ನುಡಿದಂತೆ ನಡೆದ ಕೇಂದ್ರ ಸರ್ಕಾರ

ನೆಲಮಂಗಲ: ನುಡಿದಂತೆ ನಡೆದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಜನತೆ ಮತ್ತೊಮ್ಮೆ ಆಯ್ಕೆ ಮಾಡಲಿದ್ದು, ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್. ಮಲ್ಲಯ್ಯ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಬಿ.ಎನ್. ಬಚ್ಚೇಗೌಡ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನ ಬೈರಶೆಟ್ಟಿಹಳ್ಳಿ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನರೇಂದ್ರಮೋದಿ ದೇಶ ಕಂಡ ಅಪರೂಪದ ಪ್ರಧಾನಮಂತ್ರಿ. ಸುವ್ಯವಸ್ಥಿತ ಆಡಳಿತ, ದೇಶದ ಭದ್ರತೆ ವಿಚಾರವಾಗಿ ತಾಳಿದ ನಿಲುವುಗಳು, ಆರ್ಥಿಕ ನೀತಿಗಳಿಂದಾಗಿ ಜಾಗತಿಕಮಟ್ಟದಲ್ಲಿ ಭಾರತ ತಲೆ ಎತ್ತುವಂತೆ ಮಾಡಿದೆ. ಕೇಂದ್ರ ಸರ್ಕಾರದ ಜನಪರಯೋಜನೆಗಳು ದೇಶದ ಬಹುಸಂಖ್ಯಾತ ರೈತರು, ಕಾರ್ವಿುಕರು ಹಾಗೂ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.

ವಿವಿಧ ಕಾರಣಗಳಿಂದಾಗಿ ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು. ಈಗ ಕ್ಷೇತ್ರ ವ್ಯಾಪ್ತಿಯ ಎಲ್ಲ ಜನತೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಪ್ರದಾನಿ ನರೇಂದ್ರಮೋದಿ ಅವರ ಕೈ ಬಲಪಡಿಸಲಿದ್ದಾರೆ ಎಂದು ಹೇಳಿದರು.

ಪೂಜೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ದಂಡು ನಾಮಪತ್ರ ಸಲ್ಲಿಕೆ ನಿಮಿತ್ತ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಲು ಚಿಕ್ಕಬಳ್ಳಾಪುರ ತೆರಳಿದರು.

ಗೊಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮೀ ಮಂಜುನಾಥ್, ಸದಸ್ಯ ಜಗದಾಂಬಾ ಪುಟ್ಟಸ್ವಾಮಿ, ವೀಣಾಬೈರೇಗೌಡ, ಮೈಲನಹಳ್ಳಿ ಸತೀಶ್, ಮಾಜಿ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಆಂಜಿನಪ್ಪ, ಗೌರಮ್ಮಆಂಜಿನಪ್ಪ, ಮುಖಂಡರಾದ ಬೋಳಮಾರನಹಳ್ಳಿ ನಾರಾಯಣಪ್ಪ, ಆನಂದ್, ಯಾಡಾಳು ಸತೀಶ್, ಮಂಜುನಾಥ್, ಚಂದ್ರಣ್ಣ, ವಿಶ್ವನಾಥ್, ಮಲ್ಲೇಶ್, ಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *