28.5 C
Bengaluru
Monday, January 20, 2020

ನೀರು ಬಳಕೆದಾರರಿಗೆ ಒಳಚರಂಡಿ ಸೆಸ್

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಸಂತೋಷ ವೈದ್ಯ ಹುಬ್ಬಳ್ಳಿ

ಅವಳಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಅತ್ಯಂತ ಕೆಟ್ಟದಾಗಿದೆ. ಕೆಲವು ವಾರ್ಡ್​ಗಳಿಗೆ ಈಗಲೂ ಪ್ರತಿ 8 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೆಮ್ಮೆ ಪಟ್ಟುಕೊಳ್ಳುವ ನಿರಂತರ ನೀರು ಯೋಜನೆಯಡಿಯೂ ರಾಡಿ ನೀರು ಪೂರೈಕೆಯಾಗುತ್ತದೆ. ಇಷ್ಟೆಲ್ಲ ಕಳಪೆ ಮಟ್ಟದ ಸೌಲಭ್ಯದ ನಡುವೆಯೂ ಜನರು ನೀರಿನ ಕರ ತಪ್ಪದೇ ವಾಪತಿಸಬೇಕು. ಇದೀಗ ನೀರು ಬಳಕೆದಾರರು ಒಳಚರಂಡಿ ಸೆಸ್ ಪಾವತಿಸುವ ಪರಿಸ್ಥಿತಿ ಬಂದಿದೆ.

ನವೆಂಬರ್ 1ರಿಂದ ಜಾರಿಗೆ ಬರುವಂತೆ ನೀರಿನ ಬಳಕೆಗೆ ಅನುಗುಣವಾಗಿ ಒಳಚರಂಡಿ ಸೆಸ್ (ಉಪ ಕರ) ಅನ್ನು ಪ್ರತಿ ತಿಂಗಳು ನೀರಿನ ಬಿಲ್​ನಲ್ಲಿ ಸೇರಿಸಲಾಗುವುದು ಎಂದು ಕರ್ನಾಟಕ ಜಲ ಮಂಡಳಿ ಪತ್ರಿಕಾ ಪ್ರಕಟಣೆ ನೀಡಿದೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಅವಳಿ ನಗರದ ಜನತೆಗೆ ಸಿಕ್ಕ ಬಳುವಳಿ (ಗಿಫ್ಟ್).

ಪತ್ರಿಕಾ ಪ್ರಕಟಣೆ ನೀಡಿರುವುದು ಕರ್ನಾಟಕ ಜಲ ಮಂಡಳಿಯಾದರೂ ಇದು ಹು-ಧಾ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿರುವ ಪ್ರಾದೇಶಿಕ ಆಯುಕ್ತ ಆಮ್ಲಾನ್ ಬಿಸ್ವಾಸ್ ಕರಾವತ್ತು. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಫೆಬ್ರವರಿಯಲ್ಲಿ ಕೊನೆಗೊಂಡಿದೆ. ಅಂದಿನಿಂದ ಇಲ್ಲಿ ಆಡಳಿತಾಧಿಕಾರಿಯ ಕಾರುಬಾರು. ಬೆಂಗಳೂರು, ಮೈಸೂರಿನಲ್ಲಿ ಒಳಚರಂಡಿ ಸೆಸ್ ಆಕರಣೆ ಮಾಡುತ್ತಿರುವಾಗ ಹು-ಧಾ ದಲ್ಲಿ ಯಾಕಿಲ್ಲ? ಎಂದು ಭಾವಿಸಿ ಒಳಚರಂಡಿ ಸೆಸ್ ಆಕರಣೆಗೆ ನಿರ್ಧಾರ ಕೈಗೊಂಡಿದ್ದಾರೆ.

ಸೆಸ್ ಎಷ್ಟು?: ನೀರಿನ ಬಳಕೆಗೆ ಅನುಗುಣವಾಗಿ ಪ್ರತಿ ತಿಂಗಳು ಒಳಚರಂಡಿ ಸೆಸ್ ಆಕರಣೆ ಮಾಡಲು ನಿರ್ಧರಿಸಲಾಗಿದೆ. ಗೃಹ ಬಳಕೆಯ ಪ್ರತಿ ಸಂಪರ್ಕಕ್ಕೆ ಕನಿಷ್ಠ 20 ರೂ., ಗೃಹೇತರ ಬಳಕೆಗೆ 40 ರೂ., ವಾಣಿಜ್ಯ-ಕೈಗಾರಿಕೆಯೇತರ ಬಳಕೆಗೆ 80 ರೂ. ವಿಧಿಸಲಾಗಿದೆ. ಗೃಹ ಬಳಕೆದಾರರು ಮೊದಲ 8000 ಲೀಟರ್​ಗೆ ಪ್ರತಿ ಸಾವಿರ ಲೀ.ಗೆ ತಲಾ 2.5 ರೂ., 8000-15000 ಲೀ. ವರೆಗೆ ಪ್ರತಿ ಸಾವಿರ ಲೀ.ಗೆ ತಲಾ 5 ರೂ., 15000-25000 ಲೀ. ವರೆಗೆ ಪ್ರತಿ ಸಾವಿರ ಲೀ.ಗೆ ತಲಾ 7.5 ರೂ. ಹಾಗೂ 25000 ಲೀ. ಮೇಲ್ಪಟ್ಟು ಪ್ರತಿ ಸಾವಿರ ಲೀ.ಗೆ ತಲಾ 10 ರೂ. ನಂತೆ ಒಳಚರಂಡಿ ಸೆಸ್ ನೀಡಬೇಕು.

ಹೀಗೆ ಗೃಹೇತರ ಬಳಕೆದಾರರು ಮೊದಲ 8000 ಲೀಟರ್​ಗೆ ಪ್ರತಿ ಸಾವಿರ ಲೀ.ಗೆ ತಲಾ 5 ರೂ., 8000-15000 ಲೀ. ವರೆಗೆ ಪ್ರತಿ ಸಾವಿರ ಲೀ.ಗೆ ತಲಾ 10 ರೂ., 15000-25000 ಲೀ. ವರೆಗೆ ಪ್ರತಿ ಸಾವಿರ ಲೀ.ಗೆ ತಲಾ 15 ರೂ. ಹಾಗೂ 25000 ಲೀ. ಮೇಲ್ಪಟ್ಟು ಪ್ರತಿ ಸಾವಿರ ಲೀ.ಗೆ ತಲಾ 20 ರೂ. ನಂತೆ ಒಳಚರಂಡಿ ಸೆಸ್ ಪಾವತಿಸಬೇಕು.

ವಾಣಿಜ್ಯ-ಕೈಗಾರಿಕೆಯೇತರ ಬಳಕೆದಾರರು ಮೊದಲ 8000 ಲೀಟರ್​ಗೆ ಪ್ರತಿ ಸಾವಿರ ಲೀ.ಗೆ ತಲಾ 10 ರೂ., 8000-15000 ಲೀ. ವರೆಗೆ ಪ್ರತಿ ಸಾವಿರ ಲೀ.ಗೆ ತಲಾ 20ರೂ., 15000-25000 ಲೀ. ವರೆಗೆ ಪ್ರತಿ ಸಾವಿರ ಲೀ.ಗೆ ತಲಾ 30 ರೂ. ಹಾಗೂ 25000 ಲೀ. ಮೇಲ್ಪಟ್ಟು ಪ್ರತಿ ಸಾವಿರ ಲೀ.ಗೆ ತಲಾ 40 ರೂ. ನಂತೆ ಒಳಚರಂಡಿ ಸೆಸ್ ನೀಡಬೇಕು.

ಇದು ಮೀಟರ್ ಇದ್ದವರಿಗೆ ಹಾಕಿರುವ ಕರ ಭಾರ. ಇನ್ನು ಮೀಟರ್ ಇಲ್ಲದ ಗೃಹ, ಗೃಹೇತರ ಹಾಗೂ ವಾಣಿಜ್ಯ-ಕೈಗಾರಿಕೆಯೇತರ ಬಳಕೆಗಾರರು ಅನುಕ್ರಮವಾಗಿ ಪ್ರತಿ ತಿಂಗಳು 65 ರೂ., 130 ರೂ. ಹಾಗೂ 260 ರೂ. ಪಾವತಿಸಬೇಕು.

ಪಾಲಿಕೆ ವಂತಿಕೆ ಸರಿದೂಗಿಸಲು ನಾಗರಿಕರಿಗೆ ಕರ ಭಾರ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಇತ್ತೀಚೆಗೆ ಹೋದಲೆಲ್ಲ ಅವಳಿ ನಗರಕ್ಕೆ ಸಮಗ್ರ ಒಳಚರಂಡಿ ವ್ಯವಸ್ಥೆ ರೂಪಿಸಲು 430 ಕೋಟಿ ರೂ. ಯೋಜನೆಯ ಪ್ರಸ್ತಾವನೆ ಸಿದ್ಧಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಅವಳಿ ನಗರದಲ್ಲಿ ಹಿಂದೆಲ್ಲ ಬೃಹತ್ ಯೋಜನೆ ಜಾರಿಗೊಳಿಸಿದಾಗಲೆಲ್ಲ ಪಾಲಿಕೆ ತನ್ನ ಪಾಲಿನ ವಂತಿಗೆ ನೀಡಿದೆ. ಪಾಲಿಕೆ ತನ್ನ ಪಾಲಿನ ವಂತಿಗೆಯನ್ನು ಸರಿದೂಗಿಸಲು ನಾಗರಿಕರ ಮೇಲೆ ಕರ ಭಾರ ಹೇರಿರುವುದು ಸುಳ್ಳಲ್ಲ. ಈಗ ಸಮಗ್ರ ಒಳಚರಂಡಿ ಯೋಜನೆ ಪ್ರಸ್ತಾವನೆ ಹಂತದಲ್ಲೇ ಒಳಚರಂಡಿ ಸೆಸ್ ಹೇರಲಾಗಿದೆ.

ಬೆಂಗಳೂರು, ಮೈಸೂರಿನಲ್ಲಿ ಈಗಾಗಲೇ ಒಳಚರಂಡಿ ಸೆಸ್ ಆಕರಣ ಮಾಡಲಾಗುತ್ತಿದೆ. ಹು-ಧಾ ದಲ್ಲಿ ನವೆಂಬರ್ 1ರಿಂದ ಜಾರಿಗೆ ತರುವಂತೆ ಪಾಲಿಕೆ ಆಡಳಿತಾಧಿಕಾರಿ ನಿರ್ಧಾರ ಕೈಗೊಂಡಿದ್ದಾರೆ. ನಾವು ಹು-ಧಾ ದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ವಹಿಸುತ್ತಿಲ್ಲ. ನೀರು ಪೂರೈಕೆ ವ್ಯವಸ್ಥೆ ನಿರ್ವಹಿಸುತ್ತಿರುವುದರಿಂದ ನೀರಿನ ಬಳಕೆಗೆ ಅನುಗುಣವಾಗಿ ಪ್ರತಿ ತಿಂಗಳು ಒಳಚರಂಡಿ ಸೆಸ್ ವಸೂಲಿ ಮಾಡಿ ಆ ಮೊತ್ತವನ್ನು ಪಾಲಿಕೆಗೆ ಹಸ್ತಾಂತರಿಸುತ್ತೇವೆ. | ಆರ್.ಕೆ. ಉಮೇಶ ಎಇಇ, ಕರ್ನಾಟಕ ಜಲ ಮಂಡಳಿ ಹುಬ್ಬಳ್ಳಿ

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...