾಗಿದ ವಿದ್ಯುತ್​ ಕಂಬದ ತಂತಿ ಸ್ಪರ್ಶ: ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟ ಚಾಲಕ

ಬಾಗಲಕೋಟೆ: ಚಲಿಸುತ್ತಿದ್ದ ಟ್ರಾಕ್ಟರ್​ಗೆ ವಿದ್ಯುತ್​ ಹರಿದು ಚಾಲಕ ಮೃತಪಟ್ಟ ಘಟನೆ ಜಮಖಂಡಿ ತಾಲೂಕಿನ ಕಂಕಣವಾಗಿ ಗ್ರಾಮದಲ್ಲಿ ನಡೆದಿದೆ. ಶಿವಲಿಂಗ ಸೋಮರಾಯ ಸವಣೂರ (20) ವಿದ್ಯುತ್​...

ಮೇ 30ರ ವರೆಗೂ ಹರಿಯಲಿ ನೀರು: ಕರ್ನಾಟಕ ರೈತ ಹಿತರಕ್ಷಣಾ ವೇದಿಕೆ ಒತ್ತಾಯ

ಗಂಗಾವತಿ: ಎರಡನೇ ಬೆಳೆಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ಮೇ 30ರವರೆಗೂ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ...

ಕಾಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಮಾಜಿ ಸಚಿವ ಶಿವರಾಜ್ ತಂಗಡಗಿ

ಕಾರಟಗಿ: ತುಂಗಭದ್ರಾ ಜಲಾಶಯದಲ್ಲಿ 96 ಟಿಎಂಸಿ ಅಡಿ ನೀರಿದ್ದರೂ ಎರಡನೇ ಬೆಳೆಗೆ ನೀರು ಬಿಡಲು ಸರ್ಕಾರ ಮೀನ ಮೇಷ ಎಣಿಸುತ್ತಿರುವುದು ನಾಚಿಕೆಗಢು. ಏ.20ರ...

ಹಳಿಯಾಳ: ತಾಲೂಕಿನ ಕೆಸರೊಳ್ಳಿಯ ರೈತ ದಂಪತಿ ಆರಂಭಿಸಿದ ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರವು 20ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ.

ಆನಂದ-ಹೇಮಾ ಗುಡಗೇರಿ ಅವರ ಸ್ವ ಉದ್ಯೋಗ ಪ್ರಾರಂಭಿಸಬೇಕೆಂಬ ಪ್ರಯತ್ನದ ಫಲವಾಗಿ ಗ್ರಾಮದಲ್ಲಿ ಇಂದು ರೇಷ್ಮೆ ನೂಲು ಬಿಚ್ಚಣಿಕೆ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, ಜೂ. 10ರಂದು ಕಾರ್ಯಾರಂಭ ಮಾಡಿದೆ. ರಾಜ್ಯದಲ್ಲಿ ರಾಮನಗರ, ಹಾವೇರಿ, ಶಿರಹಟ್ಟಿ, ಮುಧೋಳ, ಜಮಖಂಡಿ, ಅಥಣಿ, ಬನ್ನಿಕೊಪ್ಪ, ರಾಯಾಪುರ, ವಿಜಯಪುರದಲ್ಲಿ ಇಂಥ ಕೇಂದ್ರಗಳಿವೆ. ಕರಾವಳಿ ಪ್ರದೇಶದಲ್ಲಿ ಆರಂಭಗೊಂಡ ಮೊದಲ ಘಟಕ ಇದಾಗಿದೆ.

ರೇಷ್ಮೆ ಬಿಚ್ಚಣಿಕೆ ತರಬೇತಿ ಪಡೆದ ಗುಡಗೇರಿ ದಂಪತಿ 50 ಲಕ್ಷ ರೂ. ಬಂಡವಾಳದಲ್ಲಿ ಕೆಸರೊಳ್ಳಿ ಗ್ರಾಮದ ತಮ್ಮ ಹೊಲದಲ್ಲಿ ರೇಷ್ಮೆ ಬಿಚ್ಚಣಿಕೆ ಕೇಂದ್ರ ತೆರೆದಿದ್ದಾರೆ. ಕೇಂದ್ರ ರೇಷ್ಮೆ ಮಂಡಳಿ ಹಾಗೂ ಕರ್ನಾಟಕ ರೇಷ್ಮೆ ಇಲಾಖೆ ಸಹಭಾಗಿತ್ವದಲ್ಲಿ ಸಬ್ಸಿಡಿ ದರದಲ್ಲಿ ಘಟಕದ ಯಂತ್ರಗಳ ಖರೀದಿಗೆ ಇವರಿಗೆ 17 ಲಕ್ಷ ರೂ. ಬಿಡುಗಡೆಯಾಗಲಿದೆ. ಸ್ವಂತ ಹಣದಿಂದ ಕೇಂದ್ರದಲ್ಲಿ ಬಾಯ್ಲರ್ ಘಟಕ, ರೆಲಿಂಗ್ ಯುನಿಟ್, ರಿ- ರೆಲಿಂಗ್ ಯುನಿಟ್, ಹಾಟ್ ಏರ್ ಡ್ರೈಯರ್, ರೇಷ್ಮೆ ಗೂಡು ವಿಗಂಡಣೆ ಘಟಕ ಆರಂಭಿಸಲಾಗಿದೆ.

ತರಬೇತಿ: ಕೇಂದ್ರದಲ್ಲಿ 20ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಈ ಪೈಕಿ 10 ಮಹಿಳೆಯರ ಮೊದಲ ತಂಡಕ್ಕೆ ರೇಷ್ಮೆ ನೂಲು ಬಿಚ್ಚಣಿಕೆ ಕುರಿತು ರಾಜ್ಯ ರೇಷ್ಮೆ ಇಲಾಖೆಯ ನೂಲು ತಂತ್ರಜ್ಞರಾದ ಶಂಕರ ತೇಲಿ ನೇತೃತ್ವದಲ್ಲಿ ಪರಿಣತರು ಆರು ದಿನಗಳ ಪ್ರಾಥಮಿಕ ತರಬೇತಿ ನೀಡುತ್ತಿದ್ದಾರೆ. ಘಟಕದಲ್ಲೀಗ ಆರಂಭಿಕ ಹಂತದ ತರಬೇತಿ ಅಂಗವಾಗಿ ರಾಯಾಪುರದಿಂದ ರೇಷ್ಮೆ ಗೂಡುಗಳನ್ನು ಖರೀದಿಸಿ ತರಲಾಗಿದೆ. ನಿತ್ಯ 10 ರಿಂದ 15 ಕೆಜಿ ನೂಲು ತೆಗೆಯುವ ಗುರಿ ಹೊಂದಲಾಗಿದೆ.

ರೇಷ್ಮೆ ಉತ್ಪಾದನೆ: ಹಳಿಯಾಳ ತಾಲೂಕಿನಲ್ಲಿ 70 ಎಕರೆ ಭೂಮಿಯಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. ಅಗಸಲಕಟ್ಟಾ, ಕೆಸರೊಳ್ಳಿ, ಹವಗಿ, ಛತ್ರನಾಳ, ತೆಗ್ನಳ್ಳಿ, ನಂದಿಗದ್ದಾ, ಸಾತ್ನಳ್ಳಿ, ಆಲೂರ, ಬೊಮ್ಮನಳ್ಳಿ, ದಾಂಡೇಲಿ ಗ್ರಾಮೀಣ ಭಾಗದಲ್ಲಿ ರೇಷ್ಮೆ ಉತ್ಪಾದನೆ ಕಾರ್ಯ ನಡೆದಿದೆ. ರೇಷ್ಮೆ ಇಲಾಖೆ ಮಾಹಿತಿಯಂತೆ ತಾಲೂಕಿನಿಂದ ಪ್ರತಿ ವರ್ಷ 15ರಿಂದ 20 ಟನ್ ರೇಷ್ಮೆ ವಹಿವಾಟು ನಡೆಯುತ್ತಿದೆ.

ವಾಣಿಜ್ಯ ಬೆಳೆ ಕಬ್ಬಿಗಿಂತ ಹೆಚ್ಚು ಆದಾಯ ರೇಷ್ಮೆ ಬೆಳೆಯಿಂದ ಬರುತ್ತದೆ. ಅದಕ್ಕಾಗಿ ರೈತರು ರೇಷ್ಮೆ ಬೆಳೆ ಬೆಳೆಯಲು ಮುಂದಾಗಬೇಕು. ತಾಲೂಕಿನಲ್ಲಿ ಆರಂಭಗೊಂಡಿರುವ ರೇಷ್ಮೆ ಬಿಚ್ಚಣಿಕೆ ಕೇಂದ್ರದ ಪ್ರಯೋಜನ ಪಡೆಯಬೇಕು. | ಆನಂದ ಗುಡಗೇರಿ ರೇಷ್ಮೆ ಬಿಚ್ಚಣಿಕೆ ಕೇಂದ್ರದ ಮಾಲೀಕರು

ರೇಷ್ಮೆ ಬಿಚ್ಚಣಿಕೆ ಘಟಕ ಆರಂಭಿಸಿದ ಗುಡಗೇರಿ ದಂಪತಿ ಕಾರ್ಯ ಶ್ಲಾಘನೀಯ. ಉದ್ಯೋಗಾವಕಾಶ, ಆದಾಯ ತರುವ ಇಂಥ ಘಟಕಗಳನ್ನು ಆರಂಭಿಸಲು, ಪ್ರೋತ್ಸಾಹಿಸಲು ರೇಷ್ಮೆ ಮಂಡಳಿ ಸದಾ ಸಿದ್ಧವಿದೆ. | ಡಾ. ಉದಯ ಜವಳಿ ಕೇಂದ್ರ ರೇಷ್ಮೆ ಮಂಡಳಿ ಜಂಟಿ ನಿರ್ದೇಶಕರು

- Advertisement -

Stay connected

278,668FansLike
576FollowersFollow
611,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...