More

  ನಾದಪ್ರದಕ್ಷಿಣೆ-12 ಸಂಗೀತ ಕಾರ್ಯಕ್ರಮ 29ರಿಂದ

  ಸಿದ್ದಾಪುರ: ಸ್ಥಳೀಯ ಮುರಳೀವನ ಮತ್ತು ಸಂಸ್ಕೃತಿ ಸಂಪದ ಸಂಸ್ಥೆ ಸಂಸ್ಕೃತಿಗಾಗಿ ಪರಂಪರೆ ಎನ್ನುವ ಧ್ಯೇಯದೊಂದಿಗೆ ನಡೆಸಿಕೊಂಡು ಬರುತ್ತಿರುವ ನಾದಪ್ರದಕ್ಷಿಣೆ-12 ಸಂಗೀತ ಕಾರ್ಯಕ್ರಮ ಫೆ. 29 ಹಾಗೂ ಮಾ. 1ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಿದ್ದಾಪುರದ ಶಂಕರಮಠದಲ್ಲಿ ಆಯೋಜಿಸಲಾಗಿದೆ ಎಂದು ಮುರಳೀವನ ಸಂಸ್ಥೆ ಸಂಚಾಲಕ ಕಿರಣ ಹೆಗಡೆ ಮಗೇಗಾರ ಹೇಳಿದರು.

  ಪಟ್ಟಣದ ಶಂಕರಮಠದಲ್ಲಿ ಸುದ್ದಿಗೋಷ್ಠಿ ಯಲ್ಲಿ ಬುಧವಾರ ಮಾತನಾಡಿದ ಅವರು, ಎರಡು ದಿನ ನಡೆಯುವ ನಾದಪ್ರದಕ್ಷಿಣೆ ಕಾರ್ಯಕ್ರಮದಲ್ಲಿ ಒಟ್ಟು 26 ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸುತ್ತಿದ್ದಾರೆ ಎಂದರು.

  ಫೆ. 29ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬೈಠಕ್ ನಡೆಯಲಿದ್ದು, ಪಂ. ಚಂದ್ರಶೇಖರ ವಝೆ ಮುಂಬೈ ಹಾಗೂ ಭಾಗ್ಯಶ್ರೀ ಹೆಗಡೆ ಬಣಗಿ (ಗಾಯನ), ಚೈತನ್ಯ ಭಟ್ಟ ಕಲ್ಲಾಳ (ಸಂತೂರು ವಾದನ), ಸಾರಂಗ ಸಾಂಬರೆ ಸಾಂಗಿ ್ಲ (ಹಾಮೋನಿಯಂ ಸೋಲೊ).

  ಮಧ್ಯಾಹ್ನ 4ರಿಂದ ರಾತ್ರಿ 9ರವರೆಗೆ ಗಾಯನ ಜುಗಲಬಂದಿ ರೇಖಾ ಭಟ್ಟ ಕೋಟೆಮನೆ ಮತ್ತು ರಾಧಾ ದೇಸಾಯಿ ಧಾರವಾಡ ಅವರಿಂದ. ಪಂ.ಸುಧಾಕರ ಪೈಠಣಕರ್ ಬುವಾ ಮಂಬೈ ( ತಬಲಾ ಸೋಲೋ), ನಾಗರಾಜ ಹೆಗಡೆ ಶಿರನಾಲೆ (ಬಾನ್ಸುರಿ), ಪಂ. ಕೇದಾರ ಬೋಡಸ್ ಪುಣೆ (ಗಾಯನ).

  ಮಾ. 1ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಂದಕುಮಾರ ಪಾಟೀಲ ಮುಂಬೈ, ಮಹೇಶ ಕುಲಕರ್ಣಿ ಮುಂಬೈ ಹಾಗೂ ಸುಖದಾ ಕಾಣೆ ಕೊಲ್ಲಾಪುರ (ಗಾಯನ), ರೂಪೇಶ ಮೋರೆ ಮುಂಬೈ (ಪಖವಾಜ್ ಸೋಲೊ). ಸಂಜೆ 5ರಿಂದ ರಾತ್ರಿ 9ರವರೆಗೆ ವಿಶ್ವೇಶ್ವರ ಭಟ್ಟ ಖರ್ವಾ, ಪಂ. ಋಷಿಕೇಶ ಬೋಡಸ್ (ಗಾಯನ), ಕಿರಣ ಹೆಗಡೆ ಮಗೇಗಾರ (ಬಾನ್ಸುರಿ) ಯಲ್ಲಿ ಪಾಲ್ಗೊಳ್ಳಲಿದ್ದಾರೆ.

  See also  ಗುರುವಿಗೆ ಕೀರ್ತಿ ತರುವ ಸಾಧನೆ ಮಾಡಿ

  ಅಲ್ಲದೆ, ಎರಡೂ ದಿನದ ಕಾರ್ಯಕ್ರಮದ ತಬಲಾದಲ್ಲಿ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಭಾರವಿ ದೇರಾಜೆ ಮಂಗಳೂರು, ಸೌರಭ್ ಪೈಠಣಕರ್ ಮುಂಬೈ, ಮಾಧವ ವರ್ತಕ್ ಮುಂಬೈ, ವಿನಾಯಕ ಹಸಬ್ನಿಸ್ ಮುಂಬೈ, ನಿತೀನ್ ಹೆಗಡೆ ಕಲಗದ್ದೆ, ಮಹೇಶ ಹೆಗಡೆ ಹೊಸಗದ್ದೆ. ಸಂವಾದಿನಿಯಲ್ಲಿ ಅಣ್ಣಾ ಬುವಾ ಬಗದ್ ಮೀರಜ್, ಸಾರಂಗ್ ಸಾಂಬರೆ ಸಾಂಗ್ಲಿ, ಡಾ. ಸಮೀರ ಭಾದ್ರ ಸಿದ್ದಾಪುರ ಪಾಲ್ಗೊಳ್ಳಲಿದ್ದಾರೆ.

  ಗೌರವ ಸಮರ್ಪಣೆ: ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಕರಾದ ಡಾ. ಚಂದ್ರಶೇಖರ ಕಾಣೆ ಈಚಲಕರಂಜಿ ಹಾಗೂ ವಿಶ್ವೇಶ್ವರ ಗಾಯತ್ರಿ ಶಿರಸಿ (ಬೆಂಗಳೂರು) ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಸುಬ್ರಾಯ ಮತ್ತಿಹಳ್ಳಿ, ವಿಜಯ ಹೆಗಡೆ ದೊಡ್ಮನೆ, ಸಿ.ವಿ. ಹೆಗಡೆ ಮಗೇಗಾರ ಉಪಸ್ಥಿತರಿರುವರು ಎಂದು ಕಿರಣ ಹೆಗಡೆ ಹೇಳಿದರು. ವಿಜಯ ಹೆಗಡೆ ದೊಡ್ಮನೆ, ವಿ.ಶೇಷಗಿರಿ ಭಟ್ಟ ಗುಂಜಗೋಡ ಇದ್ದರು.</

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts