ಸಿನಿಮಾ

ನಾಟಕಕಾರನಿಗೆ ವಸ್ತುಗಳನ್ನು ಡ್ರಾಮ ಮಾಡುವ ಸವಾಲು

ಮೈಸೂರು: ಭಾರತದ ಇತಿಹಾಸವನ್ನು ಒಮ್ಮೆ ಹಿಂದಿರುಗಿ ನೋಡಿದರೂ ನಮಗೆ ನಾಟಕಗಳನ್ನು ರಚಿಸುವ ಹತ್ತಾರು ವಿವರಗಳು ಸಿಗುತ್ತವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ, ನಾಟಕ ರಚನೆಕಾರ ಜಯರಾಮ್ ರಾಯಪುರ ಹೇಳಿದರು.
ನಿರಂತರ ಫೌಂಡೇಶನ್‌ನಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ‘ರಂಗ ವಸಂತ’ ರಂಗೋತ್ಸವದ ಸಮಾರೋಪದಲ್ಲಿ ಭಾನುವಾರ ಮಾತನಾಡಿದರು.
ನಾಟಕಗಳನ್ನು ರಚಿಸಲು ವಸ್ತುಗಳು ಸಿಗುತ್ತಿಲ್ಲ ಎಂದು ಹಲವು ಕಡೆ ಮಾತುಗಳಿವೆ. ಆದರೆ ನಮ್ಮ ದೇಶದ ಇತಿಹಾಸವನ್ನು ಒಮ್ಮೆ ಮೆಲುಕು ಹಾಕಿದರೆ ಹತ್ತಾರು ನಾಟಕಗಳು ಸಿಗುತ್ತವೆ. ಆದರೆ ಆ ಎಲ್ಲ ವಸ್ತುಗಳನ್ನು ನಾಟಕವಾಗಿಸುವ ಸವಾಲು ನಾಟಕಕಾರನಿಗೆ ಇದ್ದೇ ಇರುತ್ತದೆ ಎಂದರು.
ಇತಿಹಾಸವನ್ನು ಆಲೋಚಿಸುವಾಗಲೇ ನನಗೆ ಕೆಂಪೇಗೌಡರ ಜೀವನಾಧಾರಿತ ಸಿರಿಗೆ ಸೆರೆ, ಗಂಗರಸರ ಕಾಲದ ಚಾವುಂಡರಾಯ ಹಾಗೂ ಮೊಘಲ್ ಸಿಂಹಾಸನಕ್ಕಾಗಿ ದಾರಾಶಿಕೊಹ್ ಹಾಗೂ ಔರಂಗಜೇಬನ ನಡುವಿನ ಕಾಳಗದ ಕತೆಯಾಗಿ ವಾರಸುದಾರ ನಾಟಕಗಳನ್ನು ರಚಿಸಲು ಸಾಧ್ಯವಾಯಿತು ಎಂದು ವಿವರಿಸಿದರು.
ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ನೃಪತುಂಗ ಕನ್ನಡ ಶಾಲೆಯ ಕಾರ್ಯದರ್ಶಿ ಸವಿತಾ, ನಿರಂತರದ ಪ್ರಸಾದ್ ಕುಂದೂರು ಇದ್ದರು. ಬಳಿಕ ನಿರಂತರ ರಂಗ ತಂಡದಿಂದ ಜಯರಾಮ್ ರಾಯಪುರ ಅವರ ರಚಿಸಿರುವ ‘ವಾರಸುದಾರ’ ನಾಟಕ ಪ್ರದರ್ಶನಗೊಂಡಿತು.

Latest Posts

ಲೈಫ್‌ಸ್ಟೈಲ್