25.9 C
Bengaluru
Wednesday, January 22, 2020

ನಿರಾಶೆ ಭಾವ ತಗ್ಗಿಸಿದ ತೃಪ್ತಿ

Latest News

ಕಲೂತಿ ನಗರ ಶಾಲೆಯಲ್ಲಿ ತಗ್ಗು-ಗುಂಡಿಗಳ ದರ್ಬಾರ್

ತೇರದಾಳ: ಹತ್ತು ವರ್ಷವಾದರೂ ಸ್ಥಳೀಯ ಕಲೂತಿ ನಗರದಲ್ಲಿರುವ ಸರ್ಕಾರಿ ಎಲ್‌ಪಿಎಸ್ ಶಾಲೆ ಆವರಣ ಸಮತಟ್ಟ ಮಾಡದ ಕಾರಣ ಮಂಗಳವಾರ ಅಕ್ಕನ ಜತೆಗೆ ಶಾಲೆಗೆ...

ಬಸ್​ನಿಲ್ದಾಣದಲ್ಲಿ ಸಿಕ್ಕಿದ್ದ ನಾಲ್ಕು ವಾರಸ್ದಾರರಿಲ್ಲದ ಬ್ಯಾಗ್​ಗಳನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪರಿಶೀಲಿಸಿದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರ: ಇಂದು ನಗರದ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ವಾರಸ್ದಾರರಿಲ್ಲದ ನಾಲ್ಕು ಬ್ಯಾಗ್​ಗಳು ಪತ್ತೆಯಾಗಿದ್ದವು. ಪ್ರಯಾಣಿಕರು ಕುಳಿತುಕೊಳ್ಳುವ ಕಲ್ಲುಬೆಂಚಿನ ಕೆಳಗೆ ಬ್ಯಾಗ್​ಗಳನ್ನು ಇಡಲಾಗಿತ್ತು. ಒಂದೊಂದು ಬ್ಯಾಗ್​ಗಳೂ ಒಂದೊಂದು...

ಸಮುದಾಯ ಅಭಿವೃದ್ಧಿ ಹೊಂದಲಿ

ಮಹಾಲಿಂಗಪುರ: ಬಸವಣ್ಣನವರ ಮಾರ್ಗದರ್ಶನದಂತೆ ನಡೆದು, ನಿಷ್ಠೆಯಿಂದ ಕಾಯಕ ಮಾಡಿ ದಾಸೋಹ ನಡೆಸಿದ ಶಿವಶರಣ ಮೇದಾರ ಕೇತೇಶ್ವರ ಸರ್ವ ಜನಾಂಗದ ಶರಣ ಆಗಿದ್ದಾರೆ ಎಂದು...

ಯುವಕರಲ್ಲಿ ಕಾನೂನಿನ ಅರಿವು ಅಗತ್ಯ

ಬಾಗಲಕೋಟೆ: ಯುವ ಸಮುದಾಯದಲ್ಲಿ ಉತ್ತಮ ಸಂಸ್ಕಾರ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ...

ವಿದ್ಯಾರ್ಥಿಗಳಲ್ಲಿರುವ ಇಂಗ್ಲಿಷ್ ಭಯ ಹೋಗಲಾಡಿಸಿ, ಡಿಡಿಪಿಐ ಟಿ.ರಾಮಪ್ಪ ಸಲಹೆ

ಬಳ್ಳಾರಿ: ತರಗತಿಯಲ್ಲಿ ಶಿಕ್ಷಕರು ಸರಳವಾಗಿ ಇಂಗ್ಲಿಷ್ ಮಾತನಾಡುವುದನ್ನು ರೂಢಿಸಿಕೊಂಡಾಗ ವಿದ್ಯಾರ್ಥಿಗಳು ಸುಲಲಿತವಾಗಿ ಇಂಗ್ಲಿಷ್ ಭಾಷೆ ಅಧ್ಯಯನ ಮಾಡಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ...

ಕಲಘಟಗಿ: ಹಳ್ಳಿಗಳ ನಿರುದ್ಯೋಗಿ ಯುವ ಸಮೂಹದಲ್ಲಿ ವಿದ್ಯಾವಂತ ರಾಗಿಯೂ ಉದ್ಯೋಗವಿಲ್ಲ ಎಂಬ ನಿರಾಶೆ ಭಾವನೆಯನ್ನು ಕಿಂಚಿತ್ತಾದರೂ ತಗ್ಗಿಸಿದ ಆತ್ಮತೃಪ್ತಿ ಇದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.

ಪಟ್ಟಣದ ಗುಡ್ ನ್ಯೂಸ್ ಕಾಲೇಜ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶನಿವಾರ ಏರ್ಪಡಿಸಿದ್ದ ಕೌಶಲ ತರಬೇತಿಯಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿ ದ್ದರು. ಭಾನುವಾರ ಉದ್ಯೋಗ ಮೇಳದಲ್ಲಿ 2 ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವಕ-ಯುವತಿಯರು ಹೆಸರು ನೋಂದಾಯಿಸಿದ್ದರು. ಅವರಲ್ಲಿ 700ಕ್ಕೂ ಹೆಚ್ಚು ಜನರಿಗೆ ಆಯ್ಕೆ ಪತ್ರ ನೀಡಲಾಗಿದೆ ಎಂದು ತಿಳಿಸಿದರು.

ಗುಡ್​ನ್ಯೂಸ್ ಸಂಸ್ಥೆಯ ಆಡಳಿತಾಧಿಕಾರಿ ಬ್ರ. ನಿಜು ಥಾಮಸ್ ಮಾತನಾಡಿ, ಇಲ್ಲಿನ ಉದ್ಯೋಗ ಮೇಳಕ್ಕೆ ಕಾರವಾರ, ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ವಿದ್ಯಾವಂತ ನಿರುದ್ಯೋಗಿಗಳು ಭಾಗವಹಿಸಿದ್ದು ಸಂತಸವಾಗಿದೆ ಎಂದು ಹೇಳಿದರು.

784 ಜನರಿಗೆ ಭರವಸೆ ಪತ್ರ: ಕೌಶಲ ಅಭಿವೃದ್ಧಿ ಸಂಯೋಜಕ ಎ.ಎಂ.ಎಸ್. ಗ್ರುಪ್ಸ್​ನ ಬಿ.ಟಿ. ತೇಜಸ್ವಿ ಮಾತನಾಡಿ, ಉದ್ಯೋಗ ಮೇಳಕ್ಕೆ ಇನ್ಪೋಸಿಸ್, ಹೊಂಡಾ, ಎಚ್.ಆರ್.ಎಸ್., ಜಿಂದಾಲ್, ಟೆಕ್ಸ್​ನಾ, ಜಿ.ಟಿ.ಟಿ.ಸಿ. ಸೇರಿ 70ಕ್ಕೂ ಅಧಿಕ ಕಂಪನಿಗಳು ಪಾಲ್ಗೊಂಡಿದ್ದವು. 1934 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಕೊನೇ ಕ್ಷಣದಲ್ಲಿ ಬಂದ ನೂರಾರು ಅಭ್ಯರ್ಥಿಗಳಿಗೂ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂದರ್ಶನಕ್ಕೆ ಭಾಗವಹಿಸಿದವರಲ್ಲಿ 784 ಯುವಕ-ಯುವತಿಯರಿಗೆ ಉದ್ಯೋಗಾವಕಾಶದ ಭರವಸೆಯ ಪತ್ರ ನೀಡಲಾಗಿದೆ ಎಂದು ತಿಳಿಸಿದರು.

ಗುಡ್​ನ್ಯೂಸ್ ಕಾಲೇಜ್ ಪ್ರಾಂಶುಪಾಲ ಡಾ. ಬಿ.ಜಿ. ಬಿರಾದರ, ಪ್ರೊ. ಬಿ.ಜಿ. ಬಿದರಿ, ಡಾ. ಮಹೇಶ ಹೊರಕೇರಿ, ನಿಂಗಪ್ಪ ಸುತಗಟ್ಟಿ, ತಾಪಂ ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಐ.ಸಿ. ಗೋಕುಲ, ಎಸ್.ಎಂ. ಚಿಕ್ಕಣ್ಣವರ, ನರೇಶ ಮಲ್ನಾಡ, ಶಶಿಧರ ಹುಲಿಕಟ್ಟಿ, ಬಸವರಾಜ ಶೆರೇವಾಡ, ವಜ್ರಕುಮಾರ ಮಾದನಭಾವಿ, ನಿಂಗರಾಜ ತಿರ್ಲಾಪುರ, ರಾಜು ಚಿಕ್ಕಮಠ, ಮಹಾಂತೇಶ ಅಂಬಲಿ, ಬಸವರಾಜ ಹೊನ್ನಳ್ಳಿ, ಪರಶುರಾಮ ರಜಪೂತ, ಸುರೇಶ ಶೀಲವಂತರ, ಅಶೋಕ ಆಡಿನವರ, ವಿಜಯ ಬೆಣ್ಣಿ, ಮಂಗಲಪ್ಪ ಲಮಾಣಿ, ಅರ್ಜುನ ಲಮಾಣಿ, ಕೃಷ್ಣ ತಹಶೀಲ್ದಾರ, ಇತರರಿದ್ದರು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...