ನಾಗರಮುನ್ನೋಳಿ: ನಾಡು, ನುಡಿ ಕಟ್ಟಿ ಬೆಳೆಸಲು ಪ್ರತಿಯೊಬ್ಬರು ಕಂಕಣಬದ್ಧರಾಗಿರಬೇಕು ಎಂದು ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ಧ ಮಹಾಸ್ವಾಮೀಜಿ ಹೇಳಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಾಸ್ಯ ಕನ್ನಡ ರಸಮಂಜರಿ ಮತ್ತು ಜಿಲ್ಲಾಮಟ್ಟದ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾಡಿನ ಸಂಸ್ಕೃತಿ ಬೆಳೆಯಲು ಕನ್ನಡದ ಮೇಲಿನ ಪ್ರೀತಿ, ದೇಶಭಕ್ತಿ ಎಲ್ಲರಲ್ಲಿಯೂ ಇರಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಡಾ.ಸುರೇಶ ಉಕ್ಕಲಿ ಮಾತನಾಡಿ, ಕನ್ನಡ ನಾಡಿಗೆ ನೂರಾರು ವರ್ಷಗಳ ಇತಿಹಾಸ ಇದೆ ಎಂದರು. ಎಂ.ಬಿ.ಆಲೂರೆ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಮರ‌್ಯಾಯಿ, ಖ್ಯಾತ ಲಕ್ವಾ ತತ್ಞ ಡಾ.ಎಮ್.ಬಿ.ಕುಂಬಾರ, ಯುವ ಮುಂಖಡ ಶಿವಾನಂದ ಐಹೊಳೆ, ಗಣೇಶ ಮೋಹಿತೆ, ಶಿವಾನಂದ ಮರ‌್ಯಾಯಿ, ಮಹೇಶ ಕನ್ಮರಡಿ, ರಮೇಶ ಕಾಳನ್ನವರ, ಕೃಷ್ಣಾ ಕೆಂಚನ್ನವರ, ವಿನಾಯಕ ಕುಂಬಾರ, ಮಹಾದೇವ ಚೌಗಲಾ, ಅರುಣ ಮರ‌್ಯಾಯಿ, ನಿಜಾಮ್ ಫೆಂಡಾರಿ, ಶಾಹಿದ ಗೌಂಡಿ, ಬಾಳಪ್ಪಾ ಬಾನಿ, ಕಾಶಪ್ಪ ಗಿಜನ್ನವರ, ಸಂಜು ಕುಂಬಾರ, ಸುರೇಶ ಕೊಟಿ, ಸಂಜು ಬಾನೆ, ಹನ್ನಮಂತಹ ಕೆಳಗಡೆ, ಗೋಪಾಲ ಕುಂಬಾರ, ಸುಧಾಕರ ಭಂಗಿ, ಜಯಶ್ರೀ ಬಾನೆ, ಸಂದೀಪ ವಾವರೆ ಇತರರಿದ್ದರು. ಎಸ್.ಆರ್.ಕುದರಗಿ ಸ್ವಾಗತಿಸಿದರು. ಬಿ.ಎಸ್.ಕಮತೆ ನಿರೂಪಿಸಿದರು.