ನಿತ್ಯಭವಿಷ್ಯ|ಈ ರಾಶಿಯವರಿಗೆ ಇಂದು ವ್ಯವಸ್ಥೆಯ ದುಷ್ಟ ಬಾಹುಗಳು ಅಡೆತಡೆ ಗಳನ್ನು ತರುವುದು ಸತ್ಯ

ಮೇಷ: ವಿವಿಧ ವಿಧದ ಕ್ಷೇತ್ರಗಳಲ್ಲಿ ಸಿದ್ಧಿ ಸಿಗುವಂತಹ ಅಪರೂಪದ ಸಂಪನ್ನತೆಯು ನಿಮಗಿಂದು ಒದಗಿಬರಲಿದೆ. ಶುಭಸಂಖ್ಯೆ: 3

ವೃಷಭ: ರಕ್ಷಾಸ್ತುತಿಯಿಂದ ಶ್ರೀದೇವಿ ಮಹಾಕಾಳಿಗೆ ಶರಣಾಗಿ. ಅನೇಕ ರೀತಿಯ ಸಿದ್ಧಿಗೆ ಇದು ದಾರಿ ತೆರೆಯಲಿದೆ. ಶುಭಸಂಖ್ಯೆ: 8

ಮಿಥುನ: ನಿಮ್ಮದೇ ಆದ ನಿರ್ದಿಷ್ಟ ಶಕ್ತಿ ಹಾಗೂ ಮಿತಿಯ ಒಳಗಡೆಯೇ ಕೆಲಸ ಮಾಡಿ. ಕೆಲವು ಸಿದ್ಧಿಗಳಿಗೆ ದಾರಿ ಇದೆ. ಶುಭಸಂಖ್ಯೆ: 1

ಕಟಕ: ಪೀಡೆಯಿಂದ ಮುಕ್ತರಾಗಲು ಬುಧಪೀಡಾ ನಿವಾರಣಾ ಸ್ತೋತ್ರವನ್ನು ಪಠಿಸಿ. ಚಿಂತೆಯಿಂದ ದೂರವಾಗುವಿರಿ. ಶುಭಸಂಖ್ಯೆ: 2

ಸಿಂಹ: ಜೂಜು, ಒಂದಂಕಿ ಲಾಟರಿ, ಕುದುರೆ ಬಾಜಿಗೆ ಹಣ ವ್ಯಯ ಮಾಡಬೇಡಿ. ಒತ್ತಡ ಎದುರಾಗಲಿದೆ. ಸೋಲಬೇಡಿ ಶುಭಸಂಖ್ಯೆ: 6

ಕನ್ಯಾ: ಅನ್ಯರ ಸಹಾಯವನ್ನು ನಿರೀಕ್ಷೆ ಮಾಡಲು ಹೋಗದಿರಿ. ನಿಮ್ಮ ಪ್ರತಿಭೆಯಿಂದಲೇ ಬೇಕಾದ ಗೆಲುವು ಸಿಗಲಿದೆ. ಶುಭಸಂಖ್ಯೆ: 3

ತುಲಾ: ನಿಮ್ಮ ಕ್ರಿಯಾಶಕ್ತಿಗೆ ಇರುವ ತೂಕವು ಅನುಪಮವಾದುದು. ಪ್ರೀತಿಯ ಮಾತುಗಳಿಂದ ಮನ್ನಣೆ ದೊರೆಯಲಿದೆ. ಶುಭಸಂಖ್ಯೆ: 7

ವೃಶ್ಚಿಕ: ನೀವು ಉನ್ನತ ವಿದ್ಯಾಭ್ಯಾಸದ ಆಕಾಂಕ್ಷಿಗಳಾಗಿದ್ದರೆ ಸಕಾರಾತ್ಮಕವಾಗಿ ಮುಂದುವರಿಯಿರಿ. ಸಿದ್ಧಿ ಲಭ್ಯ. ಶುಭಸಂಖ್ಯೆ: 4

ಧನಸ್ಸು: ಸಾಲದಿಂದ ನಿಮ್ಮನ್ನು ಮುಕ್ತ ಮಾಡಿಕೊಳ್ಳಲು ಮತ್ತೊಂದು ಸಾಲ ಮಾಡದಿರಿ. ಇದರಿಂದ ಕಷ್ಟ ಎದುರಿಸುವಿರಿ. ಶುಭಸಂಖ್ಯೆ: 9

ಮಕರ: ಕಚೇರಿಯಲ್ಲಿ ನಿಮ್ಮ ಸ್ನೇಹಿತರಿಂದ ಸಹಾಯ ಸಿಗಲಿದೆ. ಆದರೆ ವಿಘ್ನಸಂತೋಷಗಳ ಬಗ್ಗೆ ತುಸು ಎಚ್ಚರವಾಗಿರಿ. ಶುಭಸಂಖ್ಯೆ: 5

ಕುಂಭ: ಅನ್ಯರೊಡನೆ ಚಾತುರ್ಯದ ಮಾತುಕತೆ ತಪ್ಪೇನಲ್ಲ. ಆದರೆ ವಾಸ್ತವ ಮರೆಮಾಚಲು ಹೋಗದಿರಿ. ಸಿದ್ಧಿಗಿದು ದಾರಿ. ಶುಭಸಂಖ್ಯೆ: 1

ಮೀನ: ವ್ಯವಸ್ಥೆಯ ದುಷ್ಟ ಬಾಹುಗಳು ನಿಮಗೆ ಅಡೆತಡೆಗಳನ್ನು ತರುವುದು ಸತ್ಯ. ಜಾಣ್ಮೆಯಿಂದಲೇ ಅದನ್ನು ಗೆಲ್ಲಿ. ಶುಭಸಂಖ್ಯೆ: 4

 

Leave a Reply

Your email address will not be published. Required fields are marked *