ನಾಯಿ ದಾಳಿಯಿಂದ ಜಿಂಕೆ ಸಾವು

ಮುಂಡಗೋಡ: ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಾಯಿಗಳ ದಾಳಿಗೆ ಜಿಂಕೆ ಸೋಮವಾರ ಮೃತಪಟ್ಟಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದಿದ್ದ 3ವರ್ಷದ ಗಂಡು ಜಿಂಕೆ ಮೇಲೆ ಐದಾರು ನಾಯಿಗಳು ದಾಳಿ ನಡೆಸಿವೆ. ಗಂಭೀರ ಗಾಯಗೊಂಡಿದ್ದ ಜಿಂಕೆಯನ್ನು ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪಶು ವೈದ್ಯರ ಜೊತೆ ಸ್ಥಳಕ್ಕೆ ಬರುವಷ್ಟರಲ್ಲಿ ಜಿಂಕೆ ಮೃತಪಟ್ಟಿತ್ತು. ಜಿಂಕೆ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಇಲಾಖೆಯ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಕಾತೂರ ವಲಯ ಅರಣ್ಯಾಧಿಕಾರಿ ಅಜಯ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಶ್ರೀಶೈಲ ಐನಾಪುರ, ಅರಣ್ಯ ರಕ್ಷಕರಾದ ಮಂಜುನಾಥ ದೊಡ್ಡಣ್ಣನವರ, ಬಸವರಾಜಪ್ಪ ವಾಲ್ಮೀಕಿ ಹಾಗೂ ಇತರರಿದ್ದರು.

Leave a Reply

Your email address will not be published. Required fields are marked *