ಹೊನ್ನಾವರ: ‘ಯಕ್ಷಗಾನ ರ್ಕ ಪರಂಪರೆ’ಯ ಕೊಂಡಿಯಾದ ತಾಲೂಕಿನ ರ್ಕ ನಿವಾಸಿ ನಾರಾಯಣ ಹಾಸ್ಯಗಾರ (90) ಅವರು ಸೋಮವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ, ಬಂಧುಗಳು ಹಾಗೂ ಅಪಾರ ಅಭಿಮಾನಿ ಬಳಗವಿದೆ.
ಹಾಸ್ಯಗಾರ ಕುಟುಂಬದ ಕೊಂಡಿ: ಬಡಗುತಿಟ್ಟಿನ ಯಕ್ಷಗಾನ ಪರಂಪರೆಯಲ್ಲಿ ರ್ಕ ಮೇಳ ತನ್ನ ವಿಶಿಷ್ಟ ಶೈಲಿಗಾಗಿ ಪ್ರಸಿದ್ಧಿ ಪಡೆದಿತ್ತು. ರ್ಕ ಮೇಳದ ಮೂಲ ಪ್ರವರ್ತಕರಾದ ದಿ. ಪರಮಯ್ಯ ಹಾಸ್ಯಗಾರ ಅವರಿಗೆ ವರದ ಹಾಸ್ಯಗಾರ, ಗಣಪತಿ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ನಾರಾಯಣ ಹಾಸ್ಯಗಾರ ಈ ನಾಲ್ವರು ಮಕ್ಕಳು. ಪರಮಯ್ಯ ಹಾಸ್ಯಗಾರರು ತಮ್ಮ ನಾಲ್ವರು ಮಕ್ಕಳನ್ನು ಯಕ್ಷಗಾನ ಕಲಾವಿದರನ್ನಾಗಿ ಬೆಳೆಸಿದ್ದರು. 1931ರ ಫೆಬ್ರವರಿ 2 ರಂದು ಜನಿಸಿದ ನಾರಾಯಣ ಹಾಸ್ಯಗಾರ ಅವರು ರ್ಕ ಕುಟುಂಬದ ಪೂರ್ಣಾವಧಿ ವೃತ್ತಿ ಕಲಾವಿದರಾಗಿ ರ್ಕ ಮೇಳದ ಆಧಾರಸ್ತಂಭವಾಗಿದ್ದರು.
ಹಿರಿಯ ತಲೆಮಾರಿನ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಇವರು ಕೋಟ ಶಿವರಾಮ ಕಾರಂತ ಮತ್ತು ಹಾರಾಡಿ ಕುಷ್ಟ (ಕೃಷ್ಣ) ಗಾಣಿಗ ಅವರಲ್ಲಿ ಯಕ್ಷಗಾನದ ಒಳ-ಹೊರ ಅಧ್ಯಯನ ಮಾಡಿದ್ದರು. ಬಡಗುತಿಟ್ಟಿನ ಖ್ಯಾತ ಕಲಾವಿದರೊಂದಿಗೆ ಸರಿ ಸಮನಾಗಿ ಪಾತ್ರ ನಿರ್ವಹಿಸಿದ್ದರು. ಅಲ್ಲದೆ, ಸುರತ್ಕಲ್ ಮೇಳ ಮೊದಲಾದ ತೆಂಕುತಿಟ್ಟಿನ ಯಕ್ಷಗಾನ ಮಂಡಳಿಗಳಲ್ಲಿಯೂ ಕಲಾವಿದರಾಗಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದರು.
ನಾಣಿ ಹಾಸ್ಯಗಾರರೆಂದೇ ಖ್ಯಾತರಾಗಿದ್ದ ಇವರು ಕೃಷ್ಣ, ಅರ್ಜುನ, ಧರ್ಮರಾಯ, ಮೊದಲಾದ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ನಾರಾಯಣ ಹಾಸ್ಯಗಾರರು ತಮ್ಮ ವಂಶಪಾರಂಪರ್ಯವಾಗಿ ಬಂದ ಶೈಲಿಯ ಕುಣಿತದಿಂದ ಯಕ್ಷಗಾನ ಕ್ಷೇತ್ರದಲ್ಲಿ ಬಹುಕಾಲ ಮಿಂಚಿದ್ದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಯಕ್ಷಗಾನ ಪ್ರದರ್ಶಿಸಿದ್ದರು. ಬಡೋದಯ ಮಹಾರಾಜರ ಎದುರು ರ್ಕ ಮೇಳದವರು ಪ್ರದರ್ಶಿಸಿದ ಯಕ್ಷಗಾನ ಮರಾಠಿ ನಾಟ್ಯ ರಂಗಭೂಮಿಗೆ ಪ್ರೇರಕವಾಗಿತ್ತು. ನಾರಾಯಣ ಹಾಸ್ಯಗಾರರ ನಿಧನದಿಂದ ಪರಮಯ್ಯ ಹಾಸ್ಯಗಾರ ಕುಟುಂಬದ ಯಕ್ಷಗಾನ ಕಲಾವಿದರ ಕೊನೆಯ ಕೊಂಡಿ ಕಳಚಿದಂತಾಗಿದೆ.