ನವಲಗುಂದ ತಾಪಂ ಅಧ್ಯಕ್ಷರಾಗಿ ಅನ್ನಪೂರ್ಣ ಅವಿರೋಧ ಆಯ್ಕೆ

ನವಲಗುಂದ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ನವಲಗುಂದ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶಿರೂರ ತಾಪಂ ಕ್ಷೇತ್ರದ ಅನ್ನಪೂರ್ಣ ಶಿರಹಟ್ಟಿಮಠ ಅವರು ಅವಿರೋಧವಾಗಿ ಆ್ಕಯೆಾದರು.

ತಾಪಂ ಸಭಾ ಭವನದಲ್ಲಿ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. 14 ಸದಸ್ಯ ಬಲದ ತಾಲೂಕು ಪಂಚಾಯಿತಿಯಲ್ಲಿ ಐದು ಕಾಂಗ್ರೆಸ್, 4 ಬಿಜೆಪಿ, 4 ಜೆಡಿಎಸ್, ಓರ್ವ ಪಕ್ಷೇತರ ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನದ ಮೀಸಲು ಸಾಮಾನ್ಯ ಮಹಿಳೆಗೆ ನಿಗದಿಯಾಗಿತ್ತು. ಕಾಂಗ್ರೆಸ್​ನ ಅನ್ನಪೂರ್ಣ ಶಿರಹಟ್ಟಿಮಠ ಅವರು ಮಾತ್ರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ತಾಪಂನ ಎಲ್ಲ ಸದಸ್ಯರು ಶಿರಹಟ್ಟಿಮಠ ಅವರಿಗೆ ಬೆಂಬಲ ಸೂಚಿಸಿದ್ದರು.

ಚುನಾವಣೆ ಪ್ರÅಯೆ ನಡೆಸಿಕೊಟ್ಟ ಜಿಲ್ಲಾ ಉಪವಿಭಾಗಾಧಿಕಾರಿ ಮೊಹ್ಮದ್ ಜುಬೇರ್ ಅವರು, ಅನ್ನಪೂರ್ಣ ಶಿರಹಟ್ಟಿಮಠ ಅವರು ಅವಿರೋಧವಾಗಿ ಆ್ಕಯೆಾಗಿದ್ದಾರೆ ಎಂದು ಘೊಷಿಸಿದರು. ನಂತರ ಮುಖಂಡರು, ಕಾರ್ಯಕರ್ತರು ತಾಪಂ ನೂತನ ಅಧ್ಯಕ್ಷೆ ಶಿರಹಟ್ಟಿಮಠ ಅವರಿಗೆ ಹೂ ಮಾಲೆ, ಶಾಲು ಹೊದಿಸಿ ಸನ್ಮಾನಿಸಿದರು.

ಮಾಜಿ ಸಚಿವ ಕೆ.ಎನ್. ಗಡ್ಡಿ, ತಾಪಂ ಉಪಾಧ್ಯಕ್ಷ ಯೋಗಪ್ಪ ಗೋಲನಾಯ್ಕರ, ಸದಸ್ಯರಾದ ಕಲ್ಲಪ್ಪ ಹುಬ್ಬಳ್ಳಿ, ದೇವಪ್ಪ ರೋಣದ, ಮಲ್ಲರಡ್ಡಿ ಕುರಹಟ್ಟಿ, ವೀರಪ್ಪ ನಾಯ್ಕರ, ನಾಗನಗೌಡ ಪಾಟೀಲ, ಬಸವರಾಜ ನರಗುಂದ, ಕಲ್ಲಪ್ಪ ನಿಂಗವ್ವ ಬಾರಕೇರ, ನಿರ್ಮಲಾ ಗಾಣಿಗೇರ, ಮಲ್ಲವ್ವ ಉಗರಗೋಳ, ಮಂಜು ಬ್ಯಾಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ವಿ.ಪಿ. ಪಾಟೀಲ, ಸದುಗೌಡ ಪಾಟೀಲ, ಶಾಂತಪ್ಪ ತಟ್ಟಿ, ಶಿವಾನಂದ ಪಾಚಂಗಿ, ಸೋಮು ಕವಟೆಕರ, ಬಾಬಾಜಾನ್, ಶಿವಾನಂದ ಜೆಟ್ಟೆಣ್ಣವರ, ಇತರರು ಇದ್ದರು.