ನಾಗಲಾಪುರ ಬೆಟ್ಟಕ್ಕೆ ಬೆಂಕಿ / ನೂರಾರು ಎಕರೆ ಪ್ರದೇಶದಲ್ಲಿ ಗಿಡಮರಗಳು ಬೆಂಕಿಗೆ ಆಹುತಿ / ವನ್ಯ ಜೀವಿಗಳು ಅರಣ್ಯದಿಂದ ಪರಾರಿ / ರೈತರ ತೋಟಗಳಿಗೆ ಲಗ್ಗೆ ಇಟ್ಟ ವನ್ಯ ಜೀವಿಗಳು

ವಿಜಯವಾಣಿ ಸುದ್ದಿಜಾಲ ಕೋಲಾರ
ಬೇಸಿಗೆ ಮುನ್ನವೇ ಅರಣ್ಯ ಹಾಗೂ ಅರಣ್ಯ ಪ್ರದೇಶಕ್ಕೆ ಒಳಪಡುವ ಬೆಟ್ಟ ಗುಡ್ಡಗಳಿಗೆ ಆಕಸ್ಮಿಕ ಬೆಂಕಿ ಬೀಳುತ್ತಿದೆ. ಇದರಿಂದಾಗಿ ವನ್ಯ ಜೀವಿಗಳು ಸೇರಿದಂತೆ ಅರಣ್ಯ ಇಲಾಖೆ ಬೆಳೆಸಿರುವ ಗಿಡಮರಗಳು ಬೆಂಕಿಗೆ ಆಹುತಿಯಾಗುತ್ತಿವೆ. ಅರಣ್ಯ ಇಲಾಖೆ ಕಂಡು ಕಾಣದಂತೆ ಮೌನಕ್ಕೆ ಶರಣಾಗುತ್ತಿದ್ದಾರೆ. ಬೆಂಕಿ ಬಿದ್ದ ನಂತರ ನಂದಿಸಲು ಮುಂದಾಗುತ್ತಿದ್ದಾರೆ.

ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳ್ಳಿಗ್ಗೆ ತನಕವೂ ಕೋಲಾರ ತಾಲ್ಲೂಕು ನಾಗಲಾಪುರ ಬೆಟ್ಟಕ್ಕೆ ಬೆಂಕಿ ಬಿದ್ದು, ಧಗಧಗನೆ ಉರಿಯುತ್ತಿದ್ದರೂ ಅರಣ್ಯ ಇಲಾಖೆಯವರು ಕಂಡು ಕಾಣದಂತೆ ಮೌನಕ್ಕೆ ಶರಣಾದ ಕಾರಣ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿ ಇದ್ದ ವನ್ಯ ಜೀವಿಗಳು ದಿಕ್ಕು ಕಾಣದೆ ಓಡಿದವು. ಚಿಕ್ಕ ಚಿಕ್ಕ ಮರಿಗಳು ಮತ್ತು ಪಕ್ಷಿಗಳು ಇಟ್ಟ ಮೊಟ್ಟೆಗಳು ಬೆಂಕಿಗೆ ಆಹುತಿಯಾದವು.

ಸಾರ್ವಜನಿಕರು ಬೆಳ್ಳಿಗ್ಗೆ ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ವಾಹನ ಬೆಟ್ಟ ಗುಡ್ಡಗಳ ಮಧ್ಯೆ ಹೋಗಲು ಆಗದೆ ಇದ್ದ ಕಡೆಯಿಂದಲೇ ಸ್ವಲ್ಪ ಮಟ್ಟಿಗೆ ಬೆಂಕಿಯನ್ನು ನಂದಿಸಿದ್ದಾರೆ. ಆದರೂ ಶನಿವಾರ ಸಂಜೆಯ ತನಕವೂ ಬೆಂಕಿ ಸುಡುತ್ತಲೇ ಇತ್ತು.

ಭೂಮಿ ಮೇಲೆ ಬೆಟ್ಟ ಗುಡ್ಡ, ಗಿಡ ಮರಗಳು ಪ್ರಕೃತಿಯ ಸಮತೋಲನ ಕಾಪಾಡುತ್ತವೆ, ಬೆಟ್ಟ ಗುಡ್ಡಗಳಲ್ಲಿ ಅರಣ್ಯ ಇಲಾಖೆಯವರು ಲಕ್ಷಾಂತರ ಖರ್ಚು ಮಾಡಿ ಗಿಡಗಳನ್ನು ಬೆಳೆಸಿ ಕಾಡು ಪ್ರಾಣಿಗಳು ವಾಸಿಸಲು ಅನುಕೂಲ ಮಾಡಿಕೊಡಲಾಗುತ್ತದೆ, ಆದರೆ ಮಳೆಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗುವ ಮೊದಲು ಬೆಟ್ಟಗಳಿಗೆ ಬೆಂಕಿ ಬಿದ್ದು ಮರ ಗಿಡಗಳು ಸುಟ್ಟು ಬೆಟ್ಟಗಳಲ್ಲಿ ವಾಸಿಸುತ್ತಿರುವ ಪ್ರಾಣಿ ಪಕ್ಷಗಳು ಜೀವ ಕಳೆದುಕೊಳ್ಳುವಂತಾಗುತ್ತಿದೆ.

ಅರಣ್ಯ ರಕ್ಷಕರೇ ಭಕ್ಷಕರಾಗುತ್ತಿದ್ದಾರೆ :
ಪ್ರತಿ ವರ್ಷ ಕೋಟ್ಯಾಂತರ ರೂ.ಗಳು ಖರ್ಚು ಮಾಡಿ ಬೆಟ್ಟಗಳ ತಪ್ಪಲಿನಲ್ಲಿ ಗಿಡಗಳನ್ನು ನೆಡಲಾಗುತ್ತದೆ. ಮಳೆಗಾಲದಲ್ಲಿ ನೆಟ್ಟು ಬದುಕಿ ಇನ್ನೇನು ದೊಡ್ಡದಾಗಬೇಕಾದ ಸಂದರ್ಭಕ್ಕೆ ಬೇಸಿಗೆ ಕಾಲ ಶುರುವಾಗುತ್ತದೆ. ಬೇಸಿಗೆ ಕಾಲ ಶುರುವಾಗುವ ಮೊದಲೇ ಮಳೆಗಾಲದ ಆರಂಭದಲ್ಲಿ ಅರಣ್ಯ ಇಲಾಖೆಯಿಂದ ನೆಡಲಾಗಿದ್ದ ಗಿಡಗಳು ಸುಟ್ಟು ನಾಶವಾಗುತ್ತವೆ. ನಂತರ ಮುಂದಿನ ವರ್ಷ ಮಳೆಗಾಲದಲ್ಲಿ ಅದೇ ಜಾಗದಲ್ಲಿ ಮತ್ತೆ ಲಕ್ಷಾಂತರ ರೂ.ಗಳು ಖರ್ಚು ಮಾಡಿ ಗಿಡ ನೆಡಲಾಗುತ್ತದೆ. ಇದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಣ ಮಾಡಲು ದಂಧೆಯಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

ಅಗ್ನಿ ಶಾಮಕ ಸಿಬ್ಬಂದಿಗೆ ಬೆಟ್ಟಕ್ಕೆ ಬೆಂಕಿ ಬಿದ್ದರೆ ನಿರ್ಲ್ಯಕ್ಷ :
ಬೆಟ್ಟಗಳಿಗೆ ಬೆಂಕಿ ಬಿದ್ದು ಆಕಾಶದೆತ್ತರಕ್ಕೆ ಬೆಂಕಿ ಉರಿಯುತ್ತಿದ್ದರೆ, ಸಾರ್ವಜನಿಕರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದರೆ ನಿಮ್ಮ ಜಮೀನಿಗೇನಾದರೂ ಬೆಂಕಿ ಹರಡುತ್ತದೆಯೇ ಎಂದು ಕೇಳುತ್ತಾರೆ. ಇಲ್ಲ ಎನ್ನುವುದಾದರೆ ಇನ್ನು ನಿಮಗ್ಯಾಕೆ ಬಿಡಿ ಎಂದು ನಿರ್ಲಕ್ಷದ ಮಾತುಗಳನ್ನಾಡುತ್ತಾರೆ. ಒಂದು ವೇಳೆ ಸಾರ್ವಜನಿಕರು ಒತ್ತಾಯಿಸಿ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದರೆ ಅಗ್ನಿ ಶಾಮಕ ಸಿಬ್ಬಂದಿಯ ಖರ್ಚು ವೆಚ್ಚಕ್ಕೆ ಅಗ್ನಿ ಶಾಮಕಕ್ಕೆ ಕರೆ ಮಾಡಿದ್ದ ವ್ಯಕ್ತಿಗೆ ಒತ್ತಾಯಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಬೆಂಕಿಯಿAದ ಕಾಡು ಪ್ರಾಣಿಗಳು ಅಗ್ನಿಗಾಹುತಿ :
ಬೆಟ್ಟ ಗುಡ್ಡಗಳಲ್ಲಿ ನವಿಲು, ಜಿಂಕೆ, ಮೊಲ, ಕಾಡುಹಂದಿ, ಹಾವುಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿ ಪಕ್ಷಿಗಳು ವಾಸ ಮಾಡುತ್ತಿರುತ್ತವೆ ಬೆಟ್ಟಕ್ಕೆ ಬೆಂಕಿ ಬಿದ್ದಾಗ ಪ್ರಾಣಿಗಳ ಮರಿಗಳು, ಪಕ್ಷಿಗಳ ಮೊಟ್ಟೆಗಳು ಬೆಂಕಿಗಾಹುತಿಯಾದರೆ ದೊಡ್ಡ ಪ್ರಾಣಿ ಪಕ್ಷಿಗಳು ರಕ್ಷಣೆಗಾಗಿ ಬೆಟ್ಟದ ತಪ್ಪಲಿನಲ್ಲಿನ ರೈತರ ಜಮೀನಿಗೆ ಆಸರೆ ಹುಡುಕಿ ಬರುತ್ತವೆ. ಇದರಿಂದ ರೈತನ ಬೆಳೆಗಳು ನಾಶವಾಗುತ್ತವೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿವೆ.

ಅರಣ್ಯ ಇಲಾಖೆಯವರು ನಿರ್ಲ್ಯಕ್ಷ ಬಿಡಬೇಕು :
ಬೇಸಿಗೆ ಪ್ರಾರಂಭ ಆಗುತ್ತಿದೆ. ಕಳೆದ ವರ್ಷ ಅರಣ್ಯ ಹಾಗೂ ಬೆಟ್ಟಗುಡ್ಡಗಳಿಗೆ ಬೆಂಕಿ ತಗುಲಿ ಸಾವಿರಾರು ಎಕೆರೆ ಅರಣ್ಯ ನಾಶವಾಯಿತು. ಈ ಬಾರಿ ಪ್ರಾರಂಭದಲ್ಲಿಯೇ ನಾಗಲಾಪುರ ಬೆಟ್ಟಕ್ಕೆ ಬೆಂಕಿ ಬಿದ್ದು, ನೂರಾರು ಎಕೆರೆಯಲ್ಲಿ ಬೆಳೆದಿದ್ದ ಗಿಡಮರಗಳು ನಾಶವಾಗಿವೆ. ಕಳೆದ ವರ್ಷ ನಾಗಲಾಪುರ ಬೆಟ್ಟದ ಪಕ್ಕದಲ್ಲಿ ಅರಾಭಿಕೊತ್ತನೂರು ಬೆಟ್ಟಕ್ಕೆ ಬೆಂಕಿ ತಗುಲಿ ಸಂಜೆಯಾದರೂ ಬೆಂಕಿ ಉರಿಯುತ್ತಿದ್ದುದ್ದನ್ನು ಕಂಡ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕದವರನ್ನು ಕರೆಯಿಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದರು.

ಈ ವರ್ಷ ಉತ್ತಮ ಮಳೆಯಾಗಿರುವ ಕಾರಣ ಅರಣ್ಯ ಇಲಾಖೆಯವರು ಲಕ್ಷಾಂತರ ಸಸಿಗಳನ್ನು ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಹಾಗೂ ಅರಣ್ಯದಲ್ಲಿ ಬೆಳೆಸಿದ್ದಾರೆ. ಬೇಸಿಗೆಯಲ್ಲಿ ಬೆಂಕಿ ಬೀಳದೆ ಅವುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಅರಣ್ಯ ಕಾವಲುಗಾರರ ಸಂಖ್ಯೆಯನ್ನು ಹೆಚ್ಚಿಸಬೇಕು. ಸಿಬ್ಬಂದಿ ಕಡಿಮೆ ಇದ್ದರೆ ದಿನಗೂಲಿ ನೌಕರರನ್ನು ಪಡೆದು ಅರಣ್ಯವನ್ನು ಮೂರು ತಿಂಗಳ ಕಾಲ ಕಾಪಾಡಿಕೊಳ್ಳಬೇಕು. ಸಾರ್ವಜನಿಕರು ಆರೋಪಿಸುವಂತೆ ಬೆಂಕಿ ಬಿದ್ದು, ನಾಶವಾದರೆ ಮತ್ತೆ ಅದೇ ಜಾಗದಲ್ಲಿ ಗಿಡ ನೆಟ್ಟು ಬಿಲ್ಲು ಮಾಡಿಕೊಳ್ಳುವ ದಂಧೆಯನ್ನು ಕೈಬಿಡಬೇಕೆಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.

ಚಿತ್ರ ೦೮ ಕೆ.ಎಲ್.ಆರ್. ೦೧ : ನಾಗಲಾಪುರ ಬೆಟ್ಟಕ್ಕೆ ಬೆಂಕಿ ಬಿದ್ದಿರುವುದು.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…