Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ನಿರೀಕ್ಷೆ ಸೃಜನಶೀಲತೆಯ ಚಿಮ್ಮುಹಲಗೆಯಾಗಲಿ

Sunday, 08.01.2017, 5:00 AM       No Comments

ಬಾಹ್ಯ ಜಗತ್ತನ್ನು ನಾವು ನೋಡುತ್ತೇವೆ. ಆದರೆ ಅದರ ಜತೆಗೆ ನಮ್ಮೊಳಗಿರುವ ಆಂತರಿಕ ಜಗತ್ತನ್ನೂ ನೋಡಬೇಕಾಗಿದೆ. ನಮ್ಮ ಯೋಚನೆಗಳನ್ನೂ ಭಾವನೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ನಮ್ಮನ್ನು ನಾವು ಪರಿಶೀಲಿಸ ಹೊರಟಾಗ ನಮ್ಮ ಕಲ್ಪನಾಶಕ್ತಿ ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಆಗ ನಾವು ಸತ್ಯಸ್ಥಿತಿಯ ಮೇಲೆ ನಮ್ಮ ಕಲ್ಪನೆಯ ಬಿಂಬವನ್ನು ಮುಚ್ಚುತ್ತೇವೆ. ಇದಕ್ಕೆ ಅಧ್ಯಾರೋಪ (ಖ್ಠಟಛ್ಟಿ ಐಞಟಟಠಜಿಠಿಜಿಟ್ಞ)ವೆಂದು ಹೆಸರು. ಇದನ್ನು ನಾವು ಪರೀಕ್ಷಿಸಬೇಕಾಗಿದೆ.

  • ಸ್ವಾಮಿ ಸುಖಬೋಧಾನಂದ

ಅದನ್ನು ತಿಳಿಯುವುದರಿಂದ ನಮ್ಮ ಸಂಬಂಧಗಳಿಗೆ ಹೇಗೆ ನೆರವಾಗುತ್ತದೆ?

ಗಂಡಹೆಂಡಿರು ಪರಸ್ಪರರನ್ನು ಗಮನಿಸುವಾಗ ತಾವು ಗಮನಿಸುತ್ತಿರುವುದು ವಸ್ತುನಿಷ್ಠ ಸತ್ಯವನ್ನೋ ಅಥವಾ ವ್ಯಕ್ತಿನಿಷ್ಠ ಸತ್ಯವನ್ನೋ ಎನ್ನುವುದನ್ನು ಗಮನಿಸಬೇಕು. ಎಷ್ಟೋ ಸಲ ನಮ್ಮ ಕಲ್ಪನೆಗಳೇ ತಪ್ಪು ತಿಳಿವಳಿಕೆಗಳಿಗೆ ಕಾರಣವಾಗುತ್ತವೆ. ಗಂಡ ಹೇಗಿರಬೇಕು, ಹೆಂಡತಿ ಹೇಗಿರಬೇಕು ಎನ್ನುವ ಬಗ್ಗೆ ನಮಗೆ ನಮ್ಮದೇ ಆದ ಕಲ್ಪನೆಗಳಿರುತ್ತವೆ. ಆ ಕಲ್ಪನೆಗೆ ತಕ್ಕಂತೆ ಅವರು ಇಲ್ಲದಿದ್ದರೆ ನೋವಾಗುತ್ತದೆ, ನಿರಾಶೆಯಾಗುತ್ತದೆ. ನಮಗೆ ನೋವಾಗಲು ಕಾರಣ ಯಾವುದು ‘ಇದೆಯೋ’ ಅದರಿಂದಲ್ಲ, ಯಾವುದು ‘ಇರಬೇಕಾಗಿತ್ತೋ’ ಅದರಿಂದ! ನಮಗೆ ಬೇಕಾದ್ದನ್ನು ಕಲಿಸುವ ಸ್ವಾತಂತ್ರ್ಯದೆ. ಆದರೆ ಅದರ ಜತೆ ಈ ಪ್ರಪಂಚ ನಮ್ಮ ಕಲ್ಪನೆಗೆ ಅನುಗುಣವಾಗಿ ಇರಬೇಕಾಗಿಲ್ಲ ಎನ್ನುವ ವಿವೇಕವೂ ಇರಬೇಕು. ಅನ್ಯರ ಬಗ್ಗೆ ನಮ್ಮದೇ ಆದ ನಕ್ಷೆಗಳನ್ನು ತಯಾರಿಸಿಕೊಂಡು ಅದರಂತೆ ಅವರಿಲ್ಲವಲ್ಲಾ ಎಂದು ನರಳುತ್ತೇವೆ. ಈ ಸಂಗತಿಯನ್ನು ಅರ್ಥಮಾಡಿಕೊಂಡರೆ ನಮ್ಮ ಗ್ರಹಿಕೆಗಳು ಸ್ಪಷ್ಟವಾಗುತ್ತವೆ. ಅದರಿಂದ ನಮ್ಮ ಸಂಬಂಧಗಳ ಗುಣಮಟ್ಟ ಸುಧಾರಿಸುತ್ತದೆ.

ಕಲ್ಪನೆಗಳನ್ನು ತ್ಯಜಿಸಿದರೆ ನಮ್ಮ ಬದುಕು ಸಂಕಟಮಯವಾಗುವುದಿಲ್ಲವೇ?

ಕಲ್ಪನೆ ಇರುವುದರಿಂದಲೇ ಬದುಕು ಸ್ವಾರಸ್ಯಕರವಾಗಿದೆ. ಅಲ್ಲವೆ? ನಾವು ಕಲ್ಪಿಸುವುದರಲ್ಲಿ ತಪ್ಪಿಲ್ಲ. ಆದರೆ ಕಲ್ಪನೆಯನ್ನೇ ನಿಜವೆಂದು ತಿಳಿಯಬಾರದು. ಕಲ್ಪನೆಯು ನಿಜವಾಗುವವರೆಗೆ ಕಲ್ಪನೆಯೇ. ಕಲ್ಪನೆಯನ್ನು ತ್ಯಜಿಸಿದ ಮಾತ್ರಕ್ಕೇ ಸಂಕಟವುಂಟಾಗುವುದಿಲ್ಲ. ಕಲ್ಪನೆಯೇ ನಿಜವೆಂದು ಭಾವಿಸುವುದರಿಂದಲೇ ಸಂಕಟಕ್ಕೊಳಗಾಗುತ್ತೇವೆ. ಇನ್ನೂ ವಿಚಿತ್ರ ಏನೆಂದರೆ ಸತ್ಯವು ಆಶ್ಚರ್ಯಗಳಿಂದ ತುಂಬಿಕೊಂಡಿದ್ದರೂ ನಾವು ಅದನ್ನು ನೋಡಲು ಸಮರ್ಥರಾಗುವುದಿಲ್ಲ.

ಉದಾಹರಣೆಗೆ: ನಿಮ್ಮ ಕಣ್ಣುಗಳನ್ನೇ ಗಮನಿಸಿ. ಅವು ಕೋಟ್ಯಂತರ ವಸ್ತುಗಳನ್ನು ನೋಡಬಲ್ಲವು. ನಿಮ್ಮ ಕಿವಿಗಳು ಸಾವಿರಾರು ಶಬ್ದಗಳನ್ನು ಆಲಿಸಬಲ್ಲವು. ನಿಮ್ಮ ಮೂಗು ಹಲವಾರು ಬಗೆಯ ವಾಸನೆಗಳನ್ನು ಗ್ರಹಿಸಬಲ್ಲುದು. ಈ ವಿಸ್ಮಯಗಳನ್ನು ನಾವು ಗಮನಿಸುವುದಿಲ್ಲ. ಅದರ ಬದಲಾಗಿ ನೀವು ಕಲ್ಪಿಸಿರುವ ರೂಪಗಳನ್ನು ನೋಡಿದರೆ ಮಾತ್ರ ಖುಷಿಯಾಗುತ್ತದೆ ಎಂದು ಹೇಳಿಕೊಳ್ಳುತ್ತೀರಿ. ಇಂಥ ಶಬ್ದಗಳನ್ನು ಕೇಳಿದರೆ ಮಾತ್ರ ಸಂತೋಷವಾಗುತ್ತದೆ ಎನ್ನುತ್ತೀರಿ. ಈ ರುಚಿಗಳನ್ನು ಆಸ್ವಾದಿಸಲು ಸಾಧ್ಯವಾದರೆ ಮಾತ್ರ ಸಂತೋಷ ಎನ್ನುತ್ತೀರಿ.

ಈ ಮೂಲಕ ನಾವು ನಮ್ಮನ್ನು ನಮ್ಮ ನಿರೀಕ್ಷೆಗಳಿಗೆ ಸೀಮಿತಗೊಳಿಸುತ್ತಿದ್ದೇವೆ. ನಿರೀಕ್ಷೆಗಳಿಲ್ಲವಾದರೆ? ನಾವು ಇನ್ನೂ ಸತ್ಯದ ಜಗತ್ತನ್ನು ಆಸ್ವಾದಿಸಿಲ್ಲ. ಆದರೆ, ಕಲ್ಪನೆಯ ಜಗತ್ತು ಹೆಚ್ಚು ತೃಪ್ತಿ ನೀಡುವುದೆಂದು ಭಾವಿಸುತ್ತೇವೆ.

ನಿರೀಕ್ಷೆ ನಮ್ಮ ಬದುಕಿನಲ್ಲಿ ಹೇಗೆ ಹೊಂದಿಕೊಳ್ಳುತ್ತದೆ?

ಸಂಬಂಧಗಳ ವಲಯದಲ್ಲಿ ನಿರೀಕ್ಷೆಗಳಿಲ್ಲದ ಬದುಕು ಪೊಳ್ಳಾಗಿ ಕಾಣುತ್ತದೆ ಅಲ್ಲವೆ? ಆದರೆ ನಿರೀಕ್ಷೆಗಳು ಭಿಕ್ಷಾಪಾತ್ರೆಯಂತಾಗಬಾರದು. ಅದರಿಂದ ಸಂಕಟವುಂಟಾಗುತ್ತದೆ. ಇಬ್ಬರು ಭಿಕ್ಷುಕರು ಒಂದು ಸಂಬಂಧದಲ್ಲಿ ಒಂದಾದರೆ ಭಿಕಾರಿತನವೇ ಹೆಚ್ಚುತ್ತದೆ. ಬದುಕಿನಲ್ಲಿ ನಿರೀಕ್ಷೆಗಳಿರಲಿ. ಆದರೆ, ಅವು ಸೃಜನಶೀಲತೆಗೆ ಚಿಮ್ಮುಹಲಗೆಯಂತಾಗಲಿ. ನಿರೀಕ್ಷೆ ಸೃಜನಶೀಲತೆಯ ಕೇಂದ್ರವಾಗಬೇಕು. ಭಿಕ್ಷಾಕೇಂದ್ರವಾಗಬಾರದು. ಭಿಕಾರಿಯ ಬದುಕು ಸಂಕಟದ ಬದುಕು. ಪ್ರಬುದ್ಧ ನಿರೀಕ್ಷೆ ಎನ್ನುವುದೂ ಒಂದಿದೆ.

ಇದನ್ನು ನಿಜಜೀವನದಲ್ಲಿ ಅನುಸರಿಸುವುದು ಕಷ್ಟವಲ್ಲವೇ?

ಕಷ್ಟ ಅಥವಾ ಸುಲಭ ಎನ್ನುವುದು ಆಯಾ ವ್ಯಕ್ತಿಯನ್ನು ಅವಲಂಬಿಸಿದೆ. ಕೆಲವರಿಗೆ ಸೊಳ್ಳೆಯನ್ನು ಕೊಲ್ಲುವುದೂ ಕಷ್ಟ. ಭಯೋತ್ಪಾದಕರಿಗೆ ಮುಗ್ಧಮಕ್ಕಳನ್ನೂ ನಿರ್ದಯವಾಗಿ ಕೊಲ್ಲುವುದು ಸುಲಭ. ಆದ್ದರಿಂದ ಅಂಥ ತರ್ಕಗಳ ಮೊರೆಹೋಗಿ ಮೋಸ ಹೋಗಬೇಡಿ. ಕಷ್ಟದ ಸನ್ನಿವೇಶಗಳನ್ನು ಆಸ್ವಾದಿಸುವ ಕೌಶಲವನ್ನು ಬೆಳೆಸಿಕೊಳ್ಳಿ.

ಜೀವನದಿಂದ ಲಾಭಗಳಿಸಬೇಕಾದರೆ ಬದ್ಧತೆ ಹಾಗೂ ಪ್ರಜ್ಞೆ ಅವಶ್ಯ. ವಯಸ್ಸಾದ ಮಾತ್ರಕ್ಕೆ ವಿವೇಕ ಬರುವುದಿಲ್ಲ. ಜೀವನ ಕಲಿಸುವ ಪಾಠಗಳನ್ನು ಸ್ವೀಕರಿಸುವುದರಿಂದ ನಿಜವಾದ ವಿವೇಕ ಮೂಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top