ನಿಖರ ಸಮೀಕ್ಷೆಯಿಂದ ಕರ್ತವ್ಯ ನಿರ್ವಹಣೆಗೆ ಅನುಕೂಲ

blank

ಕುಮಟಾ: ಕರೊನಾ ನಿಯಂತ್ರಣಕ್ಕೆ 4 ಅಂಶದ ಕಾರ್ಯ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದರು.

ಪುರಭವನದಲ್ಲಿ ಬುಧವಾರ ಕರೊನಾ ಸೇನಾನಿಗಳ ಸಭೆ ನಡೆಸಿ ಮಾರ್ಗದರ್ಶನ ನೀಡಿದರು. ಜನರಲ್ಲಿರುವ ತಪ್ಪು ಕಲ್ಪನೆ- ಪೂರ್ವಾಗ್ರಹಗಳನ್ನು ತೊಡೆದು ಹಾಕುವುದು, ಉಷ್ಣ ಮತ್ತು ಆಮ್ಲಜನಕ ಮಾಪಕದೊಂದಿಗೆ ನಿಖರ ಸಮೀಕ್ಷೆ ನಡೆಸುವುದು, ಸಮುದಾಯದ ಸಹಕಾರ, ಕ್ವಾರಂಟೈನ್ ಶಿಷ್ಟಾಚಾರ ಪಾಲನೆಗೆ ಸ್ಥಳೀಯ ಟಾಸ್ಕ್ಫೋರ್ಸ್​ನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.

ಕರೊನಾ ಸೇನಾನಿಗಳು ನೀಡುವ ಸಮೀಕ್ಷೆ ನಿಖರವಾಗಿರಬೇಕಾದ ಅನಿವಾರ್ಯತೆ ಇದೆ. ಇದರಿಂದ ಅವರ ಇಲಾಖೆ ಕರ್ತವ್ಯ ನಿರ್ವಹಣೆಗೂ ಅನುಕೂಲವಾಗಲಿದೆ ಎಂದರು.

ವಿದೇಶ ಹಾಗೂ ಹೊರರಾಜ್ಯದಿಂದ ಬಂದವರ ಶೇ. 90ರಷ್ಟು ಮಾಹಿತಿ ನಮಗೆ ಲಭ್ಯವಿರುತ್ತದೆ. ಕಳ್ಳಮಾರ್ಗದಲ್ಲಿ ಬಂದವರು ಹಾಗೂ ಇತರರ ಬಗ್ಗೆ ಸ್ಪಷ್ಟ ಮಾಹಿತಿ, ನಿಗಾ ವಹಿಸುವ ಕೆಲಸ ನಿಮ್ಮಿಂದ ಆಗಬೇಕಿದೆ. ಸಮೀಕ್ಷೆಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಮುಂದಿನ ದಿನದಲ್ಲಿ ರೋಗಲಕ್ಷಣ ಇದ್ದವರಿಗೆ ಮಾತ್ರ ಗಂಟಲ ದ್ರವ ತಪಾಸಣೆ ಮಾಡಲಾಗುವುದು ಎಂದರು.

ಕಲಭಾಗ ಪಿಡಿಒ ವಿನಯಕುಮಾರ ಮಾತನಾಡಿ, ಮಳೆಗಾಲ ಇರುವುದರಿಂದ ಸಹಜವಾಗಿ ಹೆಚ್ಚುವ ಇತರ ಜ್ವರ ಪೀಡಿತರ ತಪಾಸಣೆ ಹಾಗೂ ಚಿಕಿತ್ಸೆ ಹೇಗೆ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ವಿಷಯದಲ್ಲಿ ಸ್ಪಷ್ಟತೆಯೊಂದಿಗೆ ಹೆಜ್ಜೆಯಿಡಬೇಕು. ಜ್ವರ ಪೀಡಿತರ ಸಮಗ್ರ ಮಾಹಿತಿ ಸಂಗ್ರಹಿಸಿ ನಿರ್ಧರಿಸಬೇಕು. ಖಾಸಗಿ ಕ್ಲಿನಿಕ್​ಗಳು ಭಯಬಿಟ್ಟು ನಿತ್ಯ ಜನರಿಗೆ ಆರೋಗ್ಯಸೇವೆ ನೀಡಬೇಕು ಎಂದರು.

ಉಪವಿಭಾಗಾಧಿಕಾರಿ ಅಜಿತ್ ಎಂ. ರೈ, ತಹಸೀಲ್ದಾರ್ ಮೇಘರಾಜ ನಾಯ್ಕ, ತಾಪಂ ಇಒ ಸಿ.ಟಿ.ನಾಯ್ಕ, ಸಿಪಿಐ ಪರಮೇಶ್ವರ ಗುನಗಾ ಇದ್ದರು. ಸಭೆಯಲ್ಲಿ ತಾಲೂಕಿನ ಎಲ್ಲ ಆರೋಗ್ಯ, ಕಂದಾಯ ಇಲಾಖೆ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯರ್ತೆಯರು ಇತರರು ಇದ್ದರು.

ಮುಂದಿನ ಮೂರು ತಿಂಗಳು ಎಚ್ಚರ ವಹಿಸಿ
ಅಂಕೋಲಾ:
ಮುಂದಿನ ಮೂರು ತಿಂಗಳ ಅವಧಿ ಅತ್ಯಂತ ನಿರ್ಣಾಯಕವಾಗಲಿದೆ. ಜಿಲ್ಲೆಯಲ್ಲಿ ಕರೊನಾದಿಂದ ಒಂದೇ ಒಂದು ಸಾವು ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು.

ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಬುಧವಾರ ಆಶಾ, ಅಂಗನವಾಡಿ ಕಾರ್ಯಕರ್ತೆಯರ, ಆರೋಗ್ಯ ಸಿಬ್ಬಂದಿ, ಪಿಡಿಒ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಒಂದೂ ಪ್ರಕರಣ ಬಾರದಂತೆ ಇಲ್ಲಿಯ ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಿಸಿದ್ದೀರಿ. ಹೊರಗಿನಿಂದ ಬಂದವರಿಗೆ ಕ್ವಾರಂಟೈನ್ ನಂತರ ಹೋಂ ಕ್ವಾರಂಟೈನ್ ಮೂಲಕ ಎಲ್ಲರೂ ಶ್ರಮಿಸಿದ್ದಾರೆ. ಹೊರಗಿನಿಂದ ಬರುವವರ ಮೇಲೆ ಎಲ್ಲರೂ ಹದ್ದಿನ ಕಣ್ಣಿಟ್ಟು ಅವರನ್ನು ತಪಾಸಣೆಗೆ ಒಳಪಡಿಸುವ ಅಗತ್ಯವಿದೆ ಎಂದರು.

ತಹಸೀಲ್ದಾರ್ ಉದಯ ಕುಂಬಾರ, ತಾಪಂ ಇಒ ಪಿ.ವೈ. ಸಾವಂತ, ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಹ್ಲಾದ, ತಾಲೂಕು ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯಕ, ಶಿರಸ್ತೇದಾರ್ ಎನ್.ಎಂ. ಗುನಗಾ, ಉಪತಹಸೀಲ್ದಾರ್ ಅಮರ ನಾಯ್ಕ, ಇತರರು ಇದ್ದರು.

Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…