ನಿರ್ಲಕ್ಷ್ಯದಿಂದ ನಶಿಸುತ್ತಿರುವ ಐತಿಹಾಸಿಕ ಸ್ಮಾರಕಗಳು

Latest News

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹಂತಕ ರಾಬರ್ಟ್​ ಪಯಾಸ್​ಗೆ ಒಂದು ತಿಂಗಳ ಪರೋಲ್​

ಚೆನ್ನೈ: ಮಾಜಿ ಪ್ರಧಾನ ಮಂತ್ರಿ ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ರಾಬರ್ಟ್ ಪಯಾಸ್​ಗೆ ಮದ್ರಾಸ್​ ಹೈಕೋರ್ಟ್​ ಗುರುವಾರ 30 ದಿನಗಳ ಪರೋಲ್​...

ಡಿಕೆಶಿ ಗೆ ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತ ನೀಡಿದ ಅಭಿಮಾನಿಗಳು

ವಿಜಯವಾಣಿ ಸುದ್ದಿಜಾಲ, ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ನಗರದಲ್ಲಿ ಗುರುವಾರ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಭರ್ಜರಿ ಸ್ವಾಗತಿಸಿದರು.ಗೋಕುಲ ರಸ್ತೆ ವಿಮಾನ...

ನಾಳೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗುತ್ತಿದ್ದಾರೆ ನಟ, ನೇತಾರ ಕಮಲ್ ಹಾಸನ್

ಚೆನ್ನೈ: ಮಕ್ಕಳ್ ನೀದಿ ಮೈಯ್ಯಮ್(ಎಂಎನ್​ಎಂ) ಪಕ್ಷ ಸ್ಥಾಪಕ ನಟ ಕಮಲ್ ಹಾಸನ್ ನಾಳೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಮುಖ ಸರ್ಜರಿಗೆ ಒಳಗಾಗಲಿದ್ದಾರೆ ಎಂದು...

ರಕ್ಷಣಾ ಸಮಿತಿಗೆ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​ ಆಯ್ಕೆ: ಇದು ದೇಶಕ್ಕೆ ಮಾಡಿದ ಅಪಮಾನವೆಂದ ಕಾಂಗ್ರೆಸ್​

ನವದೆಹಲಿ: ಮಾಲೆಗಾಂವ್​ ಸ್ಪೋಟ(2008) ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೇತೃತ್ವದ 21 ಸದಸ್ಯರ...

ಶಾಸಕ ತನ್ವೀರ್​ ಸೇಠ್​ ಕಿವಿ ಕೆಳ ಭಾಗದಲ್ಲಿ ಊನ; ಆಪರೇಷನ್​ ನಡೆಸಿದ ವೈದ್ಯರು

ಮೈಸೂರು: ಶಾಸಕ‌ ತನ್ವೀರ್‌ಸೇಠ್ ದೇಹದಲ್ಲಿ ಕಿವಿ ಕೆಳಭಾಗಕ್ಕೆ ಹೊಲಿಗೆ ಹಾಕಲಾಗಿದ್ದ ಸ್ಥಳದಲ್ಲಿ ಊನ ಕಂಡುಬಂದಿದೆ. ಹೊಲಿಗೆ ಹಾಕಿದ್ದ ಭಾಗ ಕಪ್ಪನೆಯ ಬಣ್ಣಕ್ಕೆ ತಿರುಗಿದ್ದರಿಂದ...

ಶ್ರೀಕರ ಜೋಷಿ ಸುರಪುರ
ಇತಿಹಾಸದಲ್ಲಿ ಸುರಪುರ ತನ್ನದೆ ಆದ ವಿಶೇಷ ಸ್ಥಾನ -ಮಾನ ಹೊಂದಿದೆ. ಇಲ್ಲಿನ ಸ್ಮಾರಕಗಳು, ದೇವಸ್ಥಾನ, ಕೋಟೆ ಕೊತ್ತಲಗಳು, ನದಿ, ಬೆಟ್ಟ ಗುಡ್ಡಗಳು, ಏಷ್ಯಾದ ಅತಿ ದೊಡ್ಡ ಬೋನಾಳ ಕೆರೆ ಹಾಗೂ ಪಕ್ಷಿಧಾಮ, ದೇವರ ದಾಸೀಮಯ್ಯರಂತಹ ಅನೇಕ ವಚನಕಾರರ ನೆಲೆಬೀಡಾಗಿದೆ.

ಇಂತಹ ಗತ ವೈಭವ ಸಾರುತ್ತದೆ ಸುರಪುರ ತಾಲೂಕು. ಅದರಲ್ಲೂ ವಿಶೇಷವಾಗಿ ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಗೋಸಲ ವಂಶದ ಅರಸರ ಅರಮನೆ, ಕೋಟೆಗಳಿಂದ ಊರಿನ ಮೆರಗು ಇನ್ನಷ್ಟು ಹೆಚ್ಚಿಸಿಕೊಂಡಿದೆ.

ಈ ಊರು ದೇಶದ ಪ್ರವಾಸಿ ತಾಣಗಳಲ್ಲಿ ಒಂದಾಗಿ ಇಡೀ ವಿಶ್ವವನ್ನು ತನ್ನತ್ತ ಸೆಳೆಯಬೇಕಾಗಿತ್ತು. ಆದರೆ ಆಳುವ ಸರ್ಕಾರ, ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ಹಿಂದುಳಿದು ಸ್ಮಾರಕಗಳು ನಶಿಸುತ್ತಿರುವುದು ನೊವಿನ ಸಂಗತಿಯಾಗಿದೆ.

ಇಷ್ಟೆಲ್ಲ ಪ್ರವಾಸಿ ಸ್ಥಾನಗಳಿರುವ ನಗರದಲ್ಲಿ ಒಂದು ಸುಸಜ್ಜಿತವಾದ ಸರ್ಕಾರಿ ಪ್ರವಾಸಿ ಮಂದಿರವಿಲ್ಲ. 1850ರ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತಾಧಿಕಾರಿ ಮೆಡಸ್ ಟೇಲರ್ ತನ್ನ ವಸತಿಗಾಗಿ ನಿರ್ಮಿಸಿಕೊಂಡಿರುವ ಐತಿಹಾಸಿಕ ಬಂಗಲೆಯೇ ಈಗ ಪ್ರವಾಸಿ ಮಂದಿರವಾಗಿ ಉಪಯೋಗಿಸಲಾಗುತ್ತಿದೆ.

ಇತಿಹಾಸದ ಒಂದು ಕಲ್ಲನ್ನು ಪ್ರಾಚ್ಯವಸ್ತು ಇಲಾಖೆ ತನ್ನ ಅಧೀನಕ್ಕೆ ಪಡೆದು, ಅದನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಆದರೆ ಐತಿಹಾಸಿಕ ಟೈಲರ್ ಮಂಜಿಲ್ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿಸುವ ಬದಲು ಅದನ್ನೆ ಪ್ರವಾಸಿ ಮಂದಿರವಾಗಿಸಿರೋದು ವಿಪರ್ಯಾಸ. ಸರ್ಕಾರದ ಯಾವುದೇ ಅಧಿಕಾರಿಗಳು, ಸಚಿವ, ಶಾಸಕರು, ಇತರೆ ಜನಪ್ರತಿನಿಧಿಗಳು ಬಂದರು ಎಲ್ಲರಿಗೂ ಆಶ್ರಯವಾಗಿರೋದು ಈ ಟೇಲರ್ ಮಂಜಿಲ್. ಪಕ್ಕದಲ್ಲಿಯೇ ಪ್ರವಾಸಿ ಮಂದಿರ ನಿರ್ಮಿಸಿದರು, ನಿರ್ವಹಣೆ ಇಲ್ಲದಂತಾಗಿದೆ.

ನಗರದ ಹಳೇ ದರಬಾರ ವಿನ್ಯಾಸವೂ ಇಂಗ್ಲೆಂಡಿನ ಬಂಕಿಂಗ್ಹ್ಯಾಮ ಅರಮನೆಯ ವಿನ್ಯಾಸ ಹೊಂದಿದ್ದು, ಇಡೀ ಭಾರತದಲ್ಲೇ ವಿಶಿಷ್ಟವಾಗಿದೆ. ದರಬಾರ್ದ ಸದ್ಯದ ಇಗಿನ ಸ್ಥಿತಿ ಹದಗೆಟ್ಟಿದೆ. ಸರ್ಕಾರ ಶಾಲೆ ನಡೆಸುವ ನೆಪದಲ್ಲಿ ಆ ವಿನ್ಯಾಸವನ್ನು ಕೆಡವಿ ಕೊಠಡಿ ನಿರ್ಮಿಸಿ ಸ್ಮಾರಕ ನಾಶಮಾಡಿದೆ ಎನ್ನುವುದು ಐತಿಹಾಸಿಕ ನಗರಕ್ಕೆ ಮಾಡಿದ ದೊಡ್ಡ ನಷ್ಟವಾಗಿದೆ ಎಂದು ನಗರದ ನಿವಾಸಿಗಳು ನೊಂದು ಹೇಳುತ್ತಾರೆ.

ಪ್ರವಾಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆ ಇನ್ನಾದರು ಎಚ್ಚೆತ್ತು ಐತಿಹಾಸಿಕ ನಗರವಾಗಿರುವ ಸುರಪುರ ಮೆರಗಿಗೆ ಗರಿಯಂತಿರುವ ಟೇಲರ್ ಮಂಜಿಲ್ ಕಟ್ಟಡ ಮತ್ತು ಇನ್ನಿತರ ಐತಿಹಾಸಿಕ ತಾಣಗಳನ್ನು ಪ್ರವಾಸಿಗರ ಭೇಟಿಯ ಸ್ಥಳವಾಗಿಸಿ ಮಾರ್ಪಡಿಸಬೇಕು ಎಂಬುದು ಸರ್ವರ ಒಕ್ಕೂರಲ ಆಗ್ರಹವಾಗಿದೆ.

ಸುರಪುರದ ಅನೇಕ ಐತಿಹಾಸಿಕ ಸ್ಥಳಗಳ ರಕ್ಷಣೆ ಮತ್ತು ಪುನಶ್ಚೇತನಗೊಳಿಸಲು 2012ರಲ್ಲಿ ಭಾರತಕ್ಕೆ ಬಂದಾಗ ಕಮೀಷನರ್ ಅವರಿಗೆ ಮನವಿ ಮಾಡಿದ್ದೆ. ಆದರೆ ಇದುವರೆಗೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲದಿರುವುದು ಬೇಸರ ಸಂಗತಿಯಾಗಿದೆ.
| ಅಲ್ಬರ್ಟೋ ಟೇಲರ್, ಮೇಡಸ್ ಟೇಲರ್ ಮೊಮ್ಮಗ, ಕ್ಯಾಲಿಫೋರ್ನಿಯಾ

ಸುರಪುರದ ಸ್ಮಾರಕಗಳ ರಕ್ಷಣೆ ಮತ್ತು ಸಂಶೋಧನೆ ಕಾರ್ಯ ಸರ್ಕಾರದಿಂದಾಗಬೇಕು. ಇಲ್ಲಿನ ಇತಿಹಾಸದ ಕುರಿತು ಜನರಿಗೆ ತಿಳಿಸುವ ಕೆಲಸವಾಗಬೇಕು ಹಾಗೂ ಪ್ರೇಕ್ಷಣೀಯ ಸ್ಥಳವನ್ನಾಗಿಸಿದರೆ ಪ್ರವಾಸಿಗರಿಂದ ಲಾಭ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಯಾಗುತ್ತವೆ.
| ಭಾಸ್ಕರಾವ್ ಮೂಡಬೂಳ, ಇತಿಹಾಸಕಾರರು

- Advertisement -

Stay connected

278,645FansLike
573FollowersFollow
611,000SubscribersSubscribe

ವಿಡಿಯೋ ನ್ಯೂಸ್

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ರಸ್ತೆಯಲ್ಲಿ ಎಂಬಿಎ ವಿದ್ಯಾರ್ಥಿನಿಯ ವಿಭಿನ್ನ ನೃತ್ಯ; ಇದು ಮನರಂಜನೆಗೆ...

ಇಂದೋರ್​: ವಾಹನ ಸವಾರರಿಗೆ ಟ್ರಾಫಿಕ್​ ನಿಯಮಗಳನ್ನು ಅರ್ಥ ಮಾಡಿಸುವುದು ಟ್ರಾಫಿಕ್​ ಪೊಲೀಸರಿಗೆ ದೊಡ್ಡ ಸಾಹಸವೇ ಸರಿ. ಬೈಕ್​ ಸವಾರರು ಹೆಲ್ಮೆಟ್​ ಧರಿಸುವುದಿಲ್ಲ, ಕಾರು ಚಾಲಕರು ಸೀಟ್​ ಬೆಲ್ಟ್​ ಹಾಕಿಕೊಂಡಿರುವುದಿಲ್ಲ...ಅದರೊಟ್ಟಿಗೆ ಬೇಕಾಬಿಟ್ಟಿ ಚಾಲನೆ ಬೇರೆ....

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...

VIDEO| ಜೆಎನ್​ಯು ವಿದ್ಯಾರ್ಥಿಗಳ ಹೆಸರಿನಲ್ಲಿ ವೈರಲ್​ ಆಗಿದ್ದ ವಿಡಿಯೋದ ಅಸಲಿಯತ್ತು...

ನವದೆಹಲಿ: ಪಾಕಿಸ್ತಾನದ ಲಾಹೋರ್​​ನಲ್ಲಿ ನಡೆದಿದ್ದ ಫೈಜ್​ ಸಾಹಿತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ಕೂಗಿದ್ದ "ಆಜಾದಿ" ಘೋಷಣೆಯ ವಿಡಿಯೋವನ್ನು ದೆಹಲಿಯ ಜವಹರ್​ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್​ಯು)ದ ವಿದ್ಯಾರ್ಥಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಶೇರ್​ ಮಾಡಲಾಗಿದೆ. "ಜೆಎನ್​ಯು...

VIDEO| ಮೀಮ್ಸ್​ ವಿಡಿಯೋ ಹರಿಬಿಡುವ ಮೂಲಕ ಸೋದರ ರಮೇಶ್​ ಜಾರಕಿಹೊಳಿಗೆ...

ಬೆಳಗಾವಿ: ಗೋಕಾಕ್​ ಕ್ಷೇತ್ರದ ಉಪಚುನಾವಣೆಯ ಕದನ ತೀವ್ರ ಕುತೂಹಲ ಮೂಡಿಸಿದೆ. ಸಹೋದರರ ನಡುವಿನ ಜಿದ್ದಾಜಿದ್ದಿಯೇ ಅದಕ್ಕೆ ನೇರ ಕಾರಣವಾಗಿದೆ. ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಬಿಜೆಪಿ ಸೇರಿಕೊಂಡಿರುವ ಸೋದರ ರಮೇಶ್​ ಜಾರಕಿ...