ನವರತನ್ ಜ್ಯುವೆಲರ್ಸ್ ಸಾಮಾಜಿಕ ಕಾರ್ಯಕ್ಕೂ ಸೈ

ಬೆಂಗಳೂರು: ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನವರತನ್ ಜ್ಯುವೆಲರ್ಸ್ ದಾನ ಮತ್ತು ಧರ್ಮದ ವಿಚಾರದಲ್ಲಿಯೂ ಮುಂದಿದೆ. ಬೋವಿಪಾಳ್ಯದಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಕಂಪನಿ 15 ಆಶ್ರಮಗಳ ವಾರ್ಷಿಕ ನಿರ್ವಹಣೆ ನೋಡಿಕೊಳ್ಳುತ್ತಿದೆ. ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ತಮ್ಮ ತಾಯಿ ಚುಕ್ಕಿದೇವಿ ಉತ್ತಮಚಂದ ಜೀ ಬಾಫನಾ ಸ್ಮರಣಾರ್ಥ ಕಂಪನಿ ನಿರ್ದೇಶಕ ನಿರ್ಮಲ್​ಕುಮಾರ್ ಪ್ರತಿವರ್ಷ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ. ಮಂಗಳವಾರ ಅದರ ಭಾಗವಾಗಿ ರಾಜಾಜಿನಗರದ ನವರತನ್ ಶೋರೂಂನಲ್ಲಿ ನಡೆದ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿಬಂದಿತು. ಅಂಧ ಮಕ್ಕಳು, ಅಂಗವಿಕಲ ಹಾಗೂ ಅನಾಥ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ನವರತನ್ ಜ್ಯುವೆಲರ್ಸ್ ಉಪಾಧ್ಯಕ್ಷ ಅರುಣ್​ಕುಮಾರ್, ಹಣಕಾಸು ವಿಭಾಗದ ಗ್ಯಾನ್​ಚಂದ್ ಮತ್ತಿತರರು ಉಪಸ್ಥಿತರಿದ್ದರು.

ಆಧುನೀಕರಣದತ್ತ ಸರ್ಕಾರಿ ಶಾಲೆ

ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸುವ ಕನಸು ಕಟ್ಟಿಕೊಂಡಿರುವ ನವರತನ್ ಜ್ಯುವೆಲರ್ಸ್ ಬೋವಿಪಾಳ್ಯದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿದೆ. ವ್ಯವಸ್ಥಾಪಕ ನಿರ್ದೇಶಕ ಗೌತಮ್ ಚಂದ್ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದಿರುವ ಕಂಪನಿ ಅವರದೇ ಮಾರ್ಗದರ್ಶನದಲ್ಲಿ ಸಾಕಷ್ಟು ಸಾಮಾಜಿಕ ಚಟುವಟಿಕೆಗಳನ್ನೂ ನಡೆಸುತ್ತಿದೆ. ಭೊವಿಪಾಳ್ಯದ ಸರ್ಕಾರಿ ಶಾಲೆಯನ್ನು ಆಧುನೀಕರಣಗೊಳಿಸಲಾಗುತ್ತಿದೆ. ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯ, ಗ್ರಂಥಾಲಯ ತೆರೆಯಲಾಗಿದೆ. ಇಂಗ್ಲಿಷ್ ಶಿಕ್ಷಕರನ್ನು ನೇಮಿಸಲಾಗಿದೆ. ನವರತನ್ ಜ್ಯುವೆಲರ್ಸ್ ದತ್ತು ಪಡೆದ ನಂತರ ಶಾಲೆಗೆ ಸಾಕಷ್ಟು ಅನುಕೂಲಗಳಾಗಿದೆ ಎಂಬುದು ಅಲ್ಲಿನ ಸಿಬ್ಬಂದಿ ಅಭಿಪ್ರಾಯವೂ ಆಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು. ಆಲ್ಲದೆ, ಇನ್ನಷ್ಟು ಶಾಲೆಗಳನ್ನು ದತ್ತು ಪಡೆಯುವ ಬಗ್ಗೆಯೂ ಚಿಂತನೆಗಳಿದೆ ಎಂದು ಕಂಪನಿ ಉಪಾಧ್ಯಕ್ಷ ಅರುಣ್​ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಎಂ.ಜಿ. ರಸ್ತೆ, ಜಯನಗರ, ರಾಜಾಜಿನಗರ ಹಾಗೂ ದೆಹಲಿಯಲ್ಲಿ ಶೋರೂಂಗಳನ್ನು ಹೊಂದಿರುವ ಕಂಪನಿಯು ಅಸಂಖ್ಯಾತ ಗ್ರಾಹಕರನ್ನು ಹೊಂದಿದೆ.

ಸಾಮಾಜಿಕವಾಗಿ ಸಂಸ್ಥೆ ಅನೇಕ ಚಟುವಟಿಕೆಗಳನ್ನು ಸಂಘಟಿಸುತ್ತಿದೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮರಳಿ ಕೊಡಬೇಕೆಂಬುದು ನಮ್ಮ ಆಶಯ. ಹಿರಿಯರ ಮಾರ್ಗದರ್ಶನದಂತೆ ಇಂದಿಗೂ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.

| ನಿರ್ಮಲ್​ಕುಮಾರ್, ನವರತನ್ ಜ್ಯುವೆಲರ್ಸ್ ನಿರ್ದೇಶಕ

ನವರತನ್ ಜ್ಯುವೆಲರ್ಸ್ ನಿಂದ ದತ್ತು ಪಡೆಯ ಲಾಗಿರುವ ಬೋವಿ ಪಾಳ್ಯದ ಸರ್ಕಾರಿ ಶಾಲೆಯಲ್ಲಿನ ಮಕ್ಕಳ ದಾಖಲಾತಿ ಸಂಖ್ಯೆ 100ಕ್ಕೆ ಹೆಚ್ಚಿಸುವ ಗುರಿಯಿದೆ. ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಶಾಲೆಯ ಮಾಹಿತಿ ಒದಗಿಸಲಾಗುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಂಸ್ಥೆ ಬೆಳೆಯುವುದರೊಂದಿಗೆ ಸಮಾಜಕ್ಕೆ ಬೆಳಕಾಗುವ ಕಾರ್ಯವನ್ನೂ ಮಾಡುತ್ತಿದೆ. ಇದೇ ಕಂಪನಿ ಯಶಸ್ಸಿನ ಗುಟ್ಟಾಗಿದೆ.

| ಅರುಣ್​ಕುಮಾರ್, ನವರತನ್ ಜ್ಯುವೆಲರ್ಸ್ ಉಪಾಧ್ಯಕ್ಷ

ಹಾಡಿ, ಕುಣಿದ ಮಕ್ಕಳು

ಮಕ್ಕಳಿಗಾಗಿ ಕುಣಿತ, ಹಾಡಿನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಂತರ ಹಬ್ಬದೂಟದ ವ್ಯವಸ್ಥೆ ಯನ್ನೂ ಮಾಡಲಾಗಿತ್ತು. ಮಕ್ಕಳ ಖುಷಿಗೆ ಪಾರವೇ ಇರಲಿಲ್ಲ. ಮೈ ಆಟೋಗ್ರಾಫ್ ಚಿತ್ರದ ‘ಅರಳುವ ಹೂವುಗಳೆ’ಮತ್ತು ವಿಘ್ನ ನಿವಾರಕ ವಿನಾಯಕನ ಕುರಿತಾದ ಹಾಡುಗಳನ್ನೂ ಮಕ್ಕಳು ಹಾಡಿ ಗಮನಸೆಳೆದರು. ಕಾರ್ಯಕ್ರಮದ ಕೊನೆಯಲ್ಲಿ ದಾನಿಗಳಿಗೆ ಮಕ್ಕಳು ಕೃತಜ್ಞತೆ ಅರ್ಪಿಸಿದ್ದು, ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

Leave a Reply

Your email address will not be published. Required fields are marked *