ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದ ಬಸ್

ಸಕಲೇಶಪುರ: ತಾಲೂಕಿನ ಆನೆಮಹಲ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಉರುಳಿ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಯಾಣಿಸುತ್ತಿದ್ದ 50 ಜನರಲ್ಲಿ ಚನ್ನಯ್ಯ (60) ಮತ್ತು ಸಿದ್ದರಾಜು (40) ಎಂಬುವರಿಗೆ ತೀವ್ರ ಪೆಟ್ಟಾಗಿದ್ದು, ಅವರನ್ನು ಹಾಸನದ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದ ಗಾಯಾಳುಗಳಿಗೆ ಸಕಲೇಶಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ಸಿದ್ದಲಿಂಗಸ್ವಾಮಿ ಹಾಗೂ ಕನಕಪುರ ಸಮೀಪದ ಸಾತನೂರು ಪಕ್ಕದ ಚಿಕ್ಕಹಳ್ಳಿ ಗ್ರಾಮದ ಕೀರ್ತಿ ಅವರ ವಿವಾಹ ಬುಧವಾರ ಧರ್ಮಸ್ಥಳದಲ್ಲಿ ನಿಶ್ಚಿತವಾಗಿತ್ತು.

ಈ ಹಿನ್ನೆಲೆಯಲ್ಲಿ ಹುಡುಗನ ಸಂಬಂಧಿಕರು ಖಾಸಗಿ ಬಸ್‌ನಲ್ಲಿ ಮದುವೆಗೆ ಹೊರಟಿದ್ದರು. ಆದರೆ ದುರ್ಗಾಂಬ ರೈಸ್ ಮಿಲ್ ಸಮೀಪ ತಿರುವಿನಲ್ಲಿ ಬಸ್ ನಿಯಂತ್ರಣಕ್ಕೆ ಸಿಗದ ಪರಿಣಾಮ ಮಗುಚಿ ಬಿದ್ದಿದೆ. ಅಪಘಾತ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *