More

  ನಾಡಿನ ಜನರಲ್ಲಿ ಜಾನಪದ ಕಲೆ ರಕ್ತಗತ

  ಥಣಿ ಗ್ರಾಮೀಣ: ಜಾನಪದ ಕಲೆಗಳು ಈ ನಾಡಿನ ಜನರ ಮನೆ ಹಾಗೂ ಮನಗಳಲ್ಲಿ ರಕ್ತಗತವಾಗಿವೆ. ನೀರು, ಗಾಳಿ, ಆಹಾರದಷ್ಟೇ ಕಲೆ, ಸಂಸ್ಕೃತಿಯನ್ನು ಜನ ಆರಾಧಿಸುತ್ತಾರೆ ಎಂದು ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಹೇಳಿದರು.

  ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಗಜಾನನ ಮಿತ್ರ ಮಂಡಳಿ ವತಿಯಿಂದ ಆಯೋಜಿಸಿದ್ದ ಡೊಳ್ಳಿನ ಪದ ಗಾಯನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

  ಗ್ರಾಮೀಣ ಪ್ರದೇಶದಲ್ಲಿ ಸೋಬಾನೆ, ಹಂತಿ ಹಾಡು, ಡೊಳ್ಳಿನ ಪದಗಳು ಜನರನ್ನು ಮಾನಸಿಕ ಹಾಗೂ ದೈಹಿಕವಾಗಿ ಸಮೃದ್ಧಗೊಳಿಸಿವೆ. ಸಾವಿರಾರು ವರ್ಷ ಗತಿಸಿದರೂ ಆ ಹಾಡುಗಳ ಮೌಲ್ಯ ಕಳೆಗುಂದಿಲ್ಲ ಎಂದರು. ಕಾಂಗ್ರೆಸ್ ಮುಖಂಡ ಶಾಮರಾವ್ ಪೂಜಾರಿ ಮಾತನಾಡಿ, ಹಾಲುಮತ ಪ್ರತಿನಿಧಿಸುವ ಡೊಳ್ಳಿನ ಪರಂಪರೆಗೆ ಸತ್ವಯುತ ಹಾಗೂ ಪೂಜ್ಯನೀಯ ಸ್ಥಾನವಿದೆ. ಎಲ್ಲ ಸಮಾಜ ಹಾಗೂ ವರ್ಗಗಳ ಮನಸೂರೆಗೊಂಡು ಡೊಳ್ಳಿನ ಹಾಡುಗಳು ಪ್ರಕೃತಿ ದೇವೋಪಾಸನೆ, ಭಕ್ತಿ ಸನ್ಮಾರ್ಗವನ್ನು ಕಲಿಸುತ್ತವೆ ಎಂದರು. ಗಣ್ಯರಿಗೆ ಹಾಗೂ ದಾನಿಗಳಿಗೆ ಸತ್ಕರಿಸಲಾಯಿತು. ಉದ್ಯಮಿ ಸದಾಶಿವ ಬುಟಾಳಿ, ಗುರುಮೂರ್ತಯ್ಯ ಕಾಡದೇವರಮಠ, ಜಿಪಂ ಮಾಜಿ ಸದಸ್ಯೆ ಡಾ. ಸವಿತಾ ಪೂಜಾರಿ, ಡಾ. ಮುರಾರಿ ಬಣಜ, ರವಿ ಬಡಕಂಬಿ, ಮುರೆಪ್ಪ ಬಣಜ, ಶಾರದಾ ಸನದಿ, ಜಾವೇದ ನದಾಫ್, ಪ್ರಶಾಂತ ಕಾಂಬಳೆ ಸೇರಿ ಇತರರಿದ್ದರು.

  ಕೊಕಟನೂರ ಗ್ರಾಮದ ಕರಿಸಿದ್ಧೇಶ್ವರ ದೇವಸ್ಥಾನದಲ್ಲಿ ಗಜಾನನ ಮಿತ್ರ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿದರು. ಶಾಮರಾವ್ ಪೂಜಾರಿ, ಸದಾಶಿವ ಬುಟಾಳಿ, ಗುರುಮೂರ್ತಯ್ಯ ಕಾಡದೇವರಮಠ, ಡಾ. ಸವಿತಾ ಪೂಜಾರಿ ಸೇರಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts