ಬೇಲೂರು: ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿರುವ ಶ್ರೀ ಗುರುಶನೈಶ್ಚರಸ್ವಾಮಿ ದೇಗುಲದಲ್ಲಿ ಫೆ.8 ರಂದು 30ನೇ ವರ್ಷದ ಕಾಕಾ ವಾಹನ ಅಡ್ಡಪಲ್ಲಕ್ಕಿ ಮಹೋತ್ಸವ, ದಿವ್ಯ ರಥೋತ್ಸವ ಆಯೋಜಿಸಲಾಗಿದೆ ಎಂದು ಶ್ರೀ ಗುರುಶನೈಶ್ಚರ ದೇವಾಲಯ ಸಮಿತಿ ಅಧ್ಯಕ್ಷ ಅಪ್ಪಣ್ಣ ತಿಳಿಸಿದ್ದಾರೆ.
ಫೆ.7 ರಂದು ಸಂಜೆ ಗಂಗಾಪೂಜೆ, ಗಣಪತಿ ಪೂಜೆ, ಗಣಹೋಮ, ಚಿಕ್ಕ ಬಿಕ್ಕೋಡು ಗ್ರಾಮಸ್ಥರಿಂದ ರುದ್ರಾಭಿಷೇಕ ನಡೆಯಲಿದೆ. ಫೆ.8ರ ಬೆಳಗ್ಗೆ 8 ರಿಂದ 9 ಗಂಟೆವರೆಗೆ ಹುಸ್ಕೂರು, ಚಿಕ್ಕಬಿಕ್ಕೋಡು, ಕೆಳಬಿಕ್ಕೋಡು, ಮಲ್ಲರಹೊಸಳ್ಳಿ ಗ್ರಾಮಸ್ಥರಿಂದ ಅಡ್ಡಪಲ್ಲಕ್ಕಿ ಉತ್ಸವ, ಕಾಕಾ ವಾಹನ ಉತ್ಸವ ಹಾಗೂ ರಥೋತ್ಸವಕ್ಕೆ ಹೂವಿನ ಹಾರದ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಕೊಂಡೋತ್ಸವ, ಮಧ್ಯಾಹ್ನ 12 ಗಂಟೆಗೆ ದಿವ್ಯ ರಥೋತ್ಸವ ನಡೆಯಲಿದೆ. ರಾತ್ರಿ 9 ಗಂಟೆಗೆ ಶ್ರೀ ದುರ್ಗಾದೇವಿ, ಶ್ರೀರಕ್ತೇಶ್ವರಿ ಕೃಪಾಶ್ರಿತ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.