ಮೂಡಿಗೆರೆ: ಕಂದಾಯ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಟ್ಟು ಆ ಜಾಗವನ್ನು ಬಡವರಿಗೆ ನಿವೇಶನಕ್ಕಿಲ್ಲದಂತೆ ಮಾಡಲು ಅವಕಾಶ ನೀಡುವುದಿಲ್ಲ. ಖಾಲಿ ಜಾಗದಲ್ಲಿ ನೆಡುತೋಪು ಬೆಳೆಸಲು ಮುಂದಾದರೆ ನಿವೇಶನ ರಹಿತರಿಗೆ ಬದಲಿ ಜಾಗವನ್ನು ಅರಣ್ಯ ಇಲಾಖೆ ಒದಗಿಸಬೇಕು. ಇಲ್ಲವಾದರೆ ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಕಿತ್ತು ಅದೇ ಸ್ಥಳದಲ್ಲಿ ಧರಣಿ ನಡೆಸುವುದಾಗಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.
ನಿವೇಶನ ರಹಿತ ಬಡವರು ನಿವೇಶನ ಒದಗಿಸುವಂತೆ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಿ 15 ರಿಂದ 20 ವರ್ಷ ಕಳೆದಿದೆ. ನಿವೇಶನ ಒದಗಿಸಲು ಗ್ರಾಪಂಗಳಿಗೆ ಸಾಧ್ಯವಾಗಿಲ್ಲ. ನೆಡುತೋಪು ಬೆಳೆಸಲು ಅರಣ್ಯ ಇಲಾಖೆಗೆ ಕೋಟ್ಯಂತರ ರೂ. ಸರ್ಕಾರದಿಂದ ಬರುತ್ತದೆ. ಅದನ್ನು ಅರಣ್ಯ ಇಲಾಖೆ ಅಕಾರಿಗಳು ಖರ್ಚು ಮಾಡುವ ಸಲುವಾಗಿ ಖಾಲಿ ಉಳಿದಿರುವ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಗಿಡಹಾಕಿ ನೆಡುತೋಪು ಬೆಳೆಸಲು ಮುಂದಾಗುತ್ತಿದ್ದಾರೆ. ಅದಕ್ಕೆ ಜಿಲ್ಲಾಕಾರಿಗಳು ಅವಕಾಶ ನೀಡಬಾರದು. ಕಂದಾಯ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಅರಣ್ಯ ಇಲಾಖೆಯಿಂದ ಗಿಡ ನೆಡುವುದು ಕಂಡು ಬಂದರೆ ಅಂತಹ ಗಿಡಗಳನ್ನು ಕಿತ್ತು ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಲೆನಾಡು ಭಾಗದಲ್ಲಿ ಶೇ.48ರಷ್ಟು ಮೀಸಲು ಅರಣ್ಯಕ್ಕೆ ಸೇರಿದ ಜಾಗವಿದೆ. ಆ ಜಾಗದ ಪೈಕಿ ಒಂದಿಂಚು ಕೂಡ ಸಾರ್ವಜನಿಕ ಉಪಯೋಗಕ್ಕೆ ಅರಣ್ಯ ಇಲಾಖೆಯಿಂದ ನೀಡುತ್ತಿಲ್ಲ. ಖಾಲಿಯಾಗಿ ಉಳಿದಿರುವ ಜಾಗವನ್ನು ಅರಣ್ಯ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳುವ ಉದ್ದೇಶದಿಂದ ಹಾಗೂ ಅರಣ್ಯ ಇಲಾಖೆಯಿಂದ ಬರುತ್ತಿರುವ ಕೋಟ್ಯಂತರ ರೂ. ಅನುದಾನವನ್ನು ಖರ್ಚು ಮಾಡಿದ್ದೇವೆಂದು ತೋರಿಸುವ ಸಲುವಾಗಿ ಕಂಡ ಕಂಡ ಜಾಗಕ್ಕೆ ಗಿಡ ನೆಡುವುದು ಸರಿಯಲ್ಲ ಎಂದರು.
ಹಿಂದಿನ ಕಾಲದಲ್ಲಿ ಕಂದಾಯ ಇಲಾಖೆಗೆ ಸೇರಿದ ಲಕ್ಷಾಂತರ ಎಕರೆ ಜಾಗವನ್ನು ನೆಡುತೋಪು ಬೆಳೆಸುವ ಸಲುವಾಗಿ ಅರಣ್ಯ ಇಲಾಖೆಗೆ ಕಂದಾಯ ಇಲಾಖೆಯಿಂದ ಹಸ್ತಾಂತರಿಸಲಾಗಿತ್ತು. ಈಗ ಬಡವರಿಗೆ ನಿವೇಶನ ಒದಗಿಸುವ ಸಲುವಾಗಿ ಕಂದಾಯ ಇಲಾಖೆಯವರು ಆ ಜಾಗವನ್ನು ವಾಪಸು ಕೇಳಿದಾಗ ಕೊಡಲು ಅರಣ್ಯ ಇಲಾಖೆ ನಿರಾಕರಿಸಿದೆ. ಡೀಮ್ಡ್ ಅರಣ್ಯಕ್ಕೆ ಸೇರಿದ ಜಾಗದ ಪೈಕಿ ಕೆಲವು ಕಡೆ ನಿವೇಶನಕ್ಕಾಗಿ ಕಂದಾಯ ಇಲಾಖೆಯಿಂದ ಮಂಜೂರಾತಿ ನೀಡಿದರೂ ಕೂಡ ಆ ಜಾಗವನ್ನು ಅರಣ್ಯ ಇಲಾಖೆ ಬಿಟ್ಟು ಕೊಡುತ್ತಿಲ್ಲ. ಅದರ ವ್ಯಾಜ್ಯ ಈಗ ಸುಪ್ರೀಂ ಕೋರ್ಟಿನಲ್ಲಿದೆ. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ 2017ರಲ್ಲಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದರೂ ಇದುವರೆಗೂ ಆ ಜಾಗ ಮತ್ತೆ ಕಂದಾಯ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ. ಡೀಮ್ಡ್ ಾರೆಸ್ಟ್ ಜಾಗದ ವ್ಯಾಜ್ಯ ಪರಿಹಾರವಾಗುವ ಮುನ್ನವೆ ಖಾಲಿ ಇರುವ ಜಾಗಕ್ಕೆ ಅರಣ್ಯ ಇಲಾಖೆಯಿಂದ ಗಿಡ ನೆಟ್ಟು ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಕಬಳಿಸಲು ಹೊರಟಿದೆ. ನಿವೇಶನ ರಹಿತ ಬಡವರಿಗೆ ಅರಣ್ಯ ಇಲಾಖೆ ವಂಚಿಸುತ್ತಿದೆ. ಅದಕ್ಕೆ ಜಿಲ್ಲಾಕಾರಿಗಳು ಅವಕಾಶ ನೀಡಬಾರದು ಎಂದರು.
ನಿವೇಶನ ರಹಿತರಿಗೆ ಬದಲಿ ಜಾಗ ನೀಡಿ

You Might Also Like
ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar
Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…
ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits
Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…