ನಾಡಿನ ಪ್ರತಿ ಮಹಿಳೆ ಓಬವ್ವನಂತಾಗಬೇಕು

blank

ಚಿತ್ರದುರ್ಗ: ಶೌರ್ಯ, ಸಮಯ ಪ್ರಜ್ಞೆ, ಬುದ್ಧಿವಂತಿಕೆ ಹೊಂದಿದ್ದ ಓಬವ್ವಳಂತೆ ನಾಡಿನ ಪ್ರತಿ ಮಹಿಳೆಯರೂ ಆಗಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಲಹೆ ನೀಡಿದರು.

ಛಲವಾದಿ ಗುರುಪೀಠ ಮತ್ತು ಮಹಾಸಭಾ, ಒನಕೆ ಓಬವ್ವ ಸಂರಕ್ಷಣಾ ಸಮಿತಿಯಿಂದ ಕೋಟೆ ಮುಂಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.

ನಾಡಿನ ರಾಣಿಯರು ಯುದ್ಧಗಳಲ್ಲಿ ಶತ್ರುಗಳನ್ನು ಸದೆಬಡಿದು ಹೆಸರಾಗಿದ್ದಾರೆ. ಆದರೆ, ಚಿತ್ರದುರ್ಗ ಕೋಟೆಯ ಕಾವಲುಗಾರನ ಪತ್ನಿಯಾದ ಓಬವ್ವ ತೋರಿದ ಪರಾಕ್ರಮ ಎಂದಿಗೂ ಮರೆಯಲಾಗದು. ಎಲ್ಲರೂ ಮೆಚ್ಚುವಂತದ್ದು ಎಂದು ಬಣ್ಣಿಸಿದರು.

ಓಬವ್ವ ಒಂದು ಜಾತಿಗೆ ಸೀಮಿತವಲ್ಲ. ಆಕೆಯ ಕರ್ತವ್ಯನಿಷ್ಠೆ ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಮಹನೀಯರ ಚರಿತ್ರೆ ಯುವಸಮೂಹ ತಿಳಿದು ದೇಶ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕಿದೆ ಎಂದು ಸಲಹೆ ನೀಡಿದರು.

ವಿದ್ಯಾವಂತರ ಸಂಖ್ಯೆ ಹೆಚ್ಚಿದಂತೆ ಜಾತೀಯತೆ ಕಣ್ಮರೆಯಾಗಲಿದೆ ಎಂಬ ಮಾತು ಸುಳ್ಳಾಗಿ ಇನ್ನಷ್ಟು ಅಧಿಕವಾಗಿರುವುದು ನೋವಿನ ಸಂಗತಿ. ಜಾತಿ ಬಿಟ್ಟು ಸರ್ವರನ್ನು ಗೌರವಿಸುವ, ಪ್ರೀತಿಸುವ ಮೂಲಕ ಭಾರತೀಯರಾಗಿ ಬದುಕೋಣ ಎಂದು ಕಿವಿಮಾತು ಹೇಳಿದರು.

ಸರ್ಕಾರದ ವಿರುದ್ಧ ಮಾಡುತ್ತಿಲ್ಲ: ಓಬವ್ವ ಜಯಂತಿಯನ್ನು ಸರ್ಕಾರದ ವಿರುದ್ಧವಾಗಿ ಖಂಡಿತ ಮಾಡುತ್ತಿಲ್ಲ. ಗುರುಪೀಠ ಹಾಗೂ ಮಹಾಸಭಾದಿಂದ ಪ್ರತ್ಯೇಕವಾಗಿ ಆಚರಿಸಲಾಗುತ್ತಿದೆ. ಈಗ ಚಿಕ್ಕದಾಗಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಜನ ಸೇರಲಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬಸವರಾಜ ಬೊಮ್ಮಾಯಿ ಈ ಹಿಂದೆ ಸಿಎಂ ಆಗಿದ್ದಾಗ ಚಿತ್ರದುರ್ಗದಲ್ಲಿ ರಾಜ್ಯಮಟ್ಟದಲ್ಲಿ ಜಯಂತಿ ಆಚರಿಸಲಾಗಿತ್ತು. ಈಗಿನ ಸರ್ಕಾರ ಅದನ್ನು ಮರೆತಿದೆ. ಪ್ರತಿ ವರ್ಷವೂ ದೊಡ್ಡಮಟ್ಟದಲ್ಲಿ ಆಚರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಅರಿವು ಮೂಡಿಸಿ, ಓಬವ್ವನ್ನಂತೆ ಸಾಹಸ, ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯ ಶ್ರೀನಿವಾಸ್ ಮಾತನಾಡಿ, ಜಾತಿ, ಧರ್ಮಕ್ಕಿಂತಲೂ ದೇಶ ಮತ್ತು ಅಭಿವೃದ್ಧಿಗಾಗಿ ಹೋರಾಟದ ಅಗತ್ಯವಿದೆ. ಸರ್ವ ಧರ್ಮೀಯರು ನಾವೆಲ್ಲರೂ ಭಾರತೀಯರು ಎಂಬ ವಾತಾವರಣ ನಿರ್ಮಿಸಬೇಕಿದೆ ಎಂದರು.

ಇದೇ ವೇಳೆ ಅಶೋಕ, ದಯಾನಂದ, ಮಂಜುಳಮ್ಮ ಅವರನ್ನು ಸನ್ಮಾನಿಸಲಾಯಿತು. ಬಸವನಾಗಿದೇವ ಶ್ರೀ, ಸಂರಕ್ಷಣಾ ಸಮಿತಿ ಅಧ್ಯಕ್ಷ ಛಲವಾದಿ ತಿಪ್ಪೇಸ್ವಾಮಿ, ಬಿಜೆಪಿ ಮುಖಂಡ ರುದ್ರಯ್ಯ, ಶೇಷಣ್ಣ, ಶರಣಪ್ಪ, ಪ್ರದೀಪ್, ಶ್ರೀನಾಥ್, ರುದ್ರೇಶ್, ಕೇಶವ, ಗೋಪಿ, ಲೋಕೇಶ್, ಬಿಂದು ಇತರರಿದ್ದರು.

Share This Article

ಈ ಆಹಾರ ಪದಾರ್ಥಗಳು Slow Poission; ಅತಿಯಾದ ಸೇವನೆಯಿಂದ ಅಪಾಯ ತಪ್ಪಿದಲ್ಲ | (Health Tips)

ಇತ್ತೀಚಿನ ದಿನಗಳಲ್ಲಿ ಜನರು ಅತ್ಯಂತ ದುಬಾರಿ ಪಾದರ್ಥಗಳನ್ನು ಸೇವಿಸುತ್ತಿದ್ದಾರೆ, ಆದರೂ ಇನ್ನು ದುರ್ಬಲರಾಗಿದ್ದಾರೆ. ಆಯಾಸ, ದೌರ್ಬಲ್ಯ,…

Chocolate ಸೇವನೆ ಮೈಗ್ರೇನ್​ ಹೆಚ್ಚಾಗಲು ಕಾರಣವಾಗಬಹುದೇ; ವೈದ್ಯರು ಹೇಳಿದ್ದೇನು? | Health Tips

ಮಕ್ಕಳಿಂದ ದೊಡ್ಡವರು ಇಷ್ಟಪಟ್ಟು ತಿನ್ನುವ ಚಾಕೊಲೇಟ್ ವೈದ್ಯಕೀಯ ಮೌಲ್ಯವನ್ನು ಹೊಂದಿದೆ ಎಂದು ಕೆಲವೇ ಜನರಿಗೆ ತಿಳಿದಿದೆ.…

Financial Problems: ಸಾಲದ ನೋವಿನಿಂದ ಮುಕ್ತಿ ಹೊಂದಲು ಹೀಗೆ ಮಾಡಲೇಬೇಕು!

Financial Problems: ಇತ್ತೀಚಿನ ದಿನಗಳಲ್ಲಿ ಪ್ರತಿ ಹತ್ತರಲ್ಲಿ ಎಂಟು ಜನರು ಸಾಲದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುಡಿದ…