ಚಿತ್ರದುರ್ಗ: ಸರ್ಕಾರದ ನೀತಿ ನಿರೂಪಣೆ, ಯೋಜನೆಗಳ ಅನುಷ್ಠಾನಕ್ಕೆ ಸಾಂಖ್ಯಿಕ ಇಲಾಖೆ ದತ್ತಾಂಶಗಳೇ ಆಧಾರವೆಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಜಿಲ್ಲಾಡಳಿತದಿಂದ ಜಿಪಂನಲ್ಲಿ ಶುಕ್ರವಾರ ಏರ್ಪಡಿಸಿದ್ದ 2024-25ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳಾದ ಸಕಾಲಿಕ ವರದಿ ಮತ್ತು ಬೆಳೆ ಅಂಕಿ-ಅಂಶಗಳ ಸುಧಾರಣೆ ಸಂಬಂಧಿಸಿದಂತೆ ವಿಭಾಗ ಮಟ್ಟದ ಪುನರ್‌ಮನನ ತರಬೇತಿ ಕಾರ‌್ಯಾಗಾರದಲ್ಲಿ ಅವರು ಮಾತನಾಡಿದರು.
ಇಲಾಖೆ ಸಂಗ್ರಹಿಸುವ ದತ್ತಾಂಶಗಳು ಹೆಚ್ಚಿನ ಮಹತ್ವ ಹೊಂದಿದ್ದು, ಈ ಇಲಾಖೆ ಅಧಿಕಾರಿ, ಸಿಬ್ಬಂದಿ ಶ್ರಮ ಸಾರ್ವಜನಿಕರಿಂದ ಹೆಚ್ಚಿನ ಪ್ರಶಂಸೆಗೆ ಒಳಗಾಗುವುದಿಲ್ಲ. ಆದರೂ ಅಧಿಕಾರಿ, ಸಿಬ್ಬಂದಿ ಅವಿರತವಾಗಿ ದತ್ತಾಂಶಗಳನ್ನು ಮುತುವರ್ಜಿಯಿಂದ ಸಂಗ್ರಹಿಸುತ್ತಾರೆ ಎಂದರು.
ಯಾವುದೇ ಯೋಜನೆಗಳನ್ನು ಸರ್ಕಾರ ರೂಪಿಸಲು ಸಾಂಖ್ಯಿಕ ಇಲಾಖೆ ಮೂಲ ದತ್ತಾಂಶಗಳೇ ಆಧಾರ. ದತ್ತಾಂಶ ಸಂಗ್ರಹ ವೇಳೆ ತಾಂತ್ರಿಕ ಅಡಚಣೆಗಳು ಎದುರಾಗುತ್ತವೆ. ಈ ಕಾರ‌್ಯಾಗಾರದಲ್ಲಿ ಸಮಸ್ಯೆಗಳ ಕುರಿತಂತೆ ಚರ್ಚೆಯಾಗಲಿ. ತಂತ್ರಾಂಶ ಆಧಾರಿತ ಬೆಳೆ ಕಟಾವು ಪ್ರಯೋಗಗಳ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಅರಿತು ಸೂಕ್ತ ರೀತಿ ಅನುಷ್ಠಾನಕ್ಕೆ ಮುಂದಾಗಬೇಕಿದೆ. ಈ ಪ್ರಯೋಗದ ಸಂದರ್ಭದಲ್ಲಿ ಹಲವು ದೂರುಗಳನ್ನು ಈಗಾಗಲೇ ಎದುರಿಸಿದ್ದೇವೆ ಎಂದು ಎಚ್ಚರಿಸಿದರು.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನಿರ್ದೇಶಕ ಚಂದ್ರಶೇಖರ್‌ಗುಡಿ ಮಾತನಾಡಿ, ಕೃಷಿ-ಅಂಕಿ ಅಂಶಗಳ ಮಾಹಿತಿ, ಬೆಳೆ ಸಮೀಕ್ಷೆ ಸೇರಿದಂತೆ ಮಾಹಿತಿ ಸಂಗ್ರಹಣೆ ಕಾರ‌್ಯದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಗಾಗಿ, ಮಾಹಿತಿ ಸಂಗ್ರಹಣೆಯಲ್ಲಿ ನಿಖರತೆ ಬಹುಮುಖ್ಯ ಎಂದು ತಿಳಿಸಿದರು.
ಕಳೆದ ಬಾರಿ ನಡೆಸಿದ್ದ 1.35 ಲಕ್ಷ ಬೆಳೆ ಕಟಾವು ಪ್ರಯೋಗಗಳಲ್ಲಿ 35 ಸಾವಿರ ಪ್ರಯೋಗಗಳು ಸಮರ್ಪಕವಾಗಿರಲಿಲ್ಲ. ಇವುಗಳನ್ನು ಗಂಭೀರವಾಗಿ ನಡೆಸಬೇಕು. ಪ್ರಸ್ತುತ ಆರೋಗ್ಯ ಇಲಾಖೆ ಪ್ರಕಾರ ಶೇ.100 ಸಾಂಸ್ಥಿಕ ಹೆರಿಗೆಗಳು ಆಗುತ್ತಿವೆ. ಆದರೂ ಜನನ ನೋಂದಣಿಯಲ್ಲಿ ವಿಳಂಬವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಮನೆಯಲ್ಲೇ ಹೆರಿಗೆ ಆಗಿದೆ ಎಂದು ನೋಂದಣಿ ಮಾಡಿಸಲಾಗುತ್ತದೆ. ಈ ವೈರುಧ್ಯದಿಂದ ಈಗಲೂ ಶೇ.80 ಜನನ ಮನೆಯಲ್ಲೇ ಎಂದು ದತ್ತಾಂಶದಲ್ಲಿ ಬಿಂಬಿತವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಜನನ-ಮರಣ ನೋಂದಣಿ ತ್ವರಿತಕ್ಕೆ ಗ್ರಾಪಂ ಕಾರ‌್ಯದರ್ಶಿ ನೋಂದಣಿ ಅಧಿಕಾರಿಯಾಗಿದ್ದು, ಈ ನೋಂದಣಿ ತ್ವರಿತ ಹಾಗೂ ಶೇ.100 ಪ್ರಮಾಣದಲ್ಲಿ ಆಗಬೇಕೆಂದರು.
ಸಾಂಖ್ಯಿಕ ತಜ್ಞ ಪ್ರೊ.ಪಿ.ಸಿ. ಮಹಾಲನೋಬಿಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನಂತರ ಜನನ ಪ್ರಮಾಣ ಪತ್ರ ವಿತರಿಸಲಾಯಿತು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಎಂ. ಕಾರ್ತಿಕ್, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಕೃಷಿ ಅಂಕಿ-ಅಂಶ ಮತ್ತು ಬೆಳೆ ವಿಮಾ ವಿಭಾಗದ ಅಪರ ನಿರ್ದೇಶಕ ಗುರುರಾಜ್‌ರಾವ್, ಸಿಎನ್‌ಎಲ್ ವಿಭಾಗದ ಅಪರ ನಿರ್ದೇಶಕ ಬಸನಗೌಡ, ಕೃಷಿ ಅಂಕಿ-ಅಂಶ ವಿಭಾಗದ ಜಂಟಿ ನಿರ್ದೇಶಕ ಟಿ. ಶಶಿಧರ್, ಬೆಳೆವಿಮಾ ವಿಭಾಗದ ಜಂಟಿ ನಿರ್ದೇಶಕಿ ಲಲಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ, ಸಹಾಯಕ ನಿರ್ದೇಶಕರಾದ ಚಂದ್ರಕಲಾ, ಪುಷ್ಪಾ, ಸುಮಾ, ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ರವಿಕುಮಾರ್ ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.
ನೀತಿ ನಿರೂಪಣೆ, ಯೋಜನೆಗೆ ಸಾಂಖ್ಯಿಕ ಇಲಾಖೆ ದತ್ತಾಂಶಗಳೇ ಆಧಾರ
Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?
Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…
2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money
Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…
30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ
White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…