ಸಂಬರಗಿ, ಬೆಳಗಾವಿ: ಮಹಾರಾಷ್ಟ-ಕರ್ನಾಟಕ ಗಡಿಯಲ್ಲಿ ಆನೆ ದಂತಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಅಂತಾರಾಜ್ಯನಾಲ್ವರು ಕಳ್ಳ ಸಾಗಣಿಕೆದಾರರನ್ನು ಬಂಧಿಸಿದ್ದಾರೆ. ಕವಟೆಮಹಾಂಕಾಳ ಠಾಣೆಯ ವ್ಯಾಪ್ತಿಯ ಖರ್ಶೀಂಗನಲ್ಲಿ ಸಾಗಿಸುತ್ತಿದ್ದ 20ಲಕ್ಷ ರೂ.ಮೌಲ್ಯದ ಆನೆ ದಂತ ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಕುರಿತು ಪೊಲೀಸರು ಅಥಣಿ ತಾಲೂಕಿನ ಪಾಂಡೆಗಾವ ಗ್ರಾಮದ ಹನುಮಂತ ವಾಗಮೊಡೆ ಹಾಗೂ ರಾಹುಲ ರಾಯಕರ, ಬಾಲಾಜಿ ಬನಸೋಡೆ, ಕಾಸೀಂ ಖಾಜಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಸಾಂಗಲಿ ಜಿಲ್ಲಾ ಎಸ್ಪಿ ದೀಕ್ಷಿತ ಗೇಡಂ ಹೆಚ್ಚುವರಿ ಎಸ್ಪಿ ಮನಿಷಾ ಡುಬಲೆ, ಜತ್ತ ಡಿವೈಎಸ್‌ಪಿ ರತ್ನಾಕರ ನವಲೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಪಿಐ ಜಿತೇಂದ್ರ ಶಹಾನೆ, ಪಿಎಸ್‌ಐ ಸಾಗರ ಗೂಡೆ ಇತರರು ಇದ್ದರು.ಅಂತಾರಾಜ್ಯ ಕಳ್ಳರನ್ನು ಬಂಧಿಸಿದ ಸಾಂಗಲಿ ಪೊಲೀಸರು. ಸಾಂಗಲಿ ಎಸ್ಪಿ ದೀಕ್ಷಿತ ಗೇಡಂ, ಹೆಚ್ಚುವರಿ ಎಸ್ಪಿ ಮನಿಷಾ ಡುಬಲೆ, ಡಿವೈಎಸ್‌ಪಿ ರತ್ನಾಕರ ನವಲೆ ಇತರರು ಇದ್ದರು.
ನಾಲ್ವರು ಆನೆ ದಂತ ಕಳ್ಳರ ಬಂಧನ
You Might Also Like
ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿಕ್ಸ್ | Health Tips
ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…
ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips
ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…
ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker
Pressure Cooker : ಪ್ರೆಶರ್ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…