ನವುಲೆ ಕೆರೆ ಸಂರಕ್ಷಣೆಗೆ ಪರಿಸರಾಸಕ್ತರ ಮನವಿ

ಶಿವಮೊಗ್ಗ: ನವುಲೆ ಕೆರೆ ಸಂಪೂರ್ಣ ಸರ್ವೆ ಮಾಡಿಸಿ ಕೆರೆ ಸಂರಕ್ಷಣೆಗೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಪರಿಸರಾಸಕ್ತರು ಡಿಸಿ ಕೆ.ಎ.ದಯಾನಂದ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಿಇಒ ನಿರಾಕ್ಷೇಪಣೆ ಪತ್ರದೊಂದಿಗೆ ಪ್ರಸ್ತುತ ನವುಲೆ ಕೆರೆಯಲ್ಲಿ ಕಾಮಗಾರಿ ಮುಂದುವರಿಸಲಾಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಸಿಇಒಗೆ ಎನ್​ಒಸಿ ನೀಡಲು ಅಧಿಕಾರವಿಲ್ಲ. ಪ್ರಾಧಿಕಾರಕ್ಕೂ ಅಧಿಕಾರ ಇರುವುದಿಲ್ಲ. ಆದರೆ ನವುಲೆ ಕೆರೆಯಲ್ಲಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ ಎಂದರು.

ರಾಷ್ಟ್ರೀಯ ಹಸಿರುಪೀಠಕ್ಕೆ ಮಾತ್ರ ಅಧಿಕಾರ ಇರುತ್ತದೆ. ನವುಲೆ ಕೆರೆಯಲ್ಲಿ ಕಾಮಗಾರಿ ನಡೆಸುವುದು ಕಾನೂನು ಬಾಹಿರ. ಕೂಡಲೇ ಕಾಮಗಾರಿ ನಿಲ್ಲಿಸಲು ಕ್ರಮ ಜರುಗಿಸಬೇಕು. ಕೆರೆ ನಾಶಕ್ಕೆ ಕಾರಣ ಆಗಿರುವ ಗುತ್ತಿಗೆದಾರರು, ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಶೋಕ್ ಯಾದವ್, ಕೆ.ವಿ.ವಸಂತ್​ಕುಮಾರ್, ಅಶೋಕ್​ಕುಮಾರ್, ಶೇಖರ್ ಗೌಳೇರ್ ಮತ್ತಿತರರಿದ್ದರು.