ನೀತಿ ಸಂಹಿತೆ ಇದ್ದರೂ ಕ್ರೀಡಾಂಗಣ ಕಾಮಗಾರಿ ಸಲ್ಲ

ನೆಲಮಂಗಲ: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸುವಂತೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಲ್ಲಿಸಿದ ಮನವಿ ಸ್ಪಂದಿಸಿದ ತಹಸೀಲ್ದಾರ್ ಕೆ.ಎನ್. ರಾಜಶೇಖರ್ ಕಾಮಗಾರಿ ಸ್ಥಗಿತಗೊಳಿಸಿದರು.

ಗ್ರಾಮಾಂತರ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಮಂಗಳವಾರ ಬೆಳಗ್ಗೆ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜೆಸಿಬಿ ಮೂಲಕ ರನ್ನಿಂಗ್ ಟ್ರಾ್ಯಕ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಸ್ಥಳೀಯ ಜನಪ್ರತಿನಿಧಿಗಳು ಕಾಮಗಾರಿ ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ದೇವಿಕಾರಾಣಿಗೆ ದೂರವಾಣಿ ಮೂಲಕ ತಿಳಿಸಿದರೂ ಕಾಮಗಾರಿ ಮುಂದುವರಿಸಿದರು. ಇದರಿಂದ ಬೇಸತ್ತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಹಸೀಲ್ದಾರ್​ಗೆ ದೂರು ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳನ್ನು ಸಂರ್ಪಸಿದ ತಹಸೀಲ್ದಾರ್ ಕೆ.ಎನ್.ರಾಜಶೇಖರ್ ಕ್ರೀಡಾಂಗಣಕ್ಕೆ ತೆರಳಿ ಕಾಮಗಾರಿ ಸ್ಥಗಿತಗೊಳಿಸಿದರು.

ತಾಪಂ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್​ಕುಮಾರ್, ಸದಸ್ಯರಾದ ಎ.ಪಿಳ್ಳಪ್ಪ, ಆಂಜಿನಪ್ಪ, ಗಣೇಶ್, ನರಸಿಂಹಮೂರ್ತಿ, ಕ್ರೀಡಾಕ್ಲಬ್ ಕಾರ್ಯದರ್ಶಿ ಶರವಣ, ಮುಖಂಡರಾದ ನಾರಾಯಣರಾವ್, ಮಂಜುನಾಥ್ ಇದ್ದರು.

ಚುನಾವಣಾ ಆಯೋಗದ ಆದೇಶ ಗಾಳಿಗೆ ತೂರಿ ಕ್ರೀಡಾಂಗಣದ ಅಭಿವೃದ್ಧಿಗೆ ಮುಂದಾಗಿರುವ ಗುತ್ತಿಗೆದಾರ ಹಾಗೂ ಸಂಬಂಧಿಸಿದ ಅಧಿಕಾರಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

| ಎನ್.ಪಿ.ಹೇಮಂತ್​ಕುಮಾರ್ ಯೋಜನಾಪ್ರಾಧಿಕಾರ ಅಧ್ಯಕ್ಷ, ನೆಲಮಂಗಲ

ಕ್ರೀಡಾಂಗಣದಲ್ಲಿ ಅವೈಜ್ಞಾನಿಕವಾಗಿ ಟ್ರಾ್ಯಕ್ ನಿರ್ವಿುಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು.

| ಎಂ.ನಾರಾಯಣ್ ಪುರಸಭೆ ಸದಸ್ಯ

Leave a Reply

Your email address will not be published. Required fields are marked *