ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ


ಸೇಡಂ: ರಸ್ತೆ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ತಿದ್ದಿಕೊಳ್ಳುವಂತೆ ಅನೇಕ ಬಾರಿ ಸೂಚಿಸಲಾಗಿದ್ದು, ಅದಾಗ್ಯೂ ತಮ್ಮ ಚಾಳಿ ಮುಂದುವರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಶಂಕರಗೌಡ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಟ್ರಾನ್ಸ್ ಪೋರ್ಟ, ಲಾರಿ ಮಾಲೀಕರ ಮತ್ತು ಚಾಲಕರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳಲ್ಲಿ ರಸ್ತೆ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ವಿಧಿಸುವ ದಂಡದಲ್ಲಿ ಏರಿಕೆ ಮಾಡಿ ಅನೇಕ ಮಾನದಂಡಗಳನ್ನು ಹಾಕಿ ಸಕರ್ಾರ ಕಾನೂನು ರೂಪಿಸಿದೆ ಎಂದರು.
ನಿಯಮ ಉಲ್ಲಂಘನೆ ಮಾಡುವ ವಾಹನ ಚಾಲಕರ ಮತ್ತು ಮಾಲೀಕರ ಮೇಲೆ ಗಂಭೀರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಸಭೆ ನಡೆಸುವ ಮೂಲಕ ತಿದ್ದಿಕೊಳ್ಳುವಂತೆ ತಿಳಿಹೇಳುವದು ಪ್ರಥಮ ಹಂತದ ಕೆಲಸವಾಗಿದೆ. ನಂತರದ ದಿನಗಳಲ್ಲಿ ಪೊಲೀಸ್ ಇಲಾಖೆ ರಸ್ತೆಗಿಳಿದು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಲಿದೆ. ಲಾರಿ ಮಾಲೀಕರು ಚಾಲಕರನ್ನು ನೇಮಿಸಿಕೊಳ್ಳುವ ಸಂದರ್ಭದಲ್ಲಿ ಅವರ ಪೂವರ್ಾಪರದ ಮಾಹಿತಿ ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ಅದರ ಮಾಹಿತಿ ಕಡತ ರೂಪದಲ್ಲಿ ನಿಮ್ಮಲ್ಲಿ ಇಟ್ಟುಕೊಳ್ಳಬೇಕು. ಇದರಿಂದಾಗಿ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪಿಎಸ್ಐ ಸುಶೀಲಕುಮಾರ ಮಾತನಾಡಿ, ಸೇಡಂ ಪಟ್ಟಣದಲ್ಲಿ ಸಿಮೆಂಟ್ ಕಂಪನಿಗಳು ಹೆಚ್ಚಾಗಿರುವದರಿಂದ ಲಾರಿಗಳ ಒಡಾಟ ಹೆಚ್ಚಿದೆ. ಶಿಸ್ತು ಅಳವಡಿಸಿಕೊಂಡರೆ ಅಪಘಾತ ಸಂಖ್ಯೆ ಕ್ಷಿಣಿಸಬಹುದಾಗಿದೆ ಎಂದು ಹೇಳಿದರು.
ಪ್ರಮುಖರಾದ ಜಬ್ಬಾರ್, ಹಾಜಿ ನಾಡೇಪಲ್ಲಿ, ಬಾಬಾ, ಮಹೇಶ ತೇಗಲತಿಪ್ಪಿ, ಸಿದ್ದು ನಾಲವಾರ, ಶೇಖರ ಬಿಬ್ಬಳ್ಳಿ, ಕಲ್ಲಪ್ಪ, ದತ್ತಾತ್ರೇಯ, ರಾಜು ಮಲ್ಲಾಬಾದ್, ಮಾಜೀದ್, ಕುಮಾರ ಇತರರಿದ್ದರು.
ಪೇದೆ ಆಸೀಫ್ ಸ್ವಾಗತಿಸಿ, ನಿರೂಪಣೆ ಮಾಡಿದರು. 

ಗೈರಾದ ಟ್ರಾನ್ಸ್ ಪೋರ್ಟ್​ ಮಾಲೀಕರಿಗೆ ನೋಟಿಸ್
ಈ ಮೊದಲೇ ಸಭೆಗೆ ಬರುವಂತೆ ಲಾರಿ ಮತ್ತು ಟ್ರಾನ್ಸ್ ಪೋರ್ಟ  ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಇಷ್ಟಾದರೂ ಅನೇಕರು ಸಭೆಗೆ ಬಾರದೇ ಇರುವದರಿಂದ ಗರಂ ಆದ ಸಿಪಿಐ ಪಾಟೀಲ್, ಏನ್ರಿ ನಾವೇನು ಆಟ ಆಡುವುದಕ್ಕೆ ಸಭೆ ಕರದಿದ್ದೀವಾ? ನಿಮ್ಮ ಒಳ್ಳೆದಕ್ಕೆ ಸಭೆ ಆಯೋಜಿಲಾಗಿದೆ. ಸಭೆಗೆ ಬಾರದ ಮಾಲೀಕರಿಗೆ ಕೂಡಲೇ ನೋಟಿಸ್ ನೀಡಿ ಎಂದು ಸಿಬ್ಬಂದಿಗೆ ಸೂಚಿಸಿದರು.

Leave a Reply

Your email address will not be published. Required fields are marked *