Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ನಿರ್ಮಾಪಕರು ಕಂಡಂತೆ

Friday, 12.01.2018, 3:04 AM       No Comments

ನಿರೂಪಣೆ: ಅವಿನಾಶ್ ಜಿ. ರಾಮ್ ಬೆಂಗಳೂರು

ಆರ್​ಜೆ ದಾನಿಶ್ ಸೇಠ್ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಂಡಿರುವ ‘ಹಂಬಲ್ ಪೊಲಿಟಿಶಿಯನ್ ನೊಗ್​ರಾಜ್’ ಚಿತ್ರ ಇಂದು (ಜ. 12) ತೆರೆಕಾಣುತ್ತಿದೆ. ಈ ಚಿತ್ರದ ವಿಶೇಷತೆಗಳಲ್ಲಿ ಪ್ರಮುಖವಾದುದು ನಿರ್ವಪಕರ ಸಂಗಮ! ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ‘..ನೊಗ್​ರಾಜ್’ಗೆ ಬಂಡವಾಳ ಹಾಕಿದ್ದಾರೆ. ತೆರೆ ಹಿಂದೆ ದುಡಿದಿರುವ ಅವರು ಈ ಪೊಲಿಟಿಕಲ್ ಡ್ರಾಮಾ ಚಿತ್ರಕ್ಕೆ ಹಣ ಹೂಡಲು ಮುಂದಾಗಿದ್ದೇಕೆ ಮತ್ತು ಅವರಿಗೆ ಈ ಪ್ರಯೋಗದ ಮೇಲೆ ಎಷ್ಟು ಭರವಸೆ ಇದೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.

ಪ್ರೇಕ್ಷಕನಾಗೇ ಸಿನಿಮಾ ನೋಡಿದೆ 

ಎಲ್ಲರೂ ಒಟ್ಟಿಗೆ ಸೇರಿ ಸಿನಿಮಾ ಮಾಡಬೇಕು ಎಂಬುದು ನನ್ನ ಪ್ಲಾ್ಯನ್ ಆಗಿತ್ತು. ಅದಕ್ಕೆ ಸರಿಯಾಗಿ ‘ಕಿರಿಕ್ ಪಾರ್ಟಿ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಂದರ್ಭದಲ್ಲಿ ನಿರ್ವಪಕ ಪುಷ್ಕರ್ ‘ಹಂಬಲ್..’ ಕಥೆಯನ್ನು ನಮಗೆಲ್ಲ ಕೇಳಿಸಿದರು. ಎಲ್ಲರಿಗೂ ಇಷ್ಟ ಆಗಿದ್ದರಿಂದ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾದೆವು. ನಿರ್ದೇಶಕ ಸಾದ್ ಖಾನ್ ಅಥವಾ ದಾನಿಶ್​ಗೆ

ನಾನೇನೂ ಜಾಸ್ತಿ ಸಲಹೆ-ಸೂಚನೆಗಳನ್ನು ನೀಡಿರಲಿಲ್ಲ. ಕಾರಣ, ಸ್ಕ್ರಿಪ್ಟ್ ಮಾಡುವ ಹಂತದಲ್ಲೇ ಅವರು ಪಕ್ಕಾ ಯೋಜನಾಬದ್ಧವಾಗಿ ಕೆಲಸ ಮಾಡಿದ್ದರು. ಪ್ರಾಥಮಿಕ ಕೆಲಸಗಳನ್ನು ಅಚ್ಚುಕಟ್ಟಾಗಿ ಅವರು ಮುಗಿಸಿದ್ದರು. ನಂತರ ಅಲ್ಲಿ ನನಗೇನೂ ಹೇಳುವುದಕ್ಕೆ ಇರಲಿಲ್ಲ. ಈ ಸಿನಿಮಾದ ಸ್ಪೆಷಾಲಿಟಿ ಎಂದರೆ, ಉತ್ತಮ ಸಂದೇಶವೊಂದನ್ನು ಸಾಕಷ್ಟು ಮನರಂಜನೆಯೊಂದಿಗೆ ಬೆರೆಸಿ ಹೇಳಿರುವುದು. ವೈಯಕ್ತಿಕವಾಗಿ ‘ಹಂಬಲ್..’ನ ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯ್ತು. ಪ್ರೇಕ್ಷಕರನ್ನು ನಗಿಸುತ್ತಲೇ ಅವಶ್ಯಕವಾದ ಸಂದೇಶವನ್ನು ದಾಟಿಸುವ ಸಾಮರ್ಥ್ಯ ಈ ಸಿನಿಮಾಕ್ಕಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಎಷ್ಟೇ ಎಂಜಾಯ್ ಮಾಡಿದರೂ, ಹೊರಗೆ ಬಂದ ಮೇಲೆ ಗಂಭೀರ ಚಿಂತನೆಗೆ ಹಚ್ಚುವಂತೆ ಮಾಡುವ ಅಂಶ ಚಿತ್ರದಲ್ಲಿದೆ. ರಾಜಕೀಯ ವಿಚಾರದಲ್ಲಿ ಜನಸಾಮಾನ್ಯರು ಮಾಡುವ ತಪ್ಪುಗಳನ್ನು ಕನ್ನಡಿಯಂತೆ ಈ ಸಿನಿಮಾ ತೋರಿಸುತ್ತದೆ. ಈ ಚಿತ್ರದ ನಿರ್ದೇಶಕ ಸಾದ್ ಖಾನ್ ಒಬ್ಬ ಉತ್ತಮ ತಂತ್ರಜ್ಞ.

ಈ ಹಿಂದೆ ಕಡಿಮೆ ಬಜೆಟ್​ನಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದರು. ಬಜೆಟ್ ಇಲ್ಲದೆಯೇ ಅಷ್ಟು ಚೆನ್ನಾಗಿ ಸಿನಿಮಾ ಮಾಡುವ ವ್ಯಕ್ತಿಗೆ ಉತ್ತಮ ಬಜೆಟ್ ಕೊಟ್ಟಾಗ ಇನ್ನೂ ಚೆನ್ನಾಗಿ ಮಾಡಲಿದ್ದಾರೆ ಎಂಬ ವಿಶ್ವಾಸ ನಮ್ಮಲ್ಲಿತ್ತು. ಚಿತ್ರದಲ್ಲಿ ಇಂಗ್ಲಿಷ್ ಬಳಕೆ ಇದ್ದರೂ, ಆದರೂ ತ್ರಾಸೆನಿಸುವುದಿಲ್ಲ. ನನ್ನ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸ್ಕ್ರಿಪ್ಟ್ ನಲ್ಲೇ ನಾನು ಬಿಜಿಯಾಗಿದ್ದೆ. ಹಾಗಾಗಿ, ‘..ನೊಗ್​ರಾಜ್’ ಶೂಟಿಂಗ್ ಸೆಟ್​ಗೆ ಹೋಗಿದ್ದು ತುಂಬ ಕಡಿಮೆ. ಎಲ್ಲ ಕೆಲಸಗಳನ್ನು ಪುಷ್ಕರ್ ಅವರೇ ನೋಡಿಕೊಂಡಿದ್ದಾರೆ. ನಾನು ನಟಿಸುವ ಸಿನಿಮಾವನ್ನು ರಿಲೀಸ್​ಗೂ ಮೊದಲು ನೂರಾರು ಸಲ ನೋಡುತ್ತೇನೆ. ಈ ‘..ನೊಗ್​ರಾಜ್’ನನ್ನು ಪ್ರೀಮಿಯರ್​ನಲ್ಲಿ ಪ್ರೇಕ್ಷಕನಾಗಿ ನೋಡಬೇಕು ಎಂಬ ಆಸೆ ಇತ್ತು. ಸ್ಕ್ರಿಪ್ಟ್ ಮೇಲೆ ಬಲವಾದ ನಂಬಿಕೆ ಇದ್ದಿದ್ದರಿಂದ ಸಿನಿಮಾ ಉತ್ತಮವಾಗಿ ಬರಲಿದೆ ಎಂಬ ವಿಶ್ವಾಸ ಇತ್ತು. ಇನ್ನು, ಪುನೀತ್ ರಾಜ್​ಕುಮಾರ್ ಈಗಾಗಲೇ ಸಿನಿಮಾ ನೋಡಿದ್ದಾರೆ. ನಮಗೆ ಸಿನಿಮಾದ ಮೇಲೆ ಕಾನ್ಪಿಡೆನ್ಸ್ ಇದ್ದಿದ್ದರಿಂದ ರಿಲೀಸ್​ಗೂ ಮೊದಲೇ ತೋರಿಸಿದೆವು. ಅವರು ಕುಟುಂಬ ಸಮೇತ ಸಿನಿಮಾ ನೋಡಿ ಎಂಜಾಯ್ ಮಾಡಿದರು. ಚುನಾವಣೆ ಸಂದರ್ಭದಲ್ಲೇ ತೆರೆಗೆ ಬರುತ್ತಿರುವುದು ಕಾಕತಾಳೀಯ. ಈ ಸಿನಿಮಾ ನೋಡಿ, ಜನ ಸಂಪೂರ್ಣ ಚೇಂಜ್ ಆಗು ತ್ತಾರೆ ಅಂತೆಲ್ಲ ಹೇಳು ವುದಿಲ್ಲ. ಆದರೆ, ಸಣ್ಣ ಬದಲಾವಣೆ ಯಾದರೂ ಸಾಕು.

ರಕ್ಷಿತ್ ಶೆಟ್ಟಿ

 **********

 ಸಿನಿಮಾ ಲಾಭವನ್ನೇ ಸಿನಿಮಾಗೆ ಚೆಲ್ಲಿ

ನನ್ನ ಮೊದಲ ಚಿತ್ರ ‘ಗೋಧಿ ಬಣ್ಣ..’ ಮಾಡುವಾಗ ನಾನು ಚಿತ್ರರಂಗಕ್ಕೆ ನಿರ್ದೇಶಕನಾಗಿ ಹೊಸಬ. ನಿರ್ವಪಕರಿಗಾಗಿ ತುಂಬ ಹುಡುಕಾಟ ನಡೆಸಿದೆ. ಅಂತಿಮವಾಗಿ ನಾನೇ ಸಿನಿಮಾ ಶುರು ಮಾಡಿದೆ. ಆನಂತರ ನಿರ್ವಪಕರಾಗಿ ಪುಷ್ಕರ್ ಜತೆಯಾದರು. ‘ಚಿತ್ರದಿಂದ ದುಡ್ಡು ಬಂದರೆ, ಅದನ್ನು ಸಿನಿಮಾಗೇ ವಿನಿಯೋಗಿಸಬೇಕು’ ಎಂದು ಮಾತಾಡಿ ಕೊಂಡಿದ್ದೆವು. ಅದರಂತೆಯೇ ‘..ನೊಗ್​ರಾಜ್’ ಕಥೆ ಸಿಕ್ಕಿತು. ಇಡೀ ತಂಡ ವೃತ್ತಿಪರತೆ ಯಿಂದ ಕೂಡಿತ್ತು. ಅದು ನಮಗೆ ಬಹಳ ಹಿಡಿಸಿತು. ನಾವಿಲ್ಲಿ ಯಾರೋ ಒಬ್ಬರಿಗೆ ಅವಕಾಶ ನೀಡಬೇಕು ಎಂದುಕೊಂಡು ಈ ನಿರ್ವಣಕ್ಕೆ ಕೈಹಾಕಿಲ್ಲ. ಎಲ್ಲರೂ ಒಟ್ಟಿಗೆ ಕೆಲಸ ಮಾಡುವುದು ನಮ್ಮ ಉದ್ದೇಶವಾಗಿತ್ತು. ಈ ರೀತಿ ಮಾಡಿದಾಗ ಕನ್ನಡ ಚಿತ್ರರಂಗದಲ್ಲಿ ಒಂದು ರೀತಿಯ ಬಾಂಧವ್ಯ ವೃದ್ಧಿಯಾಗಲಿದೆ. ಹೊಸ ಹೊಸ ಬಗೆಯ ಕಥೆಗಳ ಅನ್ವೇಷಣೆಯಾಗಲಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ‘..ನೊಗ್​ರಾಜ್’ಗೆ ಹಣ ಹೂಡಲು ಮುಂದಾದೆವು. ನಾನು ನಿರ್ದೇಶಕನಾಗಿರುವುದರಿಂದ ಕೆಲವೊಂದು ಸಲಹೆಗಳನ್ನು ನೀಡಿದ್ದೇನೆ. ಸಾದ್ ಬರೆದ ಕಥೆಗೆ ನಾನು ಸ್ಕ್ರಿಪ್ಟ್ ಡಾಕ್ಟರ್ ರೀತಿ ಕೆಲಸ ಮಾಡಿದ್ದೇನೆ ಎನ್ನಬಹುದು. ಒಂದು ಹಂತಕ್ಕೆ ಅದು ಮುಗಿದ ಮೇಲೆ ಇಡೀ ಸಿನಿಮಾವನ್ನು ಸಾದ್ ಮಾಡಿದ್ದಾರೆ. ‘ಗೋಧಿ ಬಣ್ಣ..’, ‘ಕಿರಿಕ್ ಪಾರ್ಟಿ’ ಸಿನಿಮಾಗಳು ಕನ್ನಡದಲ್ಲಿ ಹೊಸ ಪ್ರೇಕ್ಷಕರನ್ನು ಸೃಷ್ಟಿಸಿದವು. ಪ್ರತಿ ಸಿನಿಮಾ ಮಾಡುವಾಗಲೂ ಹೊಸ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬೇಕು ಎಂಬುದೇ ನಮ್ಮ ಹೋರಾಟ. ಮುಂದೆ ಇನ್ನೂ ಬೇರೆ ಬೇರೆ ಮಾದರಿಯ ಸಿನಿಮಾ ಮಾಡಬೇಕು ಎಂಬುದು ನಮ್ಮ ಉದ್ದೇಶ.

ಹೇಮಂತ್ ರಾವ್

***********

ಮನರಂಜನೆ ಜತೆಗೆ ಮತದಾರನಿಗೆ ಮೆಸೇಜ್ 

ಈ ಹಿಂದೆ ನಾನು ನಿರ್ವಿುಸಿದ್ದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ತುಂಬ ವಿಶಿಷ್ಟವಾದ ಸಿನಿಮಾ. ಆ ಚಿತ್ರದ ನಂತರವೂ ಕಥೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ನಿರ್ಧಾರ ಮಾಡಿದ್ದೆ. ಅದೇ ರೀತಿ ‘..ನೊಗ್​ರಾಜ್’ ಕಥೆ ಕೂಡ ಬಹಳ ಹಿಡಿಸಿತು. ರಾಜಕೀಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಬಂದ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ತುಂಬ ಕಡಿಮೆಯಾಗಿವೆ. ಅಲ್ಲದೆ, ದಾನಿಶ್​ಗೆ

ಇಂಟರ್​ನೆಟ್ ವಲಯದಲ್ಲಿ ತುಂಬ ಫ್ಯಾನ್ಸ್ ಇದ್ದಾರೆ. ಹಾಗಾಗಿ, ಬಂಡವಾಳಕ್ಕೆ ಮೋಸ ಇಲ್ಲ ಎಂಬ ಭರವಸೆ ಇತ್ತು. ಸಾದ್ ಖಾನ್ ತಾಂತ್ರಿಕವಾಗಿ ಬಹಳ ಕಲಿತಿದ್ದಾರೆ. ಇಂಜಿನಿಯರಿಂಗ್ ಮುಗಿಸಿ, ಅಮೆರಿಕದಲ್ಲಿ ಸಿನಿಮಾ ಕುರಿತು ಓದಿಕೊಂಡು ಬಂದಿರುವಂತಹ ಪ್ರತಿಭಾವಂತ. ಇದಕ್ಕೂ ಮೊದಲು ಹಾಲಿವುಡ್-ಬಾಲಿವುಡ್​ನಲ್ಲಿ ತಲಾ ಒಂದೊಂದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕಡಿಮೆ ಬಜೆಟ್​ನಲ್ಲಿ ನೀಟ್ ಆಗಿ ಸಿನಿಮಾ ಮಾಡಿದ್ದರು. ಅವರಿಗೆ ಯಾವುದೇ ಸಲಹೆ-ಸೂಚನೆ ನೀಡುವ ಪ್ರಮೇಯ ನನಗೆ ಬರಲಿಲ್ಲ. ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ಸಿಕ್ಕಿರುವುದರಿಂದ ಎಲ್ಲ ವರ್ಗದ ಪ್ರೇಕ್ಷಕರು ಕುಳಿತು ಆರಾಮವಾಗಿ ಎಂಜಾಯ್ ಮಾಡಬಹುದಾದ ಸಿನಿಮಾವಿದು. ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು, ಜಾತಿ-ಧರ್ಮ ಹೀಗೆ ಸಾಕಷ್ಟು ವಿಚಾರಗಳು ಚರ್ಚೆಗೆ ಬರುತ್ತವೆ. ಆ ಸಂದರ್ಭದಲ್ಲಿ ಮತದಾರ ಮಾಡುವಂತಹ ತಪ್ಪುಗಳೇನು ಎಂಬುದನ್ನು ತುಂಬ ಹಾಸ್ಯಮಯವಾಗಿ ಹೇಳಿದ್ದೇವೆ. ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ತಿಳಿಸಿದ್ದೇವೆ. ಗುರುವಾರವೇ ಬೆಂಗಳೂರಿನಲ್ಲಿ 20ಕ್ಕೂ ಅಧಿಕ ಹಾಗೂ ಮೈಸೂರಿನಲ್ಲಿ 2 ಪ್ರೀಮಿಯರ್ ಶೋಗಳಾಗಿವೆ. ಇದು ಕನ್ನಡ ಚಿತ್ರರಂಗದಲ್ಲಿ ಮೊದಲು ಎನ್ನಬಹುದು.

ಪುಷ್ಕರ್

************

 

 

 

Leave a Reply

Your email address will not be published. Required fields are marked *

Back To Top