ನವಿಲು ಬೇಟೆ; ಇಬ್ಬರು ದುಷ್ಕರ್ಮಿಗಳ ಬಂಧನ

ಕೆ.ಆರ್.ಪೇಟೆ: ಚಾಟರ್ ಬಿಲ್ ಬಳಸಿ ರಾಷ್ಟ್ರೀಯ ಪಕ್ಷಿ ನವಿಲನ್ನು ಬೇಟೆಯಾಡುತ್ತಿದ್ದ ದುಷ್ಕರ್ಮಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ತಾಲೂಕಿನ ಜಾಗಿನಕೆರೆ ಬಳಿ ಚಾಟರ್ ಬಿಲ್ಲನ್ನು ಬಳಸಿ ಬೇಟೆಯಾಡುತ್ತಿದ್ದ ನಾಗಮಂಗಲ ತಾಲೂಕಿನ
ಶಿಕಾರಿಪುರದ ಎಲ್ಲೇಶ್(19), ಪ್ರಭು(20) ಬಂಧಿತರಾಗಿದ್ದು, ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ.

ಬೇಟೆಯಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪೇಟೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಮತ್ತು ಸಿಬ್ಬಂದಿ ದಾಳಿ ನಡೆಸಿದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ಮೃತ ನವಿಲು, ಟಿವಿಎಸ್ ಸ್ಕೂಟರ್ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳಿಗೆ ನ್ಯಾಲಯಯ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.

Leave a Reply

Your email address will not be published. Required fields are marked *