ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರಿಡಲು ಸಿದ್ಧ

Latest News

ನಿವೇಶನ ನೀಡಲು ಮೀನಮೇಷ

ಶೃಂಗೇರಿ: ತಾಲೂಕು ಕಚೇರಿ ದನದ ದೊಡ್ಡಿಯಾಗಿದೆ. ಬಡವರಿಗೆ ನಿವೇಶನ ನೀಡಲು ಜಾಗವೇ ಇಲ್ಲ ಎನ್ನುವ ಅಧಿಕಾರಿಗಳು ಮಾನವೀಯತೆ ಮರೆಯುತ್ತಿದ್ದಾರೆ. ಹಾಗಿದ್ದರೆ ಕಚೇರಿಗೆ ಬೀಗ...

ಶಾಸಕರ ಅನುದಾನದಲ್ಲಿ ಶುದ್ಧ ಗಂಗಾ ಘಟಕ

ಅಜ್ಜಂಪುರ: ಚುನಾವಣೆ ವೇಳೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡು ಗ್ರಾಮೀಣ ಮತದಾರರು ನನ್ನ ಕೈಹಿಡಿದಿದ್ದಾರೆ. ಅವರ ಋಣ ತೀರಿಸುವ ಹೊಣೆ ನನ್ನ ಮೇಲಿರುವುದರಿಂದ ಗ್ರಾಮೀಣ...

ಸಚಿವ, ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ

ಚಿಕ್ಕಮಗಳೂರು: ಡಾ. ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಸುತ್ತೋಲೆ ಹೊರಡಿಸುವ ಮೂಲಕ ರಾಜ್ಯ ಶಿಕ್ಷಣ ಇಲಾಖೆ ಅಂಬೇಡ್ಕರ್ ಅವರನ್ನು ಅಪಮಾನಿಸಿದೆ ಎಂದು...

ಇನ್ನು ನಾಲ್ಕೈದು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್​-ಎನ್​ಸಿಪಿ ಮೈತ್ರಿ ಸರ್ಕಾರ ರಚನೆ; ಇಂದು ಸಂಜೆ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ

ಮುಂಬೈ: ಇಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ 50 ನಿಮಿಷ ಮಾತುಕತೆ ನಡೆಸಿದ್ದಾರೆ. ಅದಾದ ಬಳಿಕ ಎನ್​ಸಿಪಿ ಹಾಗೂ...

ಕಲ್ಲು ಪಾಚಿ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿ ಬಂಧನ

ಪಿರಿಯಾಪಟ್ಟಣ : ಪಟ್ಟಣ ವ್ಯಾಪ್ತಿಯ ತಾತನಹಳ್ಳಿ ಗೇಟ್ ಸಮೀಪ ಗುರುವಾರ ಅರಣ್ಯ ಪ್ರದೇಶಗಳಲ್ಲಿ ದೊರಕುವ ಕಲ್ಲು ಪಾಚಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ...

ಹುಬ್ಬಳ್ಳಿ: ಬಹುದಿನದ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಚೆನ್ನೈ ನೇರ ರೈಲ್ವೆ ಸೇವೆಗೆ ಶನಿವಾರ ಇಲ್ಲಿಯ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ಇಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಏರ್ಪಾಟಾಗಿದ್ದ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಅವರು ನೂತನ ರೈಲ್ವೆಗೆ ಹಸಿರು ನಿಶಾನೆ ತೋರಿಸಿದರು.

ಇದಕ್ಕೆ ಮುನ್ನ ನಡೆದ ಸಮಾರಂಭದಲ್ಲಿ ಅಣ್ಣಿಗೇರಿ-ಹುಲಕೋಟಿ (10.06 ಕಿ.ಮೀ.) ಜೋಡಿ ಮಾರ್ಗವನ್ನು ಲೋಕಾರ್ಪಣೆಗೊಳಿಸಲಾಯಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸುರೇಶ ಅಂಗಡಿ, ಹುಬ್ಬಳ್ಳಿ ಉತ್ತರ ಕರ್ನಾಟಕದ ಅತಿ ದೊಡ್ಡ ಮತ್ತು ಸುಂದರ ನಿಲ್ದಾಣ. ಇದಕ್ಕೆ ಶ್ರೀ ಸಿದ್ಧಾರೂಢರ ಹೆಸರಿಡುವಂತೆ ಸಚಿವ ಪ್ರಲ್ಹಾದ ಜೋಶಿವರು ಕೇಳಿದ್ದು, ರಾಜ್ಯ ಸರ್ಕಾರದಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ಈ ಕುರಿತು ಪ್ರಸ್ತಾವನೆ ಬಂದರೆ ಸಕಾರಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದರು.

ಹುಬ್ಬಳ್ಳಿ ನಿಲ್ದಾಣಕ್ಕೆ ಮತ್ತೆರಡು ಪ್ಲಾಟ್​ಫಾಮ್ರ್ ಒದಗಿಸಲಾಗುವುದು. ಬರುವ ಅಕ್ಟೋಬರ್ ವೇಳೆಗೆ ಗದಗ ರಸ್ತೆಯಿಂದ ಹುಬ್ಬಳ್ಳಿ ನಿಲ್ದಾಣ ಪ್ರವೇಶಕ್ಕೆ ಬಾಗಿಲು ನಿರ್ವಿುಸಿಕೊಡಲಾಗುವುದು ಎಂದು ಸಚಿವ ಜೋಶಿಯವರ ಬೇಡಿಕೆಗೆ ಉತ್ತರವಾಗಿ ತಿಳಿಸಿದರು.

ಬಹುದಿನಗಳ ಬೇಡಿಕೆಯಂತೆ ಹುಬ್ಬಳ್ಳಿಯಿಂದ ಚೆನ್ನೈಗೆ ನೇರ ರೈಲ್ವೆ ಸೇವೆ ಆರಂಭಿಸಲಾಗಿದೆ. ರೇಣಿಗುಂಟಾ ನಿಲ್ದಾಣದಿಂದ 9 ಕಿ.ಮೀ. ದೂರವಿರುವ ತಿರುಪತಿಗೆ ಹೋಗುವವರಿಗೂ ಈ ರೈಲು ಅನುಕೂಲಕರವಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈಲ್ವೆಗೆ ಬೇಕಾದಷ್ಟು ಹಣ ಕೊಡುತ್ತಿದೆ. ಬಾಗಲಕೋಟೆ-ಹುಬ್ಬಳ್ಳಿ ಜೋಡಿ ಮಾರ್ಗ ಕಾಮಗಾರಿಯನ್ನು ಚುರುಕುಗೊಳಿಸಲಾಗುತ್ತಿದೆ.

ರೈಲ್ವೆಯಲ್ಲಿ ಸುರಕ್ಷತೆ, ಸಮಯ ಪಾಲನೆ, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು ಕೂಡ ಇದಕ್ಕೆ ಸಹಕರಿಸಬೇಕು ಎಂದು ಸಚಿವರು ಕೋರಿದರು.

ಸಮಗ್ರ ರಾಜ್ಯದ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಕೋಟೆಗಂಗೂರಿನಲ್ಲಿ ಕೋಚ್ ಟರ್ವಿುನಲ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಹುಬ್ಬಳ್ಳಿ-ಚಿಕ್ಕಜಾಜೂರು ಜೋಡಿ ಮಾರ್ಗ ನಿರ್ವಣವನ್ನು ಶೀಘ್ರ ಪೂರ್ಣಗೊಳಿಸಿಕೊಡಬೇಕು. ಹುಬ್ಬಳ್ಳಿ-ವಾರಾಣಸಿ ರೈಲು ವಾರಕ್ಕೆ ಎರಡು ದಿನ ಸಂಚರಿಸುತ್ತಿದ್ದು, ಅದನ್ನು 3 ದಿನ ಓಡಿಸಬೇಕು ಎಂದು ರೈಲ್ವೆ ಸಚಿವರಿಗೆ ವಿನಂತಿಸಿದರು.

ದಾವಣಗೆರೆ-ಚಿತ್ರದುರ್ಗ ನೇರ ಮಾರ್ಗ ನಿರ್ವಣಕ್ಕೆ ಭೂಸ್ವಾಧೀನ ಆಗಿಲ್ಲ. 5 ವರ್ಷದ ಹಿಂದೆಯೇ ಮಂಜೂರಿಯಾಗಿರುವ ಕಾಮಗಾರಿ ಈ ಕಾರಣಕ್ಕಾಗಿ ಕುಂಠಿತಗೊಂಡಿದೆ. ಅದನ್ನು ಬೇಗ ಮಾಡಿಸಿ, ಹುಬ್ಬಳ್ಳಿಯಿಂದ 4-5 ತಾಸಿನಲ್ಲಿ ಬೆಂಗಳೂರು ತಲುಪಿಸುವಂಥ ರೈಲ್ವೆ ಸಾರಿಗೆ ಶುರುಮಾಡಬೇಕು ಎಂದು ಕೋರಿದರು.

ಸಂಪರ್ಕ ಸಾಧನಗಳು ಹೆಚ್ಚಿದರೆ ಅಭಿವೃದ್ಧಿ ಚುರುಕುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ-ಮುಂಬೈ ಮಧ್ಯೆ ಈಗ ವಾರಕ್ಕೆ 5 ದಿನ ಇರುವ ವಿಮಾನ ಸೇವೆಯನ್ನು ನವೆಂಬರ್​ನಿಂದ 7 ದಿನಕ್ಕೆ ವಿಸ್ತರಿಸಲಾಗುತ್ತದೆ. ಹೈದರಾಬಾದ ಸೇರಿ ಬೇರೆ ನಗರಗಳಿಗೂ ಸದ್ಯದಲ್ಲೇ ವಿಮಾನ ಸೇವೆ ಆರಂಭವಾಗಲಿದೆ ಎಂದು ತಿಳಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಹಾವೇರಿ-ಗದಗ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಗದಗ-ಯಲಿವಿಗಿ ಮಾರ್ಗವನ್ನು ಬೇಗ ಮಾಡಿಸಿಕೊಡಿ. ಗದಗ ನಿಲ್ದಾಣವನ್ನು ಅಭಿವೃದ್ಧಿಪಡಿಸಿಕೊಡಿ ಎಂದು ರೈಲ್ವೆ ಸಚಿವರಲ್ಲಿ ಕೋರಿದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ಬೆಂಗಳೂರು-ಸೊಲ್ಲಾಪುರ ನೇರ ರೈಲ್ವೆ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮಾಡಿಸಿಕೊಡಿ. ಕೊಪ್ಪಳ ನಿಲ್ದಾಣವನ್ನೂ ಆಧುನೀಕರಣ ಮಾಡಿಸಿ. ಕೊಪ್ಪಳಕ್ಕೆ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣವನ್ನು ಸಚಿವರಾದ ಜೋಶಿ ಮತ್ತು ಅಂಗಡಿ ಇಬ್ಬರೂ ಸೇರಿ ಮಾಡಿಸಿಕೊಡಿ ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಅವರು, ಅಣ್ಣಿಗೇರಿ-ಹುಲಕೋಟಿ ಜೋಡಿ ಮಾರ್ಗ ನಿರ್ವಣದಿಂದ ಸಂಚಾರ ದಟ್ಟಣೆ ತಪ್ಪಿದೆ ಎಂದರು. ಬಸವರಾಜ ಹೊರಟ್ಟಿ ಮಾತನಾಡಿ, ಹುಬ್ಬಳ್ಳಿ-ಚೆನ್ನೈ ರೈಲ್ವೆ ಆರಂಭಿಸಲು ಸಚಿವ ಪ್ರಲ್ಹಾದ ಜೋಶಿ ಪ್ರಯತ್ನಿಸಿದ್ದರು. ಇಬ್ಬರೂ ಸಚಿವರು ಅಭಿನಂದನಾರ್ಹ ಕೆಲಸ ಮಾಡಿದ್ದಾರೆ, ಮತ್ತಿಷ್ಟು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಿ ಎಂದರು. ಹುಬ್ಬಳ್ಳಿ ನಿಲ್ದಾಣದಲ್ಲಿ ಬೆಳಗ್ಗೆ ಆಟೋದವರ ಸಮಸ್ಯೆ ಇದೆ. ಪ್ರಿಪೇಡ್ ಆಟೋದಂಥ ವ್ಯವಸ್ಥೆ ಮಾಡಬೇಕು ಎಂದರು.

ಎಂಎಲ್​ಸಿ ಪ್ರದೀಪ ಶೆಟ್ಟರ್, ಇತರ ಗಣ್ಯರು ವಿಭಾಗೀಯ ಮಹಾಪ್ರಬಂಧಕ ರಾಜೇಶ ಮೋಹನ, ಇತರ ಅಧಿಕಾರಿಗಳು ಇದ್ದರು. ನೈಋತ್ಯ ರೈಲ್ವೆ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಸ್ವಾಗತಿಸಿದರು.

ಸ್ವಚ್ಛತೆ ಕಾಪಾಡಿ: ಹುಬ್ಬಳ್ಳಿ ನಿಲ್ದಾಣದ ಸ್ವಚ್ಛತೆ ವಿಷಯದಲ್ಲಿ ಪೂರ್ಣ ಸಮಾಧಾನ ಇಲ್ಲ. ಆದ್ದರಿಂದ ಸ್ವಚ್ಛತೆ ಮತ್ತು ಶಿಸ್ತನ್ನು ಕಾಪಾಡಲು ವಿಶೇಷ ನಿಗಾ ವಹಿಸಿ ಎಂದು ಸಚಿವ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದರು.

17 ರಿಂದ ಆರಂಭ: ಹುಬ್ಬಳ್ಳಿ-ಚೆನ್ನೈ ರೈಲ್ವೆಯ ಸಾಂಕೇತಿಕ ಉದ್ಘಾಟನೆ ಮಾತ್ರ ಶನಿವಾರ ನಡೆಯಿತು. ಈ ರೈಲ್ವೆ ಸೇವೆ ಸೆ. 17ರಂದು ಹುಬ್ಬಳ್ಳಿಯಿಂದ ಮತ್ತು 18ರಂದು ಚೆನ್ನೈನಿಂದ ಆರಂಭಗೊಳ್ಳಲಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ರಾತ್ರಿ 9.05ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲ್ವೆ ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಕಡಪ, ರೇಣಿಗುಂಟ, ಅರಕ್ಕೊಣಂ ಮೂಲಕ ಮರುದಿನ 10.50ಕ್ಕೆ ಚೆನ್ನೈ ಸೆಂಟ್ರಲ್ ತಲುಪಲಿದೆ. ಪ್ರತಿ ಬುಧವಾರ ಮತ್ತು ಶನಿವಾರ ಮಧ್ಯಾಹ್ನ 3 ಗಂಟೆಗೆ ಅಲ್ಲಿಂದ ಹೊರಡಲಿದೆ.

- Advertisement -

Stay connected

278,636FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...

VIDEO| ಶಾಸಕ ತನ್ವೀರ್​ ಸೇಠ್​ ಹಲ್ಲೆ ಪ್ರಕರಣ: ಪೊಲೀಸ್​ ವಿಚಾರಣೆ...

ಮೈಸೂರು: ಕಾಂಗ್ರೆಸ್​ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್‌ ಸೇಠ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್​ ವಿಚಾರಣೆಯ ವೇಳೆ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ತನ್ವೀರ್‌ ಸೇಠ್ ಹತ್ಯೆಗೆ ಈ ಹಿಂದೆ...

VIDEO: ಗೋಕಾಕ್​ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಲಖನ್​, ಸತೀಶ್​ ನಾಮಪತ್ರ ಸಲ್ಲಿಕೆ;...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...