More

  ನಿರ್ದೇಶಕರಾಗಿ ಡಾ.ಗಜಾನನ ನಾಯಕ ನೇಮಕ

  ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್(ಕ್ರಿಮ್್ಸ) ನಿರ್ದೇಶಕರಾಗಿ ಹುಬ್ಬಳ್ಳಿಯ ಕಿಮ್್ಸ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಗಜಾನನ ನಾಯಕ ಅವರು ನೇಮಕಗೊಂಡಿದ್ದಾರೆ.

  ಹಾಲಿ ನಿರ್ದೇಶಕ ಡಾ. ಶಿವಾನಂದ ದೊಡ್ಮನಿ ಅವರನ್ನು ಸ್ಥಾನದಿಂದ ಬಿಡುಗಡೆಗೊಳಿಸಿ, ನಾಯಕ ಅವರನ್ನು ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರಿಯಲ್ಲಿರಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ವಿ. ಮಾರುತಿ ಪ್ರಸನ್ನ ಬುಧವಾರ ಆದೇಶ ಹೊರಡಿಸಿದ್ದಾರೆ. ಡಾ.ನಾಯಕ ಮೂಲತಃ ಅಂಕೋಲಾದ ಕಂತ್ರಿಯವರು 1999 ರಿಂದ ಕಿಮ್ಸ್​ನಲ್ಲಿ ಪ್ರಾಧ್ಯಾಪಕ ಹುದ್ದೆಯಲ್ಲಿದ್ದು, ವಿವಿಧ ಜವಾಬ್ದಾರಿ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಹಾಲಿ ನಿರ್ದೇಶಕ ಡಾ.ಶಿವಾನಂದ ದೊಡ್ಮನಿ ಅವರ ಅವಧಿ 2018 ರಲ್ಲೇ ಮುಕ್ತಾಯವಾಗಿತ್ತು. ನಂತರವೂ ಮುಂದುವರಿದ ಅವರ ವಿರುದ್ಧ ಭ್ರಷ್ಟಾಚಾರ ಸೇರಿ ಹಲವು ಆರೋಪಗಳು ಬಂದಿದ್ದವು. ನಿರ್ದೇಶಕರ ಬದಲಾವಣೆಗೆ ಪಟ್ಟು ಹಿಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ, ಸಾಕಷ್ಟು ಪ್ರತಿಭಟನೆ ನಡೆಸಿದ್ದರು. ಹೊಸ ನಿರ್ದೇಶಕರ ನೇಮಕಕ್ಕಾಗಿ ನವೆಂಬರ್ 27 ರಂದು ಸಂದರ್ಶನ ನಡೆದಿತ್ತು. ಹುಬ್ಬಳ್ಳಿ

  ಕಿಮ್ಸ್​ನ ಶರೀರ ವಿಜ್ಞಾನ ವಿಭಾಗದ ಡಾ.ಕೆ.ಎಫ್.ಕಮ್ಮಾರ ಹಾಗೂ ಡಾ.ಗಜಾನನ ನಾಯಕ ಅವರ ನಡುವೆ ಕ್ರಿಮ್್ಸ ನಿರ್ದೇಶಕ ಹುದ್ದೆಗೆ ಪೈಪೋಟಿ ನಡೆದಿತ್ತು. ಅಲ್ಲದೆ, ತಮ್ಮನ್ನೇ ಮುಂದುವರಿಸುವಂತೆ ಡಾ.ಶಿವಾನಂದ ದೊಡ್ಮನಿ ಕೂಡ ಕೋರಿದ್ದರು.

  ನಿರ್ದೇಶಕರಾಗಲು ಏನು ಬೇಕು..?: ಸರ್ಕಾರಿ ಮೆಡಿಕಲ್ ಕಾಲೇಜ್​ನ ನಿರ್ದೇಶಕರಾಗಲು ವೈದ್ಯಕೀಯ ವಿಜ್ಞಾನದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕನಿಷ್ಠ 10 ವರ್ಷ ಬೋಧಕ ಅನುಭವ ಹೊಂದಿರಬೇಕು. ಯಾವುದಾದರೂ ವಿಭಾಗದ ಮುಖ್ಯಸ್ಥರಾಗಿ ಅಥವಾ ಮೆಡಿಕಲ್ ಕಾಲೇಜ್​ನ ಇತರ ಆಡಳಿತಾತ್ಮಕ ವಿಭಾಗದಲ್ಲಿ ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು. 58 ವರ್ಷಕ್ಕಿಂತ ಮೇಲ್ಮಟ್ಟಿರಬಾರದು. ಸಂಬಂಧಪಟ್ಟ ಸ್ವಾಯತ್ತ ಮೆಡಿಕಲ್ ಕಾಲೇಜ್​ನ ಬೈಲಾದ ನಿಯಮಾವಳಿಗಳಂತೆ ಇರಬೇಕು ಎಂಬ ನಿಬಂಧನೆಗಳಿವೆ. ಅದರಲ್ಲಿ ಹಿರಿತನಕ್ಕೆ ಹಾಗೂ ಮೆರಿಟ್​ಗೆ ಅವಕಾಶ ನೀಡಲಾಗುತ್ತದೆ.

  ನನ್ನ ಸ್ವಂತ ಊರಿನಲ್ಲಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದೆ. ಇಲ್ಲಿನ ಜನರಿಗೆ ಅನುಕೂಲವಾಗುವ ಕಾರ್ಯ ಮಾಡಬೇಕು ಎಂಬ ಕಾಳಜಿ ನನಗಿದೆ. ನಾನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ದ ಸಂಯೋಜಕನಾಗಿ ಕಾರ್ಯನಿರ್ವಹಿಸುತ್ತಿರುವ ಅನುಭವ ಹೊಂದಿದ್ದೇನೆ. ಕಾರವಾರ ಕಾಲೇಜ್​ಗೆ ಎಂಸಿಐ ಮಾನ್ಯತೆ ದೊರಕಿಸಿಕೊಡುವುದು ನನ್ನ ಮೊದಲ ಆದ್ಯತೆ. ವಿದ್ಯಾರ್ಥಿಗಳು, ರೋಗಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇನೆ. – ಡಾ. ಗಜಾನನ ನಾಯಕ ನೂತನ ನಿರ್ದೇಶಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts