More

  ನಾಪಂಡ ಮುತ್ತಪ್ಪ ಪರ ಸಹೋದರ ಪ್ರಚಾರ

  ಶನಿವಾರಸಂತೆ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಪರ ಸಹೋದರ ನಾಪಂಡ ಮುದ್ದಪ್ಪ ನೇತೃತ್ವದಲ್ಲಿ ಭಾನುವಾರ ಕೊಡ್ಲಿಪೇಟೆಯಲ್ಲಿ ಪಾದಯಾತ್ರೆ ಮೂಲಕ ಚುನಾವಣಾ ಪ್ರಚಾರ ನಡೆಸಲಾಯಿತು.

  ಕೊಡ್ಲಿಪೇಟೆ ಗಡಿ ಭಾಗದ ಶಾಂತಪುರ ಗ್ರಾಮದ ಗಣಪತಿ ದೇವಸ್ಥಾನದ ಮುಂಭಾಗದಿಂದ ಬ್ಯಾಡಗೊಟ್ಟ ಹ್ಯಾಂಡ್‌ಪೋಸ್ಟ್ ವೃತ್ತದವರೆಗೆ ಪಾದಯಾತ್ರೆ ಮೂಲಕ ಮೆರವಣಿಗೆ ನಡೆಸಲಾಯಿತು.

  ಜೆಡಿಎಸ್ ಮುಖಂಡ ನಾಪಂಡ ಮುದ್ದಪ್ಪ ಮಾತನಾಡಿ, ಜನಪರ ಕೆಲಸ ಮಾಡುವ ಜೆಡಿಎಸ್ ಈ ಬಾರಿ ಅಧಿಕಾರಕ್ಕೆ ಬರುತ್ತದೆ. ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ. ಪಕ್ಷ ಘೋಷಣೆ ಮಾಡಿರುವ ಪಂಚರತ್ನ ಯೋಜನೆಯನ್ನು ಅವರು ಖಂಡಿತವಾಗಿಯೂ ಜಾರಿಗೆ ತರುತ್ತಾರೆ ಎಂದರು.

  ಕೋಮುವಾದಿ ಮನಸ್ಥಿತಿಯ ಬಿಜೆಪಿಯನ್ನು ಮನೆಗೆ ಕಳುಹಿಸಲು ಹೋರಾಟ ಮಾಡುತ್ತಿರುವಾಗ ರಾಷ್ಟ್ರೀಯ ಪಕ್ಷದವರು ಮುತ್ತಪ್ಪ ಅವರು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾವತಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮೌರ್ಯ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪುಟ್ಟಸ್ವಾಮಿ, ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಎಸ್.ಡಿ.ತಮ್ಮಯ್ಯ, ಪಕ್ಷದ ಪ್ರಮುಖರಾದ ದಿನೇಶ್, ವಸಂತ್ ಇತರರು ಇದ್ದರು.

  See also  ಸಂವಿಧಾನ ಪೀಠಿಕೆ ಓದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts