17 C
Bangalore
Friday, December 13, 2019

ನೀರಿನ ರಭಸಕ್ಕೆ ಕಿತ್ತುಹೋದ ಬಾಂದಾರ

Latest News

ಸಂಭ್ರಮದ ಅಮೃತೇಶ್ವರ ರಥೋತ್ಸವ

ಅಣ್ಣಿಗೇರಿ: ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ಮಹಾರಥೋತ್ಸವ ಗುರುವಾರ ಸಂಜೆ ಸಹಸ್ರಾರು ಭಕ್ತರ ಜಯಘೊಷಗಳ ಮಧ್ಯ ಸಡಗರ, ಸಂಭ್ರಮದಿಂದ ಜರುಗಿತು.

ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಪ್ರಧಾನಿ ಬೇಡ

ವಿಜಯವಾಣಿ ಸುದ್ದಿಜಾಲ ಧಾರವಾಡ 2020ರ ಜ. 26ರ ಗಣರಾಜ್ಯೋತ್ಸವದ ಅತಿಥಿಯಾಗಿ ಬ್ರೆಜಿಲ್ ಪ್ರಧಾನಿ ಬೊಲ್ಸೇನಾರೋ ಬರುತ್ತಿರುವುದನ್ನು ರೈತ ಸಂಘ...

ಡಿಸಿಪಿಯಾಗಿ ಬಿ.ಎಸ್. ನೇಮಗೌಡ ಅಧಿಕಾರ ಸ್ವೀಕಾರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ವರ್ಗವಾಗಿ ಬಂದಿರುವ ಉಪ ಪೊಲೀಸ್ ಆಯುಕ್ತ(ಡಿಸಿಪಿ) ಬಿ.ಎಸ್. ನೇಮಗೌಡ ಗುರುವಾರ...

ಸೇವೆ ಸ್ಥಗಿತಗೊಳಿಸಿ ಧರಣಿ

ವಿಜಯವಾಣಿ ಸುದ್ದಿಜಾಲ ಕುಂದಗೋಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ತಾಲೂಕಾಸ್ಪತ್ರೆ ಡಿ ದರ್ಜೆ ಗುತ್ತಿಗೆ ನೌಕರರು ಗುರುವಾರ ಸೇವೆ...

ಜ್ಞಾನ ಸಂಸತ್ ಅಧಿವೇಶನ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್​ನಿಂದ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಡಿ. 14ರಂದು ಸಂಜೆ 4ಕ್ಕೆ...

ಲಕ್ಷ್ಮೇಶ್ವರ: ತಾಲೂಕಿನ ಬಡ್ನಿ ಹಳ್ಳಕ್ಕೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ ನಿರ್ವಿುಸಿದ್ದ ಬಾಂದಾರ ನೀರಿನ ರಭಸಕ್ಕೆ ಕಿತ್ತು ಪಕ್ಕದ ಜಮೀನುಗಳ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ರೈತರು ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪ್ರತಿ ಮಳೆಗಾಲದಲ್ಲಿ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದು ಜಮೀನುಗಳಿಗೆ ನುಗ್ಗಿ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಇದಕ್ಕೆ ಪರಿಹಾರ ಸೂಚಿಸುವಂತೆ ಬಡ್ನಿ ಗ್ರಾಮದ ರೈತರಾದ ಹಸನಸಾಬ್ ಯಳವತ್ತಿ, ಚಾಂದಸಾಬ್ ಯಳವತ್ತಿ, ಗಂಗಮ್ಮ ಬಾಡಗಿ, ತಿರಕಪ್ಪ ಕಡಕೋಳ, ಮಾಲಿಂಗಪ್ಪ ಕಡಕೋಳ, ಶಂಭವ್ವ ಮೇಟಿ, ಷಣ್ಮುಖಪ್ಪ ಮಡಿವಾಳರ ಇತರರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ರೈತ ಹಸನಸಾಬ್ ಯಳವತ್ತಿ ಪತ್ರಿಕೆಗೆ ಮಾಹಿತಿ ನೀಡಿ, ಬಾಂದಾರ ಕಿತ್ತು ಮೂರು ವರ್ಷದಿಂದ ನೀರು ಜಮೀನಿಗೆ ನುಗ್ಗುತ್ತಿದೆ. ಇದರಿಂದ ಜಮೀನುಗಳು ಹಾಳಾಗುತ್ತಿವೆ. 5 ದಿನಗಳ ಹಿಂದಷ್ಟೇ ಹಳ್ಳ ಹರಿದು ಜಮೀನಿನ ಮಣ್ಣು ಕೊಚ್ಚಿ ಹೋಗಿ ಆಳವಾದ ಕಂದಕ ಬಿದ್ದಿದೆ. ಬಾಂದಾರು ನಿರ್ವಿುಸಿ ಜಮೀನು ರಕ್ಷಿಸಿ ಕೊಡಿ ಎಂದು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಣ್ಣು ಕೊಚ್ಚಿ ಹೋದಾಗೊಮ್ಮೆ ಸಾವಿರಾರು ರೂ. ವ್ಯಯಿಸಿ ಜಮೀನಿಗೆ ಮಣ್ಣು ಹಾಕಿಸಿದರೂ ಮಳೆ ಬಂದಾಗ ಮತ್ತೆ ಮಣ್ಣು ಕೊಚ್ಚಿ ಹೋಗುವುದು ಮಾತ್ರ ತಪ್ಪುತ್ತಿಲ್ಲ ಎಂದು ನೊಂದು ನುಡಿದರು.

2015-16 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಗೊಜನೂರ- ಅಕ್ಕಿಗುಂದ- ಬಟ್ಟೂರ, ಪುಟಗಾಂವ್ ಬಡ್ನಿ ಮಾರ್ಗವಾಗಿ ಸಂಕದಾಳವರೆಗಿನ 12 ಕಿ.ಮೀ ಉದ್ದದ ಹಳ್ಳಕ್ಕೆ 18 ಸರಣಿ ಬಾಂದಾರ ನಿರ್ವಿುಸಲಾಗಿದೆ. ಈ ಕಾಮಗಾರಿಯನ್ನು ಬೆಂಗಳೂರಿನ ಅಮೃತಾ ಕನ್​ಸ್ಟ್ರಕ್ಷನ್​ನವರು ಗುತ್ತಿಗೆ ಪಡೆದಿದ್ದರು. ಈಗ ಗುತ್ತಿಗೆದಾರರ ನಿರ್ವಹಣಾ ಅವಧಿ ಮುಗಿದಿದೆ. ಆದರೆ, ಹಾಳಾಗಿರುವ ಬಾಂದಾರಗಳ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆ ಬಳಿ ಅನುದಾನ ಇಲ್ಲವಂತೆ. ಹೀಗಾಗಿ ಹಳ್ಳದುದ್ದಕ್ಕೂ ಕಟ್ಟಿರುವ ಬಾಂದಾರಗಳಿಗೆ ಎರಡೂ ಕಡೆ ರಕ್ಷಣಾ ಗೋಡೆ ನಿರ್ವಿುಸಬೇಕು, ರೈತರಿಗಾಗುವ ಹಾನಿ ತಪ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ಬಾಂದಾರ ಒಡೆದು ನೀರು ನುಗ್ಗಿ ಹಾಳಾಗಿರುವ ರೈತರ ಜಮೀನುಗಳಿಗೆ ಶೀಘ್ರವೇ ಭೇಟಿ ನೀಡಿ ಪರಿಶೀಲಿಸಲಾಗುವುದು. ಸಂಬಂಧಪಟ್ಟ ಗುತ್ತಿಗೆದಾರರನ್ನು ಕರೆಯಿಸಿ ಮನವೊಲಿಸಲಾಗುವುದು. ಇಲಾಖೆಯಿಂದ ಪ್ರತ್ಯೇಕ ಅನುದಾನ ಇಲ್ಲದಿರುವುದರಿಂದ ಆಯಾ ಗ್ರಾಪಂನವರು ನರೇಗಾ ಯೋಜನೆಯಡಿ ಬಾಂದಾರಗಳ ದುರಸ್ತಿಗೆ ಮುಂದಾದರೆ ಇಲಾಖೆ ವತಿಯಿಂದ ಮಾರ್ಗದರ್ಶನ ನೀಡುತ್ತೇನೆ.
| ವಿಜಯಕುಮಾರ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್

Stay connected

278,749FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...