ನಿಸ್ವಾರ್ಥ ಸೇವೆಯಿಂದ ಬದಲಾವಣೆ ಸಾಧ್ಯ:ಸಂಸದ ಸಂಗಣ್ಣ

blank

ಕೊಪ್ಪಳ: ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಬದಲಾವಣೆ ತರಬಹುದು. ಅದೇ ಹಾದಿಯಲ್ಲಿ ನಡೆಯುತ್ತಿರುವ ಕಿನ್ನಾಳ ಪತ್ತಿನ ಸೌಹಾರ್ದ ಸಹಕಾರಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.


ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 1.3 ಕೋಟಿ ರೂ. ಮೊತ್ತದ ಉಗ್ರಾಣ ಮತ್ತು 20 ಲಕ್ಷ ರೂ. ಮೊತ್ತದ ಲಿಫ್ಟ್ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.


ಕಿನ್ನಾಳ ಮತ್ತು ಭಾಗ್ಯನಗರ ಭಾಗದ ಜನ ಶ್ರಮಿಕರು. ಪ್ರತೊಯೊಬ್ಬರೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ರಾಜ್ಯದ ಪಿಕಾರ್ಡ್ ಬ್ಯಾಂಕ್‌ಗಳ ಪೈಕಿ ಲಿಫ್ಟ್ ಹೊಂದಿದ ಬ್ಯಾಂಕ್ ಇದೇ ಮೊದಲಿರಬೇಕು. ರೈತರಿಗೆ ಕಾಲ ಕಾಲಕ್ಕೆ ರಸಗೊಬ್ಬರ, ಔಷಧ, ಶುದ್ಧ ಕುಡಿವ ನೀರಿನ ಘಟಕ, ಸೂಪರ್ ಮಾರ್ಕೆಟ್ ಸೇರಿ ಅನೇಕ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ. ಬೆಲೆ ಕುಸಿತ ಆದಾಗ ಉತ್ಪನ್ನ ರಕ್ಷಣೆಗೆ ಉಗ್ರಾಣ ನಿರ್ಮಿಸಿದ್ದು ಉತ್ತಮ ಕೆಲಸ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಬಳಸಿಕೊಂಡು ರೈತರ ಅಭಿವೃದ್ಧಿಗೆ ಶ್ರಮಿಸಿ ಎಂದರು.


ಆರ್‌ಕೆಡಿಸಿಸಿ ಅಧ್ಯಕ್ಷ ವಿಶ್ವನಾಥ ಪಾಟೀಲ್ ಮಾತನಾಡಿ, ಗ್ರಾಮ ಹಾಗೂ ಸುತ್ತಮುತ್ತಲಿನ ಭಾಗದ ಅಭಿವೃದ್ಧಿಗೆ ಉತ್ತಮ ಶಾಲೆ ಇರಬೇಕು. ಅದರಂತೆ ಕಿನ್ನಾಳ ಸಹಕಾರಿ ಸಂಘ ಎಲ್ಲ ಸಂಘಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ. ಸಂಘದ ಬೇಡಿಕೆಗಳನ್ನು ಈಡೇರಿಸಲು ಆರ್‌ಕೆಡಿಸಿಸಿ ಸದಾ ಸಿದ್ಧವಿದೆ ಎಂದರು.


ನಿರ್ದೇಶಕ ಅಮರೇಶ ಉಪಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಬಸವರಾಜ ಚಿಲವಾಡಗಿ, ನಬಾರ್ಡ ಡಿಡಿಎಂ ಮಹಾದೇವ ಕೀರ್ತಿ, ಸಹಕಾರ ಸಂಘದ ಉಪನಿಬಂಧಕ ದಸ್ತಗಿರಿ ಅಲಿ, ಇಫ್ಕೊ ವಲಯ ವ್ಯವಸ್ಥಾಪ ರಾಘವೇಂದ್ರ ಎನ್., ಮುಖಂಡರಾದ ವೆಂಕಟರಾಮ ದೇಸಾಯ, ಮನೋಹರರಾವ್ ದೇಸಾಯ, ನಿರ್ದೇಶಕಾರಾದ ವೀರಭದ್ರಪ್ಪ ಗಂಜಿ, ಮಹಾದೇವಯ್ಯ ಹಿರೇಮಠ, ಕೆ.ಮಲ್ಲಿಕಾರ್ಜುನ, ವಿರುಪಾಕ್ಷಪ್ಪ ಬಾರಕೇರ, ಮೋನೇಶ ಕಳ್ಳಿಮನಿ, ಈರಣ್ಣ ವಾಲ್ಮೀಕಿ ಇತರರಿದ್ದರು.

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…