Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ನೀರು ಕೊಡುವುದಾದರೆ ಮಾತುಕತೆಗೆ ಸಿದ್ಧ

Saturday, 23.12.2017, 3:04 AM       No Comments

ಬೆಳಗಾವಿ: ಗೋವಾ ಸರ್ಕಾರ ನೀರು ಕೊಡಲು ಮುಂದಾದರೆ ಕರ್ನಾಟಕ ಸರ್ಕಾರ ಮಾತುಕತೆಗೆ ಸದಾ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರದ ಸಾಧನಾ ಸಂಭ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಅನೇಕ ಬಾರಿ ಕೇಂದ್ರಕ್ಕೆ ಮನವಿ ಮಾಡಿದೆ. ಸರ್ವಪಕ್ಷ ಸದಸ್ಯರ ನಿಯೋಗ ಕೊಂಡೊಯ್ದು ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆ ಹರಿಸಬೇಕು ಎಂದು ಪ್ರಧಾನಿಗೆ ಕೇಳಿದೆ. ಆದರೆ ಅವರು ಒಪ್ಪಲಿಲ್ಲ. ನ್ಯಾಯಾಧಿಕರಣ ಸಹ ಎರಡೂ ರಾಜ್ಯಗಳು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಿ ಎಂದು ಹೇಳಿತ್ತು. ಅದಕ್ಕೂ ಗೋವಾ ಸರ್ಕಾರ ಒಪ್ಪಲಿಲ್ಲ. ಇದೀಗ ರಾಜ್ಯ ಬಿಜೆಪಿ ಮುಖಂಡರು ಚುನಾವಣೆ ಹಿನ್ನೆಲೆಯಲ್ಲಿ ಪತ್ರ ತರಿಸಿಕೊಂಡು ಗಿಮಿಕ್ ಮಾಡುತ್ತಿದ್ದಾರೆ. ನಮಗೆ ನೀರು ಬೇಕು, ಗೋವಾ ನೀರು ಕೊಟ್ಟರೆ ನಾವು ಮಾತುಕತೆಗೆ ಸಿದ್ಧ ಎಂದರು.

ಶಿಷ್ಟಾಚಾರದ ಪ್ರಕಾರ ಗೋವಾ ಮುಖ್ಯಮಂತ್ರಿ ನನಗೆ ಪತ್ರ ಬರೆಯಬೇಕು. ಆದರೆ, ಬರೆಯಲಿಲ್ಲ. ಆದರೂ ನಾನು ಒಂದು ಹೆಜ್ಜೆ ಮುಂದೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ. ಮಾತುಕತೆಗಾಗಿ ನಾನೇ ಪತ್ರ ಬರೆಯುತ್ತಿದ್ದೇನೆ. ಎಲ್ಲಿ ಮಾತುಕತೆಗೆ ಕರೆದರೂ ಹೋಗುತ್ತೇನೆ ಎಂದರು.

ಸಭೆಯಲ್ಲಿ ಪಾಲ್ಗೊಳ್ಳಲು ಸರ್ಕಾರ ಬದ್ಧ: ಮಹದಾಯಿ ನೀರು ಹಂಚಿಕೆ ವಿವಾದ ಕುರಿತು ರ್ಚಚಿಸಲು ಗೋವಾ ಮುಖ್ಯಮಂತ್ರಿ ಕರೆಯುವ ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆ ಇತ್ಯರ್ಥಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ರೈತರ ಹಿತ ಕಾಯುವ ಉದ್ದೇಶದಿಂದ ಸರ್ಕಾರ ಯಾವುದೇ ಚರ್ಚೆಗೆ ಸಿದ್ಧವಿದೆ. ಅಗತ್ಯಬಿದ್ದರೆ ಸ್ವತಃ ಮುಖ್ಯಮಂತ್ರಿಗಳೇ ಗೋವಾಕ್ಕೆ ತೆರಳಿ ಮಾತುಕತೆ ನಡೆಸಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು. ಕೇಂದ್ರ ಸರ್ಕಾರವು 2002ರಲ್ಲಿಯೇ ಕೇಂದ್ರ ಜಲ ಆಯೋಗಕ್ಕೆ 7.56 ಟಿಎಂಸಿ ನೀರು ಬಳಕೆ ಮಾಡಲು ತಾತ್ವಿಕ ಒಪ್ಪಿಗೆ ನೀಡಿರುವುದರಿಂದ ಇಷ್ಟು ಪ್ರಮಾಣದ ನೀರನ್ನು ತುರ್ತಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡಬೇಕು. ಇದರಿಂದ ಮುಂಬರುವ ದಿನಗಳಲ್ಲಿ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ರಾಜ್ಯ ಸರ್ಕಾರದ ನಿಲುವು ಎಂದು ಹೇಳಿದರು.

ಬಿಜೆಪಿಗೆ ರಾಜ್ಯದ ಹಿತಕ್ಕಿಂತ ಚುನಾವಣಾ ಲಾಭವೇ ಇವರಿಗೆ ಮುಖ್ಯ. ಈ ವಿಚಾರ ದಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕು. ಅಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಂಡರೆ ಉತ್ತಮ ಎಂಬುದು ಪಕ್ಷದ ಒತ್ತಾಯ

| ದಿನೇಶ್ ಗುಂಡೂರಾವ್ ಕೆಪಿಸಿಸಿ ಕಾರ್ಯಾಧ್ಯಕ್ಷ

ಬೆಂಗಳೂರು ಚಲೋ

ಬೆಂಗಳೂರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮಹದಾಯಿ ಹೋರಾಟಗಾರರು ಶುಕ್ರವಾರ ಬೆಂಗಳೂರು ಚಲೋ ಕೈಗೊಂಡರು. 400ಕ್ಕೂ ಹೆಚ್ಚು ರೈತರು ಮಹ ದಾಯಿ ಹೋರಾಟಗಾರ ವೀರೇಶ ಸೊಬರದಮಠ ನೇತೃತ್ವದಲ್ಲಿ ಶನಿವಾರ ಬಿಎಸ್​ವೈ ಮನೆ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ.

ಬಿಎಸ್​ವೈಗೆ ಘೇರಾವ್

ಗದಗ: ಪರಿವರ್ತನಾ ಯಾತ್ರೆ ಮುಗಿಸಿ ರಾತ್ರಿ ನರಗುಂದಕ್ಕೆ ತೆರಳುತ್ತಿದ್ದ ಯಡಿಯೂರಪ್ಪ ಅವರ ಕಾರ್​ಗೆ ನವಲಗುಂದದಲ್ಲಿ ರೈತರು ಘೇರಾವ್ ಹಾಕಿ ಪ್ರತಿಭಟಿಸಿದರು. ಮಹದಾಯಿ ವಿಷಯದಲ್ಲಿ ಕೇವಲ ಭರವಸೆ ನೀಡಿ ರೈತರಿಗೆ ಮೋಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ಕೇವಲ ಸಭೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಎರಡೂ ರಾಜ್ಯಗಳ ಜನರಿಗೆ ಅನುಕೂಲ ಮಾಡಿಕೊಡುವ ಪ್ರಾಮಾಣಿಕ ಮನಸ್ಸಿರಬೇಕು. ಕರ್ನಾಟಕಕ್ಕೆ ಎಷ್ಟು ಕುಡಿಯುವ ನೀರು ಕೊಡಬೇಕು ಎಂಬುದು ನ್ಯಾಯಾಧಿಕರಣದ ಮುಂದೆಯೇ ತೀರ್ವನವಾಗಬೇಕು.

| ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

ನೀರು ಬಿಡಲು ಗೋವಾ ಕಾಂಗ್ರೆಸ್ ವಿರೋಧ

ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ನೀಡಲು ವಿರೋಧ ವ್ಯಕ್ತಪಡಿಸಿರುವ ಗೋವಾ ರಾಜ್ಯ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಶಾಂತಾರಾಮ ನಾಯ್ಕ, ನೀರಿಗಾಗಿ ಕರ್ನಾಟಕ ಜತೆ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಮಾತುಕತೆಗೆ ಹೊರಟಿರುವುದು ಗೋವಾ ಜನತೆಗೆ ಬಗೆದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನೀರಿನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೋವಾ ಜನತೆಯ ವಿರುದ್ಧ ಕೃತ್ಯವೆಸಗುತ್ತಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋವಾದ ಹಿತಕ್ಕೆ ಪರಿಕ್ಕರ್ ಎಳ್ಳು ನೀರು ಬಿಟ್ಟಿದ್ದಾರೆ ಎಂದು ಟೀಕಿಸಿದ ಅವರು, ಮುಖ್ಯಮಂತ್ರಿ ತೆಗೆದುಕೊಂಡಿರುವ ಈ ನಿರ್ಣಯದ ವಿರುದ್ಧ ಕಾಂಗ್ರೆಸ್ ಆಂದೋಲನ ನಡೆಸಲಿದೆ ಎಂದು ಎಚ್ಚರಿಸಿದರು.

ರಾಜ್ಯಾದ್ಯಂತ ಬಂದ್

ಗದಗ: ಗೋವಾ ರಾಜ್ಯ ಕಾಂಗ್ರೆಸ್ ನಿರ್ಧಾರ ವಿರೋಧಿಸಿ ರಾಜ್ಯಾದ್ಯಂತ ಬಂದ್ ಕರೆ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ನರಗುಂದದಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಗೋವಾ ರಾಜ್ಯ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಶಾಂತಾರಾಮ ನಾಯ್ಕ ಹೇಳಿಕೆಯನ್ನು ಖಂಡಿಸಿದರು. ಸೋನಿಯಾ ಹಾಗೂ ರಾಹುಲ್​ಗಾಂಧಿ ಕುಮ್ಮಕ್ಕಿನಿಂದ ಇಂತಹ ಹೇಳಿಕೆ ನೀಡಿದ್ದಾರೆ. ಬಂದ್​ಗೆ ಬೆಂಬಲ ನೀಡುವಂತೆ ರೈತರಲ್ಲಿ ಮನವಿ ಮಾಡಿದರು.

ನಮಗೆ ಮನೋಹರ್ ಪರಿಕ್ಕರ್ ಪತ್ರ ಬೇಡ, ಸಿಹಿ ಸುದ್ದಿ ಕೊಡುತ್ತೇನೆಂದು ಬಿಎಸ್​ವೈ ಜನರ ಕಿವಿಗೆ ಹೂ ಇಟ್ಟಿದ್ದಾರೆ. ಚುನಾವಣೆ ಬಂದಿದೆ ಎಂದು ನಾಟಕವಾಡಿಕೊಂಡು ಹೋಗುತ್ತಿದ್ದಾರೆ. ಆ ಭಾಗದ ಜನರು ಬಿಜೆಪಿ ನಾಯಕರ ಮಾತಿಗೆ, ಅವರಾಡುವ ನಾಟಕಕ್ಕೆ ಮರುಳಾಗಬೇಡಿ, ಮತ್ತೊಮ್ಮೆ ಬಿಜೆಪಿಯಿಂದ ಮೋಸ ಹೋಗಬೇಡಿ.

| ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

ಸಿದ್ದರಾಮಯ್ಯ ಪತ್ರದಲ್ಲೇನಿದೆ?

ಮೊದಲ ಪುಟದಿಂದ…

ಅದೇನಿದ್ದರೂ ನಾನು ಮತ್ತೊಮ್ಮೆ ಮನವಿ ಮಾಡುವುದೇನೆಂದರೆ, ನಿಮ್ಮ ಆಯ್ಕೆಯ ಜಾಗ ಹಾಗೂ ಸಮಯದಲ್ಲಿ ಆದಷ್ಟು ಬೇಗ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಸಂಧಾನ ಸಭೆ ನಡೆಸೋಣ. ಈ ವಿಚಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ಗೂ ತಿಳಿಸುತ್ತೇನೆ. ನ್ಯಾಯಾಧಿಕರಣದ ಅಂತಿಮ ವಿಚಾರಣೆ ಫೆಬ್ರವರಿ

16ರಿಂದ 22ರವರೆಗೆ ನಡೆಯುವುದ ರಿಂದ ಶೀಘ್ರದಲ್ಲೇ ಈ ಸಭೆ ನಡೆಸಬೇಕಿದೆ. ಕೇಂದ್ರೀಯ ಜಲ ಆಯೋಗದ ಲೆಕ್ಕಾಚಾರದಂತೆ 199 ಟಿಎಂಸಿಯಲ್ಲಿ ಕರ್ನಾಟಕವು ಕುಡಿಯುವ ನೀರಿಗೆ 14.98 ಟಿಎಂಸಿ ಕೇಳುತ್ತಿದೆ. ಇದರಲ್ಲಿ 7.56 ಟಿಎಂಸಿ ನೀರು ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ಉದ್ದೇಶಕ್ಕೆ ಹಾಗೂ ಉಳಿದ ನೀರನ್ನು ಮಲಪ್ರಭಾ ಭಾಗಕ್ಕೆ ಬಳಸಿಕೊಳ್ಳಲಾಗುತ್ತದೆ. ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಜತೆ ಸಭೆಯ ವಿವರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ನ್ಯಾಯಾಧಿಕರಣದ ತೀರ್ಪೆ ಅಂತಿಮ

 ಬೆಂಗಳೂರು: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕರ್ನಾಟಕಕ್ಕೆ ಕುಡಿಯುವ ನೀರು ಹರಿಸುವ ವಿಚಾರದಲ್ಲಿ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರೆ, ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಪರಿಕ್ಕರ್ ಹೇಳಿಕೆಗೆ ಪ್ರತಿಕೂಲ ಮಾತುಗಳನ್ನಾಡಿದ್ದಾರೆ. ದಿಗ್ವಿಜಯ ನ್ಯೂಸ್​ಗೆ

ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದ್ದಿಷ್ಟು:

‘ನಾವು ನದಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡುವ ಬಗ್ಗೆ ಎಲ್ಲಿಯೂ ಹೇಳಿಲ್ಲ. ಕುಡಿಯವ ನೀರಿನ ಬಗ್ಗೆಯಷ್ಟೇ ಪರಿಶೀಲನೆ ಮಾಡಬಹುದಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬರೆದ ಪತ್ರಕ್ಕೆ ಸಿಎಂ ಸಹಜ ಪ್ರತಿಕ್ರಿಯೆ ನೀಡಿದ್ದಾರಷ್ಟೆ. ಈ ಹಿಂದೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಲವು ಪತ್ರಗಳನ್ನು ಕಳಿಸಿದ್ದಾರೆ. ಅವನ್ನು ಪರಿಶೀಲಿಸುತ್ತಿದ್ದೇವೆ. ಗೋವಾ ಜನತೆಯ ಹಿತರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಇದರ ಅರ್ಥ ನಾವು ಈಗಾಗಲೇ ಮನೋಹರ್ ಪರಿಕ್ಕರ್​ಗೆ ಗೋವಾ ಜನತೆಯ ಹಿತಕಾಪಾಡುವಂತೆ ಹೇಳಿದ್ದೇವೆ. ಈ ವಿಚಾರದಲ್ಲಿ ನಮ್ಮ ಪಕ್ಷದಿಂದ ಯಾವುದೇ ರಾಜಿ ಇಲ್ಲ. ನಮ್ಮ ಪಕ್ಷದ ಅಧ್ಯಕ್ಷ, ಸಚಿವರೂ ಆಗಿರುವ ವಿಜಯ್ ಸರ್ ದೇಸಾಯಿ ಸಹ ಇದೇ ನಿಲುವು ಹೊಂದಿದ್ದಾರೆ. ಮಹದಾಯಿ ವಿವಾದ ನ್ಯಾಯಾಧಿಕರಣದಲ್ಲಿದ್ದು, ಅದೇ ನಿರ್ಧರಿಸಲಿ. ಮಹದಾಯಿ ಪ್ರಕರಣದಲ್ಲಿ ಗೋವಾ ಸರ್ಕಾರಕ್ಕೆ ಜಯ ಸಿಗಲಿದೆ’.

Leave a Reply

Your email address will not be published. Required fields are marked *

Back To Top