ನಿಮ್ಮ ಜತೆ ನಾವಿದ್ದೇವೆ ಧೈರ್ಯವಾಗಿರಿ

ಶಿವಮೊಗ್ಗ: ಕಷ್ಟಪಟ್ಟು ಕಟ್ಟಿದ್ದ ಮನೆ ಪ್ರವಾಹದಿಂದ ಕುಸಿದು ಬಿದ್ದಿದ್ದು, ಅಂದಿನ ರಾತ್ರಿ ಹಾಕಿಕೊಂಡಿದ್ದ ಬಟ್ಟೆಯಲ್ಲೇ ಮನೆಯಿಂದ ಹೊರಗೆ ಹೋದೆವು. ಎಲ್ಲ ವಸ್ತುಗಳು ನೀರಿನಲ್ಲಿ ಹಾಳಾಗಿವೆ. ದಾಖಲೆಗಳು ಸಹ ನೀರಿನಲ್ಲಿ ಕೊಚ್ಚಿಹೋಗಿವೆ. ಮತ್ತೆ ಮನೆ ಕಟ್ಟಿಸಿಕೊಳ್ಳಲು ಶಕ್ತಿಯಿಲ್ಲ. ಮನೆ ಕಟ್ಟಲು ನೆರವು ನೀಡಿ ಎಂದು ಸಂತ್ರಸ್ತರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಳಿ ಅಳಲು ತೋಡಿಕೊಂಡರು.

ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೋಮವಾರ ದಿನೇಶ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂತ್ರಸ್ತರು ನೆರವು ನೀಡುವಂತೆ ಬೇಡಿಕೊಂಡರು. ನೊಂದವರಿಗೆ ಸಾಂತ್ವನ ಹೇಳಿದ ದಿನೇಶ್, ಮನೆ ಕಳೆದುಕೊಂಡವರಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುತ್ತಿದೆ. ಮನೆ ಭಾಗಶಃ ಹಾನಿಯಾಗಿದ್ದರೂ ಪರಿಹಾರ ಸಿಗುತ್ತದೆ. ನಿಮ್ಮ ಜತೆ ನಾವೂ ಇದ್ದೇವೆ. ಧೈರ್ಯವಾಗಿರಿ ಎಂದು ತಿಳಿಸಿದರು.

ಎಲ್ಲ ಸಂತ್ರಸ್ತರಿಗೂ ಸೂಕ್ತ ಪರಿಹಾರ ಸಿಗುವಂತೆ ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಗಮನ ಹರಿಸಬೇಕು. ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಜನರಿಗೆ ನೆರವು ಸಿಗುವಂತೆ ಮಾಡಬೇಕು. ಮನೆ ಕುಸಿತ, ಹಾನಿ, ನೀರು ನಿಂತು ಗೋಡೆ ಬಿರುಕು ಬಿಟ್ಟಿರುವುದು ಸೇರಿ ಎಲ್ಲ ಮಾಹಿತಿಯನ್ನು ಸರ್ವೆ ಸಂದರ್ಭದಲ್ಲಿ ಪಟ್ಟಿ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಬಾಪೂಜಿನಗರ, ರಾಜೀವ್ ಗಾಂಧಿ ಬಡಾವಣೆ, ಇಮಾಮ್ ಬಾಡಾ, ಸೀಗೆಹಟ್ಟಿ, ಮಂಡಕ್ಕಿಭಟ್ಟಿ ಕಾಲನಿ, ಕುಂಬಾರ ಗುಂಡಿ ಸೇರಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಅವಲೋಕಿಸಿದರು. ಶೀಘ್ರವೆ ಪರಿಹಾರ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು.

ಪ್ರವಾಹ ಸಂತ್ರಸ್ತರಿಗೆ ಜಿಲ್ಲಾ ಕಾಂಗ್ರೆಸ್​ನಿಂದ ದಿನನಿತ್ಯ ಬಳಕೆ ವಸ್ತುಗಳನ್ನು ವಿತರಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಎಂಎಲ್​ಸಿ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮಹಿಳಾ ಜಿಲ್ಲಾಧ್ಯಕ್ಷೆ ಅನಿತಾಕುಮಾರಿ, ಪಾಲಿಕೆ ಸದಸ್ಯರಾದ ರಮೇಶ್ ಹೆಗ್ಡೆ, ಎಚ್.ಸಿ.ಯೋಗೀಶ್, ಯಮುನಾ ರಂಗೇಗೌಡ, ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಎನ್.ರಮೇಶ್, ಚಂದ್ರಭೂಪಾಲ್ ಇದ್ದರು.

Leave a Reply

Your email address will not be published. Required fields are marked *