More

  ನಿವೇಶನ ಹೊಂದಿರುವ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಿ

  ಚಿತ್ರದುರ್ಗ: ಕಾಲ, ಕಾಲಕ್ಕೆ ಸಫಾಯಿ ಕರ್ಮಚಾರಿಗಳಿಗೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಬೇಕೆಂದು ರಾಜ್ಯಸಫಾಯಿ ಕರ್ಮಚಾರಿಗಳ ಆಯೋಗ ದ ಕಾರ‌್ಯದರ್ಶಿ ಚಂದ್ರಕಲಾ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು. ಚಿತ್ರದುರ್ಗ ನಗರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮ ಟ್ಟದ ಸಫಾಯಿ ಕರ್ಮಚಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ಅಪಘಾತ, ಆರೋಗ್ಯ ವಿಮೆಯೊಂದಿಗೆ, ಸ್ವಚ್ಛತಾ ಕೆ ಲಸಕ್ಕೆ ಅಗತ್ಯವಿರುವ ಅಗತ್ಯವಿರುವ ಸುರಕ್ಷಾಧಿರಿಸು, ಸಮವಸ್ತ್ರಗಳನ್ನು ವಿತರಿಸಬೇಕೆಂದರು.
  ನಿವೇಶನವಿರುವ ಎಲ್ಲ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕು. ಇಎಸ್‌ಐ, ಪಿಎಫ್ ವಂತಿಕೆಯನ್ನು ನಿಗದಿತ ಸಮಯದೊಳಗೆ ಸಂದಾಯ ಮಾಡಬೇಕು. ಪ್ರತಿ ತಿಂಗಳು ಪೌರಕಾರ್ಮಿಕರಿಗೂ ವೇತನ ರಸೀದಿ ಕಡ್ಡಾಯ ನೀಡಬೇಕು. ಶೇ.24.10 ಯೋಜನೆಯಡಿ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ನಿಗದಿಪಡಿಸಿರುವ ಅನುದಾನವನ್ನು ಶಿಕ್ಷಣ, ವಸತಿ, ಕೌಶಲಾಭಿವೃದ್ಧಿಗೆ ವಿನಿಯೋಗಿಸಬೇಕು. ಪೌರಕಾರ್ಮಿಕ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕೆಂದು, ಅಗತ್ಯ ವಿಶ್ರಾಂತಿಗೃಹಗಳನ್ನು ನಿರ್ಮಿಸುವಂತೆ ನಿರ್ದೇಶನ ನೀಡಿದರು.
  ಪೌರ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನ ನ.7ರಂದು ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ‌್ಯಕ್ರಮವನ್ನು ಪ್ರತಿ ವರ್ಷ ಏರ್ಪಡಿಸ ಬೇಕೆಂದರು. ಅವಲಂಬಿತರಿಗೆ ಅವಶ್ಯಕ ಕೌಶಲ ತರಬೇತಿಗೆ ಪಡೆಯಲು ಅನುಕೂಲ ಮಾಡಿಕೊಡ ಬೇಕೆಂದರು. ಇದೇ ಚಂದ್ರಕಲಾ ಅವರು ಜಿಲ್ಲೆಯ ಪೌರಕಾರ್ಮಿಕರು ಹಾಗೂ ನೈರ್ಮಲ್ಯ ಸಿಬ್ಬಂದಿ ಮಾಹಿತಿ ಪಡೆದರು.
  ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್,ಚಿತ್ರದುರ್ಗ ನಗರಸಭೆ ಪೌರಾಯುಕ್ತ ಎಂ.ರೇಣುಕಾ, ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ರಾಜಣ್ಣ, ಚಳ್ಳಕರೆ ನಗರಸಭೆ ಪೌರಾಯುಕ್ತ ಚಂದ್ರಪ್ಪ, ಹಿರಿಯೂರು ನಗರಸಭೆ ಪೌರಾಯುಕ್ತ ಮಹಾಂತೇಶ್, ಎಇ ಜಾಫರ್‌ಸಾಬ್ ಮತ್ತಿತರರು ಇದ್ದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts