Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ನಿರೀಕ್ಷೆ ಇಟ್ಟುಕೊಳ್ಳದಿರಿ

Sunday, 15.01.2017, 4:00 AM       No Comments

| ಸ್ವಾಮಿ ಸುಖಬೋಧಾನಂದ

ಮಗು ಆಡುತ್ತಾ ಅಕಸ್ಮಾತ್ತಾಗಿ ಬೀಳುತ್ತದೆ. ಅದಕ್ಕೆ ನೋವಾದರೂ ಸಾವರಿಸಿಕೊಂಡು, ಎದ್ದುನಿಂತು ಆಟ ಮುಂದುವರಿಸುತ್ತದೆ. ಆದರೆ ಅದು ಬಿದ್ದುದನ್ನು ಯಾರಾದರೂ ನೋಡಿದರೆ, ಕೂಡಲೇ ಗಟ್ಟಿಯಾಗಿ ಅಳುತ್ತಾ ಅವರ ಗಮನ ಸೆಳೆಯಲು ಯತ್ನಿಸುತ್ತದೆ. ಇದೊಂದು ರೀತಿಯ ಕುತಂತ್ರ. ಮೋಸದಿಂದ ಏನನ್ನೋ ಗಳಿಸುವ ಉಪಾಯ.

ನಾವು ಬೆಳೆದು ದೊಡ್ಡವರಾದ ಮೇಲೂ ಇಂಥದೇ ಕುತಂತ್ರಗಳನ್ನು, ಆವುಟಗಳನ್ನು ಮಾಡುತ್ತಿರುತ್ತೇವೆ. ನೋವಾಗುವುದನ್ನು ತಪ್ಪಿಸಲು ಕೋಪವನ್ನು ತೋರಿಸುತ್ತೇವೆ. ಅನ್ಯರ ಸಹಾನುಭೂತಿ ಗಳಿಸಲು ಅಳುತ್ತೇವೆ. ಅಂದವಾಗಿರುವ ಹೆಣ್ಣು ಗಂಡಸನ್ನು ತನ್ನ ವಯ್ಯಾರದಿಂದ ಆಕರ್ಷಿಸಿ, ಆತ ಸ್ಪಂದಿಸಿದಾಗ ನಿರಾಕರಿಸುತ್ತಾಳೆ. ತನ್ಮೂಲಕ ತಾನು ಶಕ್ತಿಶಾಲಿಯೆಂದು ತಿಳಿಯುತ್ತಾಳೆ. ಇಂತಹ ಕುತಂತ್ರಗಳಿಂದ ಏನೂ ಪ್ರಯೋಜನವಿಲ್ಲ ಎನ್ನುವ ಅರಿವು ನಮ್ಮಲ್ಲಿರಬೇಕು.

ಈ ಕತೆಯ ಕುರಿತು ಚಿಂತನೆ ಮಾಡಿ- ಅಗಸನೊಬ್ಬ ಕತ್ತೆಯ ಮೇಲೆ ಉಪ್ಪಿನ ಚೀಲಗಳನ್ನು ಹೇರಿಕೊಂಡು ಸಾಗುತ್ತಿದ್ದ. ಕತ್ತೆಯೂ ಕೆಲವು ಕುತಂತ್ರಗಳನ್ನು ಕಲಿತಿತ್ತು. ದಾರಿಯಲ್ಲಿ ಮೊಣಕಾಲುಮಟ್ಟದ ನೀರಿರುವ ನದಿಯೊಂದು ಎದುರಾಯಿತು. ಅದನ್ನು ದಾಟುತ್ತಿದ್ದಾಗ ಕತ್ತೆ ಎಡವಿಬಿದ್ದಂತೆ ನಟಿಸಿತು. ಎದ್ದಾಗ ಚೀಲದಲ್ಲಿದ್ದ ಉಪ್ಪು ನೀರಿನಲ್ಲಿ ಕರಗಿ ಹೋದುದರಿಂದ ಹೊರೆ ಸಾಕಷ್ಟು ಹಗುರವಾಗಿತ್ತು. ಅಗಸ ಅದಕ್ಕೆ ತಕ್ಕ ಪಾಠ ಕಲಿಸಲು ನಿಶ್ಚಯಿಸಿದ. ಮರುದಿನ ಕತ್ತೆಯ ಬೆನ್ನಮೇಲೆ ಹತ್ತಿಯ ಮೂಟೆಗಳನ್ನು ಹೇರಿ ಅದೇ ದಾರಿಯಲ್ಲಿ ಸಾಗಿದ. ಕತ್ತೆ ಹಳೆಯ ತಂತ್ರವನ್ನು ಬಳಸಿ ನೀರಿನಲ್ಲಿ ಬಿತ್ತು. ಆದರೆ ಎದ್ದಾಗ ಹತ್ತಿಯ ಮೂಟೆ ನೀರನ್ನು ಹೀರಿಕೊಂಡು ಮತ್ತಷ್ಟು ಭಾರವಾಗಿತ್ತು. ಕತ್ತೆ ತನ್ನ ಕುತಂತ್ರದ ಫಲವನ್ನು ಅನುಭವಿಸಬೇಕಾಗಿ ಬಂತು! ಜೀವನದಲ್ಲಿ ಕುತಂತ್ರಗಳು ಹೆಚ್ಚುಕಾಲ ನಡೆಯುವುದಿಲ್ಲ ಎಂಬುದಕ್ಕೆ ಇದೊಂದು ದೃಷ್ಟಾಂತ.

* ಈ ರೀತಿಯ ಮಾನಸಿಕ ಆವುಟಗಳನ್ನು ನಿಲ್ಲಿಸುವುದು ಹೇಗೆ?

ಜೀವನದ ಗುರಿಯೇನು ಎಂಬುದು ನಿಮಗೆ ಸ್ಪಷ್ಟವಾಗಿರ

ಬೇಕು. ನೀವು ಪರಿವರ್ತನೆಗೆ ಬದ್ಧರಾಗಿರುವಿರಾ ಅಥವಾ ‘ಅಹಂ’ನ ಲಾಭದಲ್ಲೇ ಆಸಕ್ತರಾಗಿರುವಿರಾ? ಪರಿವರ್ತನೆಗೆ ಬದ್ಧರಾಗಿದ್ದರೆ, ಮನಸ್ಸು ಅಂಥ ಆವುಟಗಳನ್ನು ಆರಂಭಿಸಿದಾಗಲೆಲ್ಲಾ, ಅದರಲ್ಲಿ ಭಾಗವಹಿಸದೆ ದೂರವಿರಿ. ಆವುಟಗಳಿಗೆ ‘ಇಲ್ಲ’ ಎಂದು ದೃಢವಾಗಿ ಹೇಳಿ, ಪ್ರಾಮಾಣಿಕವಾಗಿರಲು, ಸಂತೋಷವಾಗಿರಲು ಕಲಿಯಿರಿ.

ಜೀವನವೆಂದರೆ ಆಯ್ಕೆ. ನಿಮ್ಮ ವೈಯಕ್ತಿಕ ಕಾರ್ಯಸೂಚಿ, ಪರಿವರ್ತನೆ, ನಿಮ್ಮ ಅಹಂನ ಲಾಭ ಮತ್ತು ಚಾಣಾಕ್ಷ ಮನಸ್ಸು ಹೂಡುವ ಕುತಂತ್ರ- ಇವುಗಳಲ್ಲಿ ನಿಮ್ಮ ಆಯ್ಕೆ ಇದೆ. ಪರಿವರ್ತನೆಯೇ ನಿಮ್ಮ ಜೀವನದ ಗುರಿಯಾಗಿರುವುದಾದರೆ ಮನಸ್ಸು ಹೂಡುವ ಕುತಂತ್ರಗಳಿಂದ ಮುಕ್ತರಾಗಬಹುದು.

* ನಾವೇಕೆ ಪದೇಪದೆ ಅಸುಖಿಗಳಾಗುತ್ತೇವೆ?

ಮೂಲತಃ ಆನಂದವೇ ನಮ್ಮ ಸ್ವಭಾವ. ಏನನ್ನಾದರೂ ನೀವು ಬಯಸಿ, ಅದು ದೊರಕದಿದ್ದಾಗ ಅಸುಖಿಗಳಾಗುತ್ತೇವೆ. ನೀವು ಗಮನಿಸಿರಬಹುದು, ನಾವು ಏನನ್ನೂ ನಿರೀಕ್ಷಿಸದಿರುವಾಗ ಸಂತೋಷವಾಗಿರುತ್ತೇವೆ. ಆದುದರಿಂದ ನಿರೀಕ್ಷೆಗಳೇ ಅಸುಖಕ್ಕೆ ಕಾರಣ. ಗಾಢನಿದ್ರೆಯಲ್ಲಿರುವಾಗ ಯಾವುದೇ ನಿರೀಕ್ಷೆಗಳಾಗಲೀ, ಬಯಕೆಗಳಾಗಲೀ ಇರುವುದಿಲ್ಲ. ಆದ್ದರಿಂದ ನಾವು ಆನಂದದ ಸ್ಥಿತಿಯಲ್ಲಿರುತ್ತೇವೆ. ಹೀಗೆಂದ ಮಾತ್ರಕ್ಕೆ ಜೀವನದಲ್ಲಿ ನಿರೀಕ್ಷೆಗಳೇ ಇರಕೂಡದೆಂದು ನಾನು ಹೇಳುತ್ತಿಲ್ಲ. ಆದರೆ ನಿರೀಕ್ಷೆಗಳು ‘ಈಗ ನಾನು ಸುಖಿಯಾಗಿಲ್ಲ, ಮುಂದೆ ಭವಿಷ್ಯದಲ್ಲಿ ಸುಖವಾಗಿರುತ್ತೇನೆ’ ಎಂಬ ಭ್ರಮೆಯನ್ನು ಉಂಟುಮಾಡದಿರಲಿ.

ನಿಮ್ಮ ನಿರೀಕ್ಷೆಗಳು ಸಂತೋಷದ ನೆಲೆಯಿಂದ ಮೂಡಿಬರಲಿ. ಧ್ಯಾನದಿಂದ ಹಾಗೂ ಆತ್ಮಪ್ರಭುತ್ವದಿಂದ ಈ ಸ್ಪಷ್ಟತೆಯನ್ನು ಸಾಧಿಸಿರಿ. ನೆನಪಿರಲಿ- ಸಂತೋಷವು ನಿಮ್ಮ ಮೂಲಸ್ವಭಾವ. ದುಃಖ ನಿವಾರಣೆಗೆ ಹೆಚ್ಚಿನ ಶ್ರಮ ಅವಶ್ಯ. ನಿರೀಕ್ಷೆಗಳು ಪೂರೈಸಿದರೆ ಸಂತೋಷವಾಗುತ್ತದೆಂಬ ಭ್ರಮೆಯನ್ನು ‘ಅಹಂ’ ಸೃಷ್ಟಿಸುತ್ತದೆ. ವಿವೇಕಿಯಾಗಿರುವವನಿಗೆ ‘ಅಹಂ’ನ ರಕ್ಷಣೆಯ ಅಗತ್ಯವಿಲ್ಲ. ಅವನು ಶುದ್ಧ ಅಸ್ತಿತ್ವರೂಪಿ, ತೆರೆದ ಮನಸ್ಸುಳ್ಳವನು. ತರ್ಕಾತೀತವಾಗಿ ಆನಂದವಾಗಿರುತ್ತಾನೆ.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್​ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top