ನಿರ್ವಹಣೆಯಿಲ್ಲದೆ ಸೊರಗಿದ ನಾಮದ ಚಿಲುಮೆ

ತುಮಕೂರು: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ನಾಮದ ಚಿಲುಮೆಯಲ್ಲಿ ಅರಣ್ಯ ಇಲಾಖೆ ನಿರ್ವಹಿಸುವ ‘ಸಿದ್ಧಸಂಜೀವಿನಿ ಔಷಧ ಸಸ್ಯವನ’ ಸಂಪೂರ್ಣ ಪಾಳು ಬಿದ್ದಿದ್ದು, ಪುನರುಜ್ಜೀವನಗೊಳಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ನಾಮದ ಚಿಲುಮೆ ಗತವೈಭವ ಮರುಕಳಿಸುವಂತೆ ಕೋರಿ ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅರಣ್ಯ ಸಚಿವರಿಗೆ ತುಮಕೂರಿನ ಸಾಮಾಜಿಕ ಹೋರಾಟಗಾರ ಆರ್.ವಿಶ್ವನಾಥನ್ ಮನವಿ ಸಲ್ಲಿಸಿದ್ದಾರೆ.

ನಾಮದ ಚಿಲುಮೆ ದೇವರಾಯನದುರ್ಗ ಅರಣ್ಯ ಪ್ರದೇಶದ ನಡುವೆ ಇರುವ ಸುಂದರ ತಾಣ. ನಿಸರ್ಗಧಾಮವಷ್ಟೇ ಅಲ್ಲದೆ, ಸಿದ್ಧ ಸಂಜೀವಿನಿ ಔಷಧ ಸಸ್ಯವನ ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗಿದೆ. 15 ವರ್ಷಗಳ ಹಿಂದೆ ಆಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ತೋರಿದ ಆಸಕ್ತಿ ಹಾಗೂ ಅಪಾರ ಪರಿಶ್ರಮದಿಂದ ನಾಮದ ಚಿಲುಮೆಯಲ್ಲಿ ಸಿದ್ಧಸಂಜೀವಿನಿ ಔಷಧ ಸಸ್ಯವನ ಸೃಷ್ಟಿಯಾಗಿದ್ದರಿಂದ ಆಕರ್ಷಣೆ ಹೆಚ್ಚಿಸಿತ್ತು.

ಸಾಕಷ್ಟು ವಿಶೇಷತೆಗಳಿರುವ ಸಸ್ಯವನ ಅರಣ್ಯ ಇಲಾಖೆ ಸಿಬ್ಬಂದಿಗೆ ಸಸ್ಯಗಳ ಬಗ್ಗೆ ಸೂಕ್ತ ತರಬೇತಿಗೂ ಬಳಕೆಯಾಗಿತ್ತು. ತುಮಕೂರು ಸೀಮೆಯಲ್ಲಿ ಪ್ರಥಮ ಬಾರಿಗೆ ಇಂತಹದೊಂದು ವನ ರೂಪುಗೊಂಡಿದ್ದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುವಂತೆ ಮಾಡಿತ್ತು. ಅಪರೂಪದ ಹಾಗೂ ವೈವಿಧ್ಯಮಯವಾದ ಅಸಂಖ್ಯಾತ ಔಷಧ ಸಸ್ಯಗಳಿಂದ ಕೂಡಿದ್ದ ಈ ವನ ಅಳಿವಿನಂಚಿಗೆ ಬಂದಿದೆ.

ಐತಿಹಾಸಿಕವಾಗಿಯೂ ಮಹತ್ವ ಪಡೆದಿರುವ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ನಾಮದಚಿಲುಮೆಯ ಪ್ರಮುಖ ಆಕರ್ಷಣೆಯಾಗಿದ್ದ ಸಿದ್ಧೌಷಧ ಸಸ್ಯವನ ಮರು ನಿರ್ವಣದಿಂದ ಪ್ರವಾಸೋದ್ಯಮ ಉತ್ತೇಜಿಸುವ ಜತೆಗೆ ಔಷಧ ಸಸ್ಯಗಳ ಸಂರಕ್ಷಣೆ ಸಾಧ್ಯ.

| ಎಸ್.ಆರ್.ವಿಶ್ವನಾಥನ್, ಸಾಮಾಜಿಕ ಕಾರ್ಯಕರ್ತ

Leave a Reply

Your email address will not be published. Required fields are marked *